ಸಿಬ್ಸಾಗರ್ ಸರೋವರದ ಪಕ್ಕದಲ್ಲಿರುವ ಶಿವನ ಈ ದೇವಾಲಯವು ಭಾರತದಲ್ಲಿನ ಅತ್ಯಂತ ಎತ್ತರವಾದ ಶಿವನ ದೇವಾಲಯವಾಗಿದೆ. ಇದನ್ನು 1734 ರಲ್ಲಿ ಅಹೋಮರ ರಾಜ ಸ್ವರ್ಗದೇವ್ ಸಿಬಾ ಸೀಂಘನ ಪತ್ನಿ ಬಾರ್ ರಾಜ ಅಂಬಿಕಾ ನಿರ್ಮಿಸಿದಳು. ಸುಮಾರು 195 ಅಡಿ ಎತ್ತರವಿರುವ ಈ ದೇವಾಲಯ ಭಾರತದಲ್ಲಿನ ಅತ್ಯಂತ ಎತ್ತರವಾದ ಶಿವನ ದೇವಾಲಯ ಎಂದು ಹೆಸರುವಾಸಿಯಾಗಿದೆ. ಈ ದೇವಾಲಯದ ಮೇಲ್ಭಾಗದಲ್ಲಿ ಚಿನ್ನದ ಕವಚ ಇದೆ. ಇದು ಅಹೋಮರ ಉತ್ಕೃಷ್ಟ ವಾಸ್ತುಶಿಲ್ಪಕ್ಕ್ಕೆ ಉದಾಹರಣೆಯಾಗಿದೆ.
ಈ ದೇವಾಲಯವು ಶಿವರಾತ್ರಿಯ ಸಂದರ್ಭದಲ್ಲಿ ಹೆಚ್ಚಿನ ಪ್ರವಾಸಿಗಳನ್ನು ಆಕರ್ಷಿಸುತ್ತದೆ. ಪ್ರತಿ ವರ್ಷ ದೊಡ್ಡ ಮೇಳವನ್ನು ಇಲ್ಲಿ ಆಯೋಜಿಸಲಾಗುತ್ತದೆ. ಶಿವಡೋಲ್ ಜೊತೆಗೆ ವಿಷ್ಣುಡೋಲ್ ಮತ್ತು ದೇವಿ ಡೋಲ್ ಕೂಡ ಪ್ರಸಿದ್ಧ ದೇವಾಲಯಗಳಾಗಿವೆ. ಇಲ್ಲೇ ಸಮೀಪದಲ್ಲಿ ಪುರಾತನ ತೋಪುಗಳನ್ನು ನಾವು ಕಾಣಬಹುದಾಗಿದೆ.


Click it and Unblock the Notifications