ಶಿವಗಂಗೆ – ಅದ್ಭುತ ಶಿಲಾ ಪರ್ವತಗಳಿರುವ ವಿಹಾರತಾಣ.

ಶಿವಗಂಗೆ ಚಾರಣಕ್ಕೆ ಅತ್ಯುತ್ತಮ ತಾಣವಾಗಿದ್ದು, ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿದೆ. ಇದು ಒಂದು ದಿನದ ವಿಹಾರಕ್ಕೆ ಹೇಳಿ ಮಾಡಿಸಿದ ಸ್ಥಳ.

 

ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಾಣ.

ಶಿವಗಂಗೆ ಮೂಲತಃ ಒಂದು ಸಣ್ಣ ಗುಡ್ಡ. ಈ ಗುಡ್ಡದಲ್ಲಿರುವ ಶಿವನ ದೇವಾಲಯದಿಂದ ಇದಕ್ಕೆ ಶಿವಗಂಗೆ ಎಂಬ ಹೆಸರು ಬಂದಿತು. ಹಾಗು ಇಲ್ಲಿ ಒಂದು ನೀರಿನ ಬುಗ್ಗೆ ಇದ್ದು ಅದು ಈ ಸ್ಥಳದ ಸೊಬಗನ್ನು ಇಮ್ಮಡಿಗೊಳಿಸುತ್ತಿದೆ.  ಸ್ಥಳೀಯರ ಪ್ರಕಾರ ಈ ನೀರಿನ ಬುಗ್ಗೆಯು ಪವಿತ್ರ ಗಂಗೆಯ ಒಂದು ಉಪಶಾಖೆಯಾಗಿದೆಯೆಂದು, ಆ ಕಾರಣದಿಂದ ಈ ಸ್ಥಳಕ್ಕೆ ಶಿವಗಂಗೆ ಎಂಬ  ಹೆಸರು ಬಂದಿತಂತೆ. ಈ ಗುಡ್ಡದ ಮೇಲಿರುವ ಶಿವನ ದೇವಾಲಯದಿಂದ ಶಿವಗಂಗೆ ದಕ್ಷಿಣ ಕಾಶಿ ಎಂಬ ಅಡ್ಡಹೆಸರು ಪಡೆದಿದೆ.

ಶಿವಗಂಗೆಯಲ್ಲಿ ನೋಡಬೇಕಾಗಿರುವ ಪ್ರಸಿದ್ಧ ಸ್ಥಳಗಳಲ್ಲಿ ಪ್ರಾಚೀನ ಗಂಗಾಧರೇಶ್ವರ ದೇವಾಲಯವು ಒಂದು. ಇಲ್ಲಿನ ದಂತಕತೆಗಳ ಪ್ರಕಾರ ಈ ದೇವಾಲಯದಿಂದ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯಕ್ಕೆ ರಹಸ್ಯ ಸುರಂಗ ಮಾರ್ಗ ಸಂಪರ್ಕವಿದೆಯಂತೆ. ಇದನ್ನು ಇದುವರೆಗು ಯಾರು ಪರಿಶೋಧಿಸಿಲ್ಲ. ಇದೆ ಸ್ಥಳದಲ್ಲಿ ಪಾತಾಳ ಗಂಗಾ ದೇವಾಲಯವಿದ್ದು ಇಲ್ಲಿ ಅಚ್ಚರಿ ಎಂಬಂತೆ ನೀರಿನ ಬುಗ್ಗೆ ರಭಸದಿಂದ ಹೊರಗೆ ಬರುತ್ತದೆ ಹಾಗು ಇಲ್ಲಿನ ನೀರಿನ ಮಟ್ಟ ನಿರಂತರವಾಗಿ ಬದಲಾಗುತ್ತಲೆ ಇರುತ್ತದೆ.

ಈ ಗುಡ್ಡದಲ್ಲಿ ದೊಡ್ಡ ದೊಡ್ಡ ಕಲ್ಲು ಬಂಡೆಗಳಿದ್ದು ಸಾಹಸಿ ಮನೋಭಾವವಿರುವವರಿಗೆ ಶಿಲಾರೋಹಣದ ಅವಕಾಶವನ್ನು ಒದಗಿಸುತ್ತದೆ.

ದಾಬಸ್ ಪೇಟೆಯು  ಶಿವಗಂಗೆಗೆ ಸಮೀಪದ ಮುಖ್ಯ ಪಟ್ಟಣವಾಗಿದೆ. ಅದು ಇಲ್ಲಿಂದ 8 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಬರುವ ಯಾತ್ರಿಕರು ಬಸ್ಸಿನಲ್ಲಿ ತುಮಕೂರು ತಲುಪಿ ಅಲ್ಲಿಂದ ದಾಬಸ್ ಪೇಟೆಗೆ ಮತ್ತೊಂದು ಬಸ್ ಹಿಡಿದು ಹೋಗಬೇಕು. ದಾಬಸ್ ಪೇಟೆಯಿಂದ ಶಿವಗಂಗೆಗೆ ಖಾಸಗಿ ಬಸ್ಸುಗಳು ನಿರಂತರವಾಗಿ ಹೋಗಿ ಬರುತ್ತಿರುತ್ತವೆ.

Please Wait while comments are loading...