ಪಾತಾಳ ಗಂಗೆ ಶಿವಗಂಗೆಯ ಎರಡು ಏಕಶಿಲಾ ಬಂಡೆಗಳ ನಡುವೆ ಇರುವ ನೀರಿನ ಸೆಲೆಯಾಗಿದ್ದು, ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿದೆ. ಪಾತಾಳ ಗಂಗೆಯೆಂದರೆ ’ ಭೂಮಿಯ ತಳದಲ್ಲಿ ಹರಿಯುವ ಗಂಗಾನದಿ’ ಎಂದು ಅರ್ಥ. ನಂಬಿಕೆಯೊಂದರ ಪ್ರಕಾರ ಇದಕ್ಕೆ ಈ ಹೆಸರು ಬರಲು ಕಾರಣವೇನೆಂದರೆ, ಇದು ಹಿಂದುಗಳ ಪವಿತ್ರ ನದಿಯಾದ ಗಂಗಾನದಿಯ ನೀರಾಗಿದ್ದು, ಅದೇ ನೀರು ಇಲ್ಲಿ ಬುಗ್ಗೆಯಾಗಿ ಹರಿಯುತ್ತದೆಯಂತೆ.ಇಲ್ಲಿನ ನೀರಿನ ಸೆಲೆಯ ಮಟ್ಟವು ದಿನದ ವಿವಿಧ ಸಮಯದಲ್ಲಿ ಬೇರೆ ಬೇರೆಯಾಗಿರುತ್ತದೆ. ದಂತಕಥೆಗಳ ಪ್ರಕಾರ, ಈ ನೀರಿನ ಸೆಲೆಯು ಕೋಲಾರದಲ್ಲಿರುವ ಅಂತರಗಂಗೆಯೊಂದಿಗೆ ಸಂಪರ್ಕ ಹೊಂದಿದೆಯಂತೆ. ಇದು ಮೂಲಗಂಗೆಯಂತೆ ಅತಿ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ.