Search
  • Follow NativePlanet
Share
» »ಬೆಂಗಳೂರು ಸುತ್ತಮುತ್ತಲಿನ ಹತ್ತು ಟ್ರೆಕ್ಕಿಂಗ್ ತಾಣಗಳಿವು

ಬೆಂಗಳೂರು ಸುತ್ತಮುತ್ತಲಿನ ಹತ್ತು ಟ್ರೆಕ್ಕಿಂಗ್ ತಾಣಗಳಿವು

By Manjula Balaraj Tantry

ಪ್ರಯಾಣಿಕರಿಗೆ ತಂಗಲು ಉತ್ತಮವಾದ ನಗರಗಳಲ್ಲಿ ಬೆಂಗಳೂರು ಅತ್ಯುತ್ತಮವಾದಾಗಿದೆ. ಇದು ದೇಶದಾದ್ಯಂತ ಸ್ಥಳೀಯರು ಮತ್ತು ಪ್ರವಾಸಿಗರು ಇಷ್ಟ ಪಡುವ ಸ್ಥಳವೆನಿಸಿದೆ. ಇದೆಲ್ಲರ ಹೊರತಾಗಿಯೂ ಉದ್ಯಾನ ನಗರವು ಪಶ್ಚಿಮ ಘಟ್ಟಗಳ ಉತ್ತಮ ಪ್ರದೇಶವನ್ನು ಹೊಂದಿದೆ ಎಂದು ಒಪ್ಪಿಕೊಳ್ಳಬಹುದು. ಜೊತೆಗೆ, ಸುಂದರವಾದ ಮತ್ತು ಇನ್ನೂ ಸವಾಲುದಾಯಕ ಟ್ರೆಕ್ಕಿಂಗ್ ಪ್ರದೇಶಗಳಿಗಾಗಿ ಅಕ್ಕ ಪಕ್ಕದಲ್ಲಿ ಹುಡುಕಾಟ ನಡೆಸುವವರಿಗೆ ಮಾರ್ಗದರ್ಶನ ನೀಡುವಂತಹ ಸ್ಥಳಗಳಿಗೆ ಇಲ್ಲಿ ಕೊನೆಯೇ ಇಲ್ಲ.

ನೀವೆ ಎಲ್ಲಾ ಹಾದಿಗಳನ್ನೂ ಖುದ್ದಾಗಿ ತಾವೇ ಆಯ್ಕೆ ಮಾಡಿಕೊಕೊಳ್ಳಬಹುದು. ಇದಕ್ಕಾಗಿ ನೀವು ಕೆಲವು ಮುಖ್ಯವಾದ ಕ್ಯಾಂಪಿಂಗ್ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಇದು ಸಾಹಸ ಬಯಸುವ ಎಲ್ಲರಿಗೂ ಅನ್ವಯವಾಗುತ್ತದೆ. ಆದುದರಿಂದ ನಗರದ ಸುತ್ತ ಮುತ್ತಲಿರುವ ಈ ಸುಂದರವಾದ ಟ್ರಕ್ಕಿಂಗ್ ತಾಣಗಳಿಗಳಿಗೆ ನೀವು ಹೋಗಲು ರೆಡಿಯಾಗಬಹುದು.

ಕೊಪ್ಪಟ್ಟಿ ಬೆಟ್ಟ

ಕೊಪ್ಪಟ್ಟಿ ಬೆಟ್ಟ

PC: Leelavathy B.M

ಕೊಡಗಿನ ಕೊಪ್ಪಟ್ಟಿ ಬೆಟ್ಟಗಳ ತಪ್ಪಲು ತ್ವರಿತವಾಗಿ ಟ್ರಕ್ಕಿಂಗ್ ಮಾಡಬಹುದಾದ ಇನ್ನೊಂದು ತಾಣವಾಗಿದೆ. ಇಲ್ಲಿಗೆ ನೀವು ಮತ್ತು ನಿಮ್ಮ ಸ್ನೇಹಿತರೊಂದಿಗೆ ಸುಲಭವಾಗಿ ಹೋಗಬಹುದು ಏಕೆಂದರೆ ಇಲ್ಲಿ ನೀವು ಕ್ಯಾಂಪ್ ಮಾಡುವ ಅವಶ್ಯಕತೆ ಇರುವುದಿಲ್ಲ. ಮೂರು ಗಂಟೆಗಳ ಟ್ರೆಕ್ಕಿಂಗ್ ಮಾಡಿದ ನಂತರ ಈ ಬೆಟ್ಟದ ತುದಿಗೆ ತಲುಪಬಹುದಾಗಿದೆ. ಅದರ ಜೊತೆಗೆ ದಟ್ಟವಾದ ಹಸಿರು ಕಾಡುಗಳು ಮತ್ತು ಹುಲ್ಲುಗಾವಲಿನ ನೆಲವು ನಿಮ್ಮ ಸಮಯವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತದೆ.ಇಲ್ಲಿನ ಮಹಾ ವಿಷ್ಣು ದೇವಸ್ಥಾನದಿಂದ ಚಾರಣ ಆರಂಭವಾಗುತ್ತದೆ, ಇದು ಕೊಪಟ್ಟಿ ಬಸ್ ಸ್ಟಾಪಿನಿಂದ ಸಣ್ಣದಾದ ನಡಿಗೆಯ ದೂರದಲ್ಲಿದೆ. ಕೊಪಟ್ಟಿ ಬೆಂಗಳೂರಿನಿಂದ 290 ಕಿ.ಮೀ ದೂರದಲ್ಲಿದೆ

ಬಂಡಾಜೆ ಅರ್ಬಿ ಜಲಪಾತ

ಬಂಡಾಜೆ ಅರ್ಬಿ ಜಲಪಾತ

PC: Sumesh Always

ಬಂಡಾಜೆ ಅರ್ಬಿ ಜಲಪಾತ ಮತ್ತು ಬಲ್ಲಾಳರಾಯನ ದುರ್ಗಾ ಕೋಟೆಯ ಎರಡು ಚಾರಣವು ಎರಡು ಅದ್ಭುತಗಳೊಂದಿಗೆ ಒಂದು ನೋಟವನ್ನು ನೀಡುತ್ತದೆ. ಮೊದಲಿಗೆ ಜಲಪಾತ ಮತ್ತು ಎರಡನೆಯದು ಬಲ್ಲಾಳರಾಯನ ದುರ್ಗಾ. ಐತಿಹಾಸಿಕ ಕೋಟೆ ಈ ಎರಡು ಸ್ಥಳಗಳನ್ನು ಒಂದೇ ದಿನದಲ್ಲಿ ಭೇಟಿ ನೀಡಲು ಯೋಜಿಸಬಹುದು. ಆದರೆ ಚಾರಣಿಗರು ರಾತ್ರಿಯ ಹೊತ್ತಿನಲ್ಲಿ ಬಂಡಾಜೆ ಜಲಪಾತದಲ್ಲಿ ಶಿಬಿರ ಹೂಡ ಬಯಸುತ್ತಾರೆ ಮತ್ತು ಮರುದಿನ ಬಲ್ಲಾಳರಾಯನ ದುರ್ಗಾ ಕೋಟೆಗೆ ತೆರಳುತ್ತಾರೆ. ಇಲ್ಲಿ ಉಜಿರೆಯಿಂದ ಚಾರಣವು ಪ್ರಾರಂಭವಾಗುತ್ತದೆ ಅಲ್ಲಿಂದ ನೀವು ಗೌಡರ ಮನೆಗೆ ಹೋಗಬಹುದು ಮತ್ತು ಉಜಿರೆ ಬೆಂಗಳೂರಿನಿಂದ ಸುಮಾರು 308 ಕಿಮೀ ದೂರದಲ್ಲಿದೆ.

ಕೊಡಚಾದ್ರಿ

ಕೊಡಚಾದ್ರಿ

PC: Ashwin Kumar

ಕೊಡಚಾದ್ರಿಯ ಎತ್ತರವನ್ನು ಏರಲು ಇಷ್ಟಪಡುವವರಿಗೆ ಈ ಬೆಟ್ಟ ಹಲವಾರು ಸವಾಲನ್ನು ಮುಂದೊಡ್ಡುತ್ತದೆ. ಇದು ಒಂದು ಜಾಡು ಕರೆಕಟ್ಟೆಯಿಂದ ಪ್ರಾರಂಭವಾಗುತ್ತದೆ, ಇದು ತುಂಬಾ ಸರಳವಾಗಿದ್ದು ಹೆಚ್ಚು ಸುಂದರವಾದ ದೃಶ್ಯದ ಆರೋಹಣವನ್ನು ನೀಡುತ್ತದೆ. ಇನ್ನೊಂದು ಜಾಡು ಸಂಪಕಟ್ಟೆಯಿಂದ ಪ್ರಾರಂಭವಾಗುತ್ತದೆ. ಇದು ಏರಲು ತುಸು ಕಷ್ಟಕರ ಮತ್ತು ಇನ್ನೊಂದು ಮರಕುಟ್ಟಕದಿಂದ ನಿಮ್ಮನ್ನು ಹಿಡ್ಲುಮನೆ ಜಲಪಾತ ಮೂಲಕ ಕೊಂಡೊಯ್ಯುತ್ತದೆ ಈ ಚಾರಣವು ಕರೆಕಟ್ಟೆಯಿಂದ ಪ್ರಾರಂಭವಾಗುತ್ತದೆ ಇದು ಕೊಲ್ಲೂರು ನಿಟ್ಟೂರು ರಸ್ತೆಯಲ್ಲಿದೆ. ಕರೆಕಟ್ಟೆಯು ಬೆಂಗಳೂರಿನಿಂದ 497 ಕಿ.ಮೀ ದೂರದಲ್ಲಿದೆ.

ಕುಮಟಾದಿಂದ ಗೋಕರ್ಣ ಬೀಚ್

ಕುಮಟಾದಿಂದ ಗೋಕರ್ಣ ಬೀಚ್

PC: Sudhakarbichali

ಕುಮಟಾದಿಂದ ಗೋಕರ್ಣ ಬೀಚ್ ಗೆ ಚಾರಣವು ಬಹುಶಃ ಕರ್ನಾಟಕದ ಅತ್ಯಂತ ಗುಪ್ತ ಮತ್ತು ಸುಂದರ ಬೀಚ್ ಚಾರಣ ಮಾರ್ಗವಾಗಿದೆ. ಇದು ಪೂರ್ಣಗೊಳ್ಳಲು ಸುಮಾರು 10 ರಿಂದ 12 ಗಂಟೆಗಳ ಕಾಲ ಈ ತೆಗೆದುಕೊಳ್ಳುತ್ತದೆ. ಕುಮಟಾ ಬೀಚ್ ನಿಂದ ಯಾತ್ರೆ ಪ್ರಾರಂಭಿಸಬಹುದು ಮತ್ತು ಕಾಗಲ್ ಕೋಟೆಯ ನಂತರ ತಲುಪಬಹುದಾದ ಹೆವೆನ್ ಬೀಚ್ ನಲ್ಲಿ ರಾತ್ರಿ ತಂಗ ಬಹುದಾಗಿದೆ. ಗೋಕರ್ಣ ಬೀಚ್ ತಲುಪುವ ತನಕ ಅರೆಬಿಯನ್ ಸಮುದ್ರದ ಸೌಂದರ್ಯ ನಿಮಗೆ ಅಹ್ಲಾದತೆಯನ್ನು ನೀಡುತ್ತದೆ. ಬೆಂಗಳೂರಿನಿಂದ 470 ಕಿ.ಮೀ ದೂರದಲ್ಲಿರುವ ಕುಮಟಾಗೆ, ಬೆಂಗಳೂರಿನಿಂದ ಚಾಲ್ತಿಯಲ್ಲಿರುವ ಸಾಕಷ್ಟು ಬಸ್ಸುಗಳು ಚಾರಣದ ಸ್ಥಳದಿಂದ ಪ್ರಾರಂಭವಾಗುತ್ತವೆ.

ಎತ್ತಿನಾ ಭುಜ

ಎತ್ತಿನಾ ಭುಜ

PC: BHARATHESHA ALASANDEMAJALU

ಎತ್ತಿನಾ ಭುಜವು ಒಂದು ಸೌಮ್ಯವಾದ ಸವಾಲಿನ ಟ್ರೆಕ್ಕಿಂಗ್ ಸ್ಥಳವಾಗಿದೆ, ಕನ್ನಡದಲ್ಲಿ "ಎತ್ತು" ಎಂದರೆ 'ಆಕ್ಸ್' ಮತ್ತು 'ಭುಜ' ಅಂದರೆ ಭುಜ ಎಂಬುದಾಗಿದೆ . ಚಾರ್ಮಡಿ ಘಾಟ್ ನಲ್ಲಿರುವ ಈ ಚಾರಣ ಸ್ಥಳವು ಉದ್ಯಾನ ನಗರದಿಂದ ವಾರಾಂತ್ಯದಲ್ಲಿ ಹೋಗಬಹುದಾದ ಆರಂಭಿಕರಿಗಾಗಿ ಅದ್ಭುತ ಮಾರ್ಗವಾಗಿದೆ.ಶಿಶಿಲಾದಿಂದ ಈ ಟ್ರೆಕ್ ಪ್ರಾರಂಭವಾಗುತ್ತದೆ, ಇದು ಧರ್ಮಸ್ಥಳದಿಂದ ಕೊಕ್ಕಡಾನಕ್ಕೆ ಬಸ್ ಮೂಲಕ ಮತ್ತು ಅಲ್ಲಿಂದ ಜೀಪ್ ಮೂಲಕ ಹೊಲ್ಲೆಗುಂಡಿಗೆ ತಲುಪಬಹುದು. ಹೊಲೆಗುಂಡಿ ಬೆಂಗಳೂರಿನಿಂದ 290 ಕಿ.ಮೀ ದೂರದಲ್ಲಿದೆ.

ಮಾಕಳಿದುರ್ಗ

ಮಾಕಳಿದುರ್ಗ

PC: Sakeeb Sabakka

ಬೆಂಗಳೂರಿನಿಂದ ಅತ್ಯುತ್ತಮ ವಾರಾಂತ್ಯದ ಟ್ರೆಕ್ ಗಳಲ್ಲಿ ನೀವು ಮಾಕಳಿದುರ್ಗಕ್ಕೆ ಹೋಗಬಹುದು. ಮಾಕಳಿದುರ್ಗ ನಗರದಿಂದ 60 ಕಿ.ಮೀ ದೂರದಲ್ಲಿದೆ ಮತ್ತು ಈ ಅನುಭವವನ್ನು ನಿಜವಾಗಿಯೂ ಉಪಯುಕ್ತವೆಂದು ಪರಿಗಣಿಸುವ ಮಹತ್ವಾಕಾಂಕ್ಷೆಯ ಮತ್ತು ವೃತ್ತಿಪರ ಆರೋಹಿಗಳು ಭೇಟಿಕೊಡುತ್ತಾರೆ.ಗುಂಜಾರ್ ಸರೋವರದ ಹತ್ತಿರವಿರುವ ಶಿವನಿಗೆ ಸಮರ್ಪಿಸಲಾದ ದೇವಸ್ಥಾನದಲ್ಲಿ ಈ ಚಾರಣವು ಕೊನೆಗೊಳ್ಳುತ್ತದೆ. ಮಾಕಳಿದುರ್ಗ ರೈಲ್ವೆ ನಿಲ್ದಾಣಕ್ಕೆ ಸಮೀಪದಲ್ಲಿರುವ ದೊಡ್ಡಬಳ್ಳಾಪುರದಿಂದ ಚಾರಣ ಆರಂಭವಾಗುತ್ತದೆ

ಅಮೇಡಿಕಲ್ಲು

ಅಮೇಡಿಕಲ್ಲು

PC: sanchantr

ನಿಮ್ಮ ಚಾರಣದ ವೃತ್ತಿಪರ ಅನುಭವಕ್ಕೆ ಇನ್ನಷ್ಟು ರೋಮಾಂಚನಕಾರಿ ಅನುಭವವನ್ನು ಸೇರಿಸಬೇಕೆಂದರೆ ಅಮೇಡಿಕಲ್ಲುಗೆ ಭೇಟಿ ನೀಡಬಹುದು. ಇಲ್ಲಿನ ಚಾರಣ ಈ ಭಾಗ ಸವಾಲಿನದ್ದಾಗಿದ್ದು, ಕೆಲವೇ ಕೆಲವು ಮೆಟ್ಟಲುಗಳಿದ್ದರೂ, ಅದು ಮಳೆಗಾಲದ ವೇಳೆ ಜಾರುವ ಸ್ಥಿತಿಯಲ್ಲಿರುತ್ತದೆ. ಶಿಶಿಲಾದಿಂದ ಆರಂಭವಾಗುವ ಈ ಚಾರಣದ ಜಾಗಕ್ಕೆ ತಲುಪಲು ಬೆಂಗಳೂರಿನಿಂದ ಬಸ್ ಹಿಡಿಯಬಹುದು ಮತ್ತು ಅಲ್ಲಿಂದ ಜೀಪ್ ಮೂಲಕ ಕೊಂಬರು ತಲುಪಬಹುದು. ಶಿಶಿಲಾ ಬೆಂಗಳೂರಿನಿಂದ 370 ಕಿ,ಮೀ ದೂರದಲ್ಲಿದೆ.

ಬಿಳಿಕಲ್ ರಂಗಸ್ವಾಮಿ

ಬಿಳಿಕಲ್ ರಂಗಸ್ವಾಮಿ

PC: Unknown

ಬಿಳಿಕಲ್ ರಂಗಸ್ವಾಮಿ ಬೆಟ್ಟ ಅಥವಾ ಬಿ ಆರ್ ಹಿಲ್ಸ್ ವಾರಾಂತ್ಯಕ್ಕೆ ಮುದನೀಡಬಹುದಾದ ತಾಣವಾಗಿದೆ. ನಗರದಿಂದ ಅರವತ್ತು ಕಿಲೋಮೀಟರ್ ದೂರದಲ್ಲಿರುವ ಈ ಬೆಟ್ಟವನ್ನು ಏರುತ್ತಾ ಪುರಾತನ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಬಹುದು, ಇದನ್ನು ಬೆಟ್ಟ ಏರಿದ ಮೇಲೆ ಚಾರಣಿಗರು ದರ್ಶನ ಮಾಡಬಹುದು. ಕೊನ್ನಾಲ ದೊಡ್ಡಿಯ ಮಾರುತಿ ದೇವಾಲಯದಿಂದ ಈ ಟ್ರೆಕ್ಕಿಂಗ್ ಆರಂಭವಾಗುತ್ತದೆ, ಇದು ಕನಕಪುರದಿಂದ ತೀರಾ ಹತ್ತಿರದಲ್ಲಿದೆ.

ಮುಳ್ಳಯ್ಯನಗಿರಿ

ಮುಳ್ಳಯ್ಯನಗಿರಿ

PC: Riju K

ಸಾಹಸಪ್ರಿಯರು ಅತ್ಯುತ್ತಮವಾದ ಚಾರಣಕ್ಕೆ ಸ್ಥಳವನ್ನು ಹುಡುಕುತ್ತಿದ್ದರೆ ಬೆಂಗಳೂರು ಬಳಿಯಿರುವ ಮುಳ್ಳಯ್ಯನಗಿರಿ ಸೂಕ್ತ ಆಯ್ಕೆ. ಇದು ಅತಿಎತ್ತರದ ಕರ್ನಾಟಕದ ಬೆಟ್ಟಗಳಲ್ಲೊಂದು ಎಂದು ಗುರುತಿಸಲ್ಪಡುತ್ತದೆ. ಇಲ್ಲಿಗೆ ತಲುಪಬೇಕಾದ ರಸ್ತೆಗಳು ಅಲ್ಲಲ್ಲಿ ತೇಪೆಹಾಕಿದ್ದರೂ, ಇಲ್ಲಿಗೆ ತಲುಪುವುದಕ್ಕೆ ಹೋಗುವ ಜಾಗಗಳು ಚಿಕ್ಕಮಗಳೂರಿನ ಉಸಿರಿಬಿಗಿಹಿಡಿದು ಸಾಗುವಂತಹ ದೃಶ್ಯಾವಳಿಯನ್ನು ಹೊಂದಿದೆ. ಇಲ್ಲಿಗೆ ಟ್ರೆಕ್ಕಿಂಗ್ ಶರಪಾದ್ರಿ ಎನ್ನುವ ಸ್ಥಳದಿಂದ ಆರಂಭವಾಗುತ್ತದೆ, ಇದು ಬೆಂಗಳೂರಿನಿಂದ 267 ಕಿ.ಮೀ ದೂರದಲ್ಲಿದೆ.

ತಡಿಯಂದಮೋಲ್

ತಡಿಯಂದಮೋಲ್

PC: Jyotirmoy

5740 ಅಡಿ ಎತ್ತರದಲ್ಲಿರುವ ತಡಿಯಂದಮೋಲ್ ಕೊಡಗಿನ ಅತ್ಯಂತ ಎತ್ತರದ ಬೆಟ್ಟಗಳಲ್ಲೊಂದು, ಇದಿ ಚಾರಣಿಗರ ಪಾಲಿಗೆ ಸ್ವರ್ಗದಂತಿದ್ದು, ಬೆಂಗಳೂರಿನಿಂದ ತುರ್ತು ಭೇಟಿ ಮತ್ತು ಸುಧೀರ್ಘ ವಾರಾಂತ್ಯ ಕಳೆಯಬಯಸುವವರಿಗೆ ಹೇಳಿ ಮಾಡಿಸಿದ ಜಾಗದಂತಿದೆ. ಬೆಟ್ಟದ ತುದಿಯನ್ನು ಒಂದು ದಿನದಲ್ಲಿ ನಿರಾಯಾಸವಾಗಿ ಏರಿ ಇಳಿಯಬಹುದಾದರೂ, ಬೆಟ್ಟದ ತುದಿಯಲ್ಲಿ ತಂಗುವುದು ಸೂಕ್ತ. ಈ ಚಾರಣ ಕಕ್ಕಬೆ ಎನ್ನುವ ಸ್ಥಳದಿಂದ ಆರಂಭವಾಗುತ್ತದೆ, ಇದು ಮಡಿಕೇರಿಗೆ ಸಮೀಪದಲ್ಲಿದೆ. ಕಕ್ಕಬೆ ಬೆಂಗಳೂರಿನಿಂದ 266 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X