ಪಬ್ಬರ‍್ ಕಣಿವೆಯು, ವಿವಿಧ ಸಾಹಸಿ ಕ್ರೀಡೆಗಳಿಗೆ ಹೇಳಿ ಮಾಡಿಸಿದ ತಾಣ. ಚಾರಣ, ಸ್ಕೀಯಿಂಗ್, ಕ್ಯಾಂಪಿಂಗ್, ಪ್ಯಾರಾಗ್ಲೈಡಿಂಗ್ ಮತ್ತು ಹ್ಯಾಂಡ್‌ಗ್ಲೈಡಿಂಗ್‌ನಂತಹ ಸಾಹಸವನ್ನು ಇಲ್ಲಿ ಮಾಡಬಹುದು. ಪಬ್ಬರ‍್ ನದಿಯ ದಡದಲ್ಲಿ ಕಣಿವೆಯಿದೆ. ಈ ನದಿ ಮೀನುಗಾರಿಕೆಗೆ ಅತ್ಯಂತ ಪ್ರಸಿದ್ಧ. ಅಕ್ಟೋಬರಿನಿಂದ ಏಪ್ರಿಲ್‌ನ ಅವಧಿಯಲ್ಲಿ ಮೀನು ಹಿಡಿಯುವ ಕೆಲಸ ಖುಷಿ ನೀಡುತ್ತದೆ.
ಕೆರೆಗಳು, ಪ್ರವಾಹಗಳು ಮತ್ತು ಪರ್ವತದ ಮಧ್ಯೆ ಕಣಿವೆಯಿದೆ. ಇದರಿಂದಾಗಿ ಇಲ್ಲಿ ಸ್ವರ್ಗವೇ ಧರೆಗಳಿದಂತೆ ಪ್ರವಾಸಿಗರಿಗೆ ಭಾಸವಾಗುತ್ತದೆ. ಕೆಲವು ಜನಪ್ರಿಯ ಚಾರಣ ತಾಣವೆಂದರೆ ಚನ್ಸಾಲ್ ಟ್ರೆಕ್ ಮತ್ತು ಕುಪರ‍್ ವ್ಯಾಲಿ ಟ್ರೆಕ್. ಪ್ರವಾಸಿಗರಿಗೆ ಇಲ್ಲಿನ ಟ್ರಾವೆಲ್ ಏಜೆಂಟರು ಮತ್ತು ಟೂರ‍್ ಗೈಡ್‌ಗಳಿಂಡ ಸ್ಪೋರ್ಟ್ಸ್ ಪ್ಯಾಕೇಜ್‌ಗಳು ಲಭ್ಯವಿದೆ. ಇದರ ಜೊತೆಗೆ ಟೆಂಟ್ ರೀತಿಯ ವಸತಿ ವ್ಯವಸ್ಥೆಯೂ ಇಲ್ಲಿ ಲಭ್ಯವಿದೆ. ಪ್ರವಾಸಿಗರಿಗೆ ಜೀಪ್ ಸಫಾರಿ ಸೌಲಭ್ಯವೂ ಇದೆ.


Click it and Unblock the Notifications