• Follow NativePlanet
Share
Menu
» »ಗೋವಾದ ಪ್ರಸಿದ್ಧವಾದ ಆಹಾರಗಳು ಆಹಾ........

ಗೋವಾದ ಪ್ರಸಿದ್ಧವಾದ ಆಹಾರಗಳು ಆಹಾ........

Written By:

ಗೋವಾ ರಾಜ್ಯದ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿಯನ್ನು ಪಡೆದಿರುವಿರಿ. ಸಾಮಾನ್ಯವಾಗಿ ಯುವಕರಿಗೆ ಅಲ್ಲದೇ ವಯಸ್ಸಾದವರಿಗೂ ಅತ್ಯಂತ ಇಷ್ಟವಾದ ಸ್ಥಳ ಎಂದರೆ ಅದು ಗೋವಾ. ಇಲ್ಲಿ ಹಲವಾರು ಬೀಚ್‍ಗಳು, ಸಮುದ್ರದ ಆಟಗಳನ್ನು ಆನಂದಿಸಬಹುದು. ಹಾಗೆಯೇ ದೊಡ್ಡ ದೊಡ್ಡ ಕಟ್ಟಡಗಳು, ಕೋಟೆಗಳು, ಪಾರ್ಟಿ ಹಾಲ್‍ಗಳು, ಹೋಟೆಲ್‍ಗಳು ಇವೆಲ್ಲಾ ಗೋವಾದ ವೈಭವ.

ಒಂದೊಂದು ಪ್ರದೇಶಕ್ಕೆ ಒಂದೊಂದು ಆಹಾರ ಪದ್ಧತಿಗಳು ರೂಢಿಯಲ್ಲಿವೆ. ಅವುಗಳಲ್ಲಿ ನಮ್ಮ ದಕ್ಷಿಣ ಭಾರತ ದೇಶದ ಆಹಾರ ತಿನಿಸುಗಳೇ ವಿಭಿನ್ನವಾದುದು. ಹಾಗೆಯೇ ಉತ್ತರ ಭಾರತದ ಆಹಾರ ಪದ್ಧತಿಗಳೇ ವಿಭಿನ್ನವಾದುದು. ಹಾಗೆಯೇ ಗೋವಾದಲ್ಲಿನ ಪ್ರಸಿದ್ಧವಾದ ತಿನಿಸುಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡುತ್ತಿದ್ದೇನೆ.

ಗೋವಾಗೆ ಮೋಜಿಗಾಗಿ ಭೇಟಿ ನೀಡಿರುತ್ತಿರಾ ಆದರೆ ಗೋವಾದ ವಿಶೇಷವಾದ ಆಹಾರಗಳನ್ನು ಎಂದಾದರೂ ತಿಂದಿದ್ದೀರಾ?. ಗೋವಾ ಆಹಾರ ಪದ್ಧತಿಯು ಪೋರ್ಚುಗೀಸರ ಆಹಾರದೊಂದಿಗೆ ಹೋಲಿಕೆಯಾಗುತ್ತದೆ. ಇಲ್ಲಿ ಪೋರ್ಚುಗೀಸರ ನಿವಾಸಿಗಳು ಸುಮಾರು 450 ವರ್ಷಗಳ ಕಾಲ ಗೋವಾದಲ್ಲಿ ವಾಸಿಸುತ್ತಿದ್ದರು. ಹಾಗಾದರೆ ಗೋವಾದ ಪ್ರಸಿದ್ಧವಾದ ತಿನಿಸುಗಳಾದರು ಯಾವುವು ಎಂಬುದುನ್ನು ಇಲ್ಲಿ ತಿಳಿಯಿರಿ.

ಗೋವಾ ಫಿಶ್ ಕರ್ರಿ

ಗೋವಾ ಫಿಶ್ ಕರ್ರಿ

ಗೋವಾದಲ್ಲಿ ಫಿಶ್ ಕರ್ರಿ ಅತ್ಯಂತ ಪ್ರಸಿದ್ಧವಾದ ಆಹಾರವಾಗಿದೆ. ಸಮುದ್ರ ಆಹಾರ ಇಷ್ಟ ಪಡುವವರು ಈ ಆಹಾರವನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ. ಗೋವಾದ ಹಲವಾರು ಹೋಟೆಲ್‍ಗಳಲ್ಲಿ ಈ ಆಹಾರವನ್ನು ರುಚಿ ರುಚಿಯಾಗಿ ತಯಾರಿಸುತ್ತಾರೆ.

ಗೋವಾ ಪ್ರಾನ್ ಕರ್ರಿ

ಗೋವಾ ಪ್ರಾನ್ ಕರ್ರಿ

ಈ ಸ್ವಾಧಿಷ್ಟವಾದ ಆಹಾರವು ಶುದ್ಧವಾದ ತೆಂಗಿನಕಾಯಿ ಹಾಲಿನ್ನು ಬಳಸಿ ಈ ರುಚಿಕರವಾದ ಆಹಾರವನ್ನು ತಯಾರು ಮಾಡುತ್ತಾರೆ. ಈ ರುಚಿಯಾದ ಆಹಾರವನ್ನು ಗೋವಾದಲ್ಲಿನ ಹಲವಾರು ಪ್ರವಾಸಿಗರ ಫೆವ್‍ರೆಟ್ ಆಗಿದೆ.

ಫಿಶ್ ರೆಚೆಡೋ

ಫಿಶ್ ರೆಚೆಡೋ

ಪೋರ್ಚುಗೀಸ್ ಭಾಷೆಯಲ್ಲಿ "ರೆಚೆಡೋ" ಎಂದರೆ ಸ್ಟಫ್ರ್ಡ್ ಎಂದರ್ಥ. ಮೀನನ್ನು ಗರಿ ಗರಿಯಾಗಿ ಮತ್ತು ಸುವರ್ಣ ಕಂದು ಬಣ್ಣದ ಈರುಳ್ಳಿಯೊಂದಿಗೆ ನೀಡುವ ಫಿಶ್ ರೆಚೆಡೋ ಆಹಾ.....ಅತ್ಯಂತ ಸ್ವಾಧಿಷ್ಟವಾದ ಆಹಾರ ಇದಾಗಿದೆ. ಇದೊಂದು ಪೋರ್ಚುಗೀಸರ ಆಹಾರವಾಗಿದೆ. ಗೋವಾದಲ್ಲಿನ ಪ್ರಸಿದ್ಧವಾದ ಆಹಾರಗಳಲ್ಲಿ ಇದು ಕೂಡ ಒಂದು.

ಬೆಂಬಿಂಕ

ಬೆಂಬಿಂಕ

ಈ ಬೆಂಬಿಕ ಎಂಬುದು ಗೋವಾದ ಪ್ರಸಿದ್ಧವಾದ ಸಿಹಿ ತಿನಿಸು ಆಗಿದೆ. ಇದನ್ನು ತೆಂಗಿನ ಕಾಯಿಯ ಹಾಲು, ಮೊಟ್ಟೆ, ಬೆಣ್ಣೆಯನ್ನು ಬಳಸಿ ತಯಾರಿಸಲಾಗುತ್ತದೆ. ಇದೊಂದು ಕೇಕ್, ಈ ಕೇಕ್ ತಿನ್ನುವ ಪ್ರತಿ ಸಲವು ರೋಮಾಂಚನಕಾರಿಯಾಗಿರುತ್ತದೆ. ಇದು ಗೋವಾದ ಅತ್ಯಂತ ಸ್ವಾಧಿಷ್ಟವಾದ ಸಿಹಿ ತಿನಿಸು ಇದಾಗಿದೆ.

ಹಂದಿ ತಿನಿಸು

ಹಂದಿ ತಿನಿಸು

ಹಂದಿಯೇ ಎಂದು ಆಶ್ಚರ್ಯ ಪಡಬೇಡಿ. ಹಂದಿ ತಿನ್ನುವವರಿಗೆ ಮಾತ್ರ ಈ ಆಹಾರ. ಇದು ಗೋವಾದ ಅತ್ಯಂತ ರುಚಿಕರವಾದ ಹಾಗು ಪ್ರಸಿದ್ಧವಾದ ಆಹಾರವಾಗಿದೆ. ಹಲವಾರು ಸಂಬಾರು ಪರ್ದಾಥಗಳನ್ನು ಬೆರಸಿ ರುಚಿಯಾದ ಹಂದಿ ಮಾಂಸದ ಆಹಾರವನ್ನು ತಯಾರು ಮಾಡುತ್ತಾರೆ.

ರವಾ ಫ್ರೈಡ್ ಫಿಶ್

ರವಾ ಫ್ರೈಡ್ ಫಿಶ್

ಸಾಮಾನ್ಯವಾಗಿ ಒಂದೊಂದು ಭಾಗದಲ್ಲಿ ಮೀನಿನ ಆಹಾರವನ್ನು ಒಂದೊಂದು ರೀತಿಯಾಗಿ ತಯಾರು ಮಾಡುತ್ತಾರೆ. ಹಾಗೆಯೇ ಗೋವಾದಲ್ಲಿಯೂ ಕೂಡ ವಿಧ ವಿಧವಾದ ಮೀನಿನ ತಿನಿಸುಗಳನ್ನು ಮಾಡುತ್ತಾರೆ. ಅದರಲ್ಲಿ ಈ ರವಾ ಫ್ರೈಡ್ ಫಿಶ್ ಫೆಮಸ್.

ಚಿಕನ್ ಕ್ಸುಕುಟಿ

ಚಿಕನ್ ಕ್ಸುಕುಟಿ

ಇದೊಂದು ರುಚಿಯಾದ ಗೋವಾದ ಆಹಾರವಾಗಿದ್ದು, ರೋಟಿಯೊಂದಿಗೆ ಸೇವಿಸಲು ಪ್ರವಾಸಿಗರು ಬಯಸುತ್ತಾರೆ. ಗೋವಾದ ಸ್ಪೇಷಲ್ ಎಂದೇ ಹೇಳಲಾಗುವ ಈ ಆಹಾರ ಎಲ್ಲರ ಅಚ್ಚು-ಮೆಚ್ಚು.

ಚಿಕನ್ ಕೆಫೆರಿಯಲ್

ಚಿಕನ್ ಕೆಫೆರಿಯಲ್

ಈ ಗೋವಾದ ರುಚಿಯಾದ ಆಹಾರ ಪೋರ್ಚುಗೀಸರ ವಸಾಹತು ಪ್ರದೇಶದಲ್ಲಿ ಹುಟ್ಟಿಕೊಂಡಿತು. ಹಾಗಾಗಿಯೇ ಈ ಆಹಾರಕ್ಕೆ ಪೋರ್ಚುಗೀಸರ ಹೆಸರನ್ನೆ ಇಡಲಾಗಿದೆ. ಇದೊಂದು ಗೋವಾದ ಸ್ವಾಧಿಷ್ಟವಾದ ಆಹಾರಗಳಲ್ಲಿ ಒಂದಾಗಿದೆ.

ಪೋರ್ಕ್ ಸೊರ್ಪೋಟೆಲ್

ಪೋರ್ಕ್ ಸೊರ್ಪೋಟೆಲ್

ಇದು ಕೂಡ ಹಂದಿಯಿಂದ ತಯಾರಿಸಿದ ಆಹಾರವಾಗಿದೆ. ಈ ಆಹಾರವು ಪೋರ್ಚುಗೀಸರದ್ದಾಗಿದ್ದು, ಕ್ರಿಸ್ ಮಸ್ ಹಬ್ಬದಿನ ಗೋವಾದ ಪ್ರತಿಯೊಂದು ಕ್ಯಾಥೊಲಿಕ್ ಕುಟುಂಬದವರು ಕೂಡ ತಯಾರಿಸುತ್ತಾರೆ.

ಗೋವಾ ನೆವ್ರಿ

ಗೋವಾ ನೆವ್ರಿ

ಇದು ಗೋವಾದ ಪ್ರಸಿದ್ಧವಾದ ಸಿಹಿ ತಿನಿಸು ಆಗಿದೆ. ಸಾಮಾನ್ಯವಾಗಿ ಇದನ್ನು ಕರಣಿ ಎಂದು ಕರೆಯುತ್ತಾರೆ. ಈ ರುವಿಯಾದ ಆಹಾರವನ್ನು ಗಣೇಶ ಚತುರ್ಥಿಯಂದು ಮತ್ತು ದೀಪಾವಳಿ ಉತ್ಸವದಂದು ತಯಾರಿಸುತ್ತಾರೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ