ಶಿಲ್ಲಾಂಗ್ ನ ಸೌಂದರ್ಯವು ಇಲ್ಲಿರುವ ಭವ್ಯ ಮತ್ತು ಸುಂದರವಾದ ಕ್ಯಾಥೆಡ್ರಲ್ ಕ್ಯಾಥೋಲಿಕ್ ಚರ್ಚ್ ನ ಮೂಲಕ ಉದಾಹರಣೀಯವಾಗಿದೆ. ಮೊದಲು, 'ಕ್ಯಾಥೆಡ್ರಲ್ ಆಫ್ ಮೇರಿ ಹೆಲ್ಪ್ ಆಫ್ ಕ್ರಿಶ್ಚಿಯನ್ಸ್' ಕರೆಯಲ್ಪಡುತ್ತಿದ್ದ ಇದು, 'ಭಾರತದ ಪೂರ್ವ ಸ್ಕಾಟ್ಲೆಂಡ್' ನ ಅಸಂಖ್ಯಾತ ಪ್ರವಾಸಿ ಸಂದರ್ಶಿತ ತಾಣವಾಗಿದೆ. ಸುಮಾರು 3,00,000 ಕ್ಕಿಂತಲೂ ಹೆಚ್ಚಿನ ಕ್ಯಾಥೊಲಿಕ್ ಗಳು ಇಲ್ಲಿ ತಮ್ಮ ಗೌರವಪೂರ್ವಕ ನಮನ ಸಲ್ಲಿಸುತ್ತಾರೆ. ಇದು, ಇಲ್ಲಿನ ಪವಿತ್ರ ವಾತಾವರಣ ಮತ್ತು ಕಟ್ಟಡದ ರಚನಾತ್ಮಕ ಕೌಶಲ್ಯಕ್ಕೆ ಹೆಸರುವಾಸಿ. ಇಲ್ಲಿ ಶಿಲುಬೆಯ 14 ನಿಲ್ದಾಣಗಳಿದ್ದು, ಅವುಗಳನ್ನು ಕ್ರಿಸ್ತನ ಕಥೆಗಳೊಂದಿಗೆ ಚಿತ್ರಿಸಿದ್ದಾರೆ. ಇಲ್ಲಿನ ಕಿಟಕಿಯ ಗಾಜುಗಳನ್ನು ಸಹ ಅಸಂಖ್ಯಾತ ಬಣ್ಣಗಳಿಂದ ಚಿತ್ರಿಸಿದ್ದಾರೆ. ಕ್ಯಾಥೆಡ್ರಲ್ ನ ಮೇಲ್ಭಾಗದಿಂದ ವೀಕ್ಷಿಸಿದಾಗ, ಈ ಚರ್ಚ್ ಒಂದು ಶಿಲುಭೆಯಂತೆ ಗೋಚರಿಸುತ್ತದೆ. ಚರ್ಚ್ ನತ್ತ ಒಯ್ಯುವ ಎರಡು ಮಹಡಿಗಳಿದ್ದು, ಸುತ್ತಮುತ್ತಲ ವೈಭವಕ್ಕೆ, ಮತ್ತಷ್ಟು ಮೆರುಗು ನೀಡುತ್ತವೆ.
ಕ್ಯಾಥೆಡ್ರಲ್ ಪ್ರತೀ ಬುಧವಾರ ಮತ್ತು ರವಿವಾರದಂದು ಸೇವೆಯನ್ನು ಆಯೋಜಿಸುತ್ತದೆ. ಸೇವೆಯು ಆಂಗ್ಲ ಮತ್ತು ಸ್ಥಳೀಯ ಖಾಸಿ ಭಾಷೆಗಳೆರಡರಲ್ಲಿಯೂ ಆಯೋಜಿಸಲ್ಪಡುತ್ತದೆ. 1980 ರಲ್ಲಿ, ಇಲ್ಲಿನ ಶತಮಾನೋತ್ಸವ ಸಂದರ್ಭದಲ್ಲಿ, ಆಗಿನ ಆರ್ಚ್ ಬಿಷಪ್ ದಿ. ವಂದನೀಯ ಹ್ಯೂಬರ್ಟ್ ಡಿ ರೊಸಾರಿಯೊರವರು, ಕ್ಯಾಥೆಡ್ರಲ್ ಆಫ್ ಮೇರಿ ಹೆಲ್ಪ್ ಆಫ್ ಕ್ರಿಶ್ಚಿಯನ್ಸ್ ಅನ್ನು ಯಾತ್ರಾಸ್ಥಳ ಎಂದು ಘೋಶಿಸಿದರು. ಕ್ಯಾಥೆಡ್ರಲ್ ಗೆ ಎದುರಾಗಿ, ಶಿಷ್ಯರೊಂದಿಗಿನ ಏಸು ಕ್ರಿಸ್ತನ ತೆರೆದ ಪ್ರತಿಮೆಯಿದೆ. ನಗರದಲ್ಲಿ ಮಿಷನರಿ ಮತ್ತು ಕ್ರಿಶ್ಚಿಯನ್ ನ ಶಕ್ತಿಯುತ ಪ್ರಭಾವವನ್ನು ನೆನಪಿಸುವ ರೀತಿಯಲ್ಲಿ ಈ ಕ್ಯಾಥೆಡ್ರಲ್ ಇದೆ.


Click it and Unblock the Notifications