Search
  • Follow NativePlanet
Share

ರಾಮಗಢ - ಸಾಹಸ..ಮೋಜು..ವಿರಾಮ

14

ಸಾಕಷ್ಟು ಜನರು ವರ್ಷಕ್ಕೆ ಒಂದು ಬಾರಿಯಾದರೂ ಯಾವುದಾದರೂ ಸಾಹಸ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಇಷ್ಟ ಪಡುತ್ತಾರೆ. ಆದರೆ ಪಟ್ಟಣದಲ್ಲಿರುವವರಿಗೆ ಈ ಉದ್ದೇಶ ಅಷ್ಟು ಸುಲಭವಾಗಿ ಸಾರ್ಥಕಗೊಳಿಸುವುದು ಕಷ್ಟ. ಆದ್ದರಿಂದ ಇಂತಹ ಸಾಹಸಪ್ರಿಯರಿಗೆಂದೆ ಮೀಸಲಾದ ಸ್ಥಳ ಉತ್ತರಖಂಡದ ರಾಮಗಢ ಗಿರಿಧಾಮ. ಇಲ್ಲಿಗೆ ಬಂದರೆ ಮತ್ತೊಮ್ಮೆ ಈ ಸ್ಥಳಕ್ಕೆ ಬರಬೇಕೆಂಬ ಆಸೆ ನಿಮ್ಮಲ್ಲಿ ಚಿಗುರದೇ ಇರಲು ಸಾಧ್ಯವೇ ಇಲ್ಲ!

ರಾಮಗಢ, ಉತ್ತರಖಂಡದ ನೈನಿತಾಲ್ ಜಿಲ್ಲೆಯಲ್ಲಿರುವ ಒಂದು ಸುಂದರ ಗಿರಿಧಾಮ. ಈ ಗಿರಿಧಾಮವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಎತ್ತರದ ಸ್ಥಳವನ್ನು 'ಮಲ್ಲ' ಮತ್ತು ಇಳಿಜಾರು ಸ್ಥಳವನ್ನು  'ತಲ್ಲ/ತಳ' ಎಂದು ಕರೆಯಲಾಗುತ್ತದೆ. ಈ ಸ್ಥಳದ ಎತ್ತರವು 1400 ಮೀ ದಿಂದ 1900 ಮೀ ವರೆಗಿದೆ. ಈ ಸ್ಥಳವು ಪೀಚ್, ಏಪ್ರಿಕಾಟ್, ಪೇರಳೆ ಮತ್ತು ಸೇಬುಗಳ ಸಮೃದ್ಧ ಹಸಿರು ತೋಟಗಳನ್ನು ಹೊಂದಿರುವ ಕಾರಣದಿಂದ 'ಕುಮಾವೂನ್ ನ ಹಣ್ಣಿನ ತಟ್ಟೆ/ಬುಟ್ಟಿ’ ಎಂದು ಹೆಸರುವಾಸಿಯಾಗಿದೆ.

ಈ ಸ್ಥಳವು, ನಗರದ ಗೊಂದಲಮಯ ಹಾಗೂ ಗೋಜಿನ ವಾತಾವರಣವನ್ನು ತಪ್ಪಿಸಿಕೊಳ್ಳಲು ಬಯಸುವ ಪ್ರವಾಸಿಗರಿಗೆ ಒಂದು ಜನಪ್ರಿಯ ಗೆಟ್ವೇ/ ಮಹಾದ್ವಾರವಾಗಿದೆ. ಹಿಮಾವೃತ, ಹಿಮಾಲಯ ಮತ್ತು ಇತರ ಸ್ಥಳದ ನೆಮ್ಮದಿಯ ವಾತಾವರಣದ ಸಮ್ಮೋಹನಗೊಳಿಸುವ ವೀಕ್ಷಣೆಗಳನ್ನು ಒದಗಿಸುತ್ತ ಒಂದು ಪರಿಪೂರ್ಣ ರಜಾ ದಿನವನ್ನು ಕಳೆಯುವಂತಹ ಗಮ್ಯಸ್ಥಾನವಾಗಿದೆ. ಬ್ರಿಟೀಷರು ಈ ಸ್ಥಳದಲ್ಲಿ ಅನೇಕ ಬಾರಿ ಸಮಯ ಕಳೆಯಲು ಬಯಸುತ್ತಿದ್ದರು. ಈ ಸ್ಥಳದ ಅಪೂರ್ವ ಸೌಂದರ್ಯದಿಂದಾಗಿ, ರವೀಂದ್ರ ನಾಥ್ ಟಾಗೋರ್ ಮತ್ತು ನಾರಾಯಣ ಸ್ವಾಮಿಯಂತಹ ಅನೇಕ ಪ್ರಸಿದ್ಧ ವ್ಯಕ್ತಿಗಳು ಇಲ್ಲಿ ತಮ್ಮ ಆಶ್ರಮಗಳನ್ನು ಸ್ಥಾಪಿಸಿದ್ದಾರೆ.

ಪ್ರವಾಸಿಗರು ಇಲ್ಲಿ, ಹೆಸರಾಂತ ಬರಹಗಾರ್ತಿ, ಮಹಾದೇವಿ ವರ್ಮಾ ಅವರಿಗೆ ಸಮರ್ಪಿಸಲಾದ ಗ್ರಂಥಾಲಯವೊಂದಕ್ಕೆ ಭೇಟಿ ಮಾಡಬಹುದು. ಈ ಗ್ರಂಥಾಲಯವು ಲೇಖಕಿಗೆ 'ಲಚ್ಮಾ' ಪ್ರಸಿದ್ಧ ಕಥೆಯನ್ನು ಬರೆಯಲು ಪ್ರೇರೇಪಿಸಿತ್ತು. ಇಲ್ಲಿ ಸಾಕಷ್ಟು ಜನಪ್ರಿಯವಾದ ಅನೇಕ ಪ್ರವಾಸಿ ಆಕರ್ಷಣೆಗಳಿದ್ದು, ಶ್ರೀ ಅರಬಿಂದೋ/ಅರವಿಂದೋ ಆಶ್ರಮವು ಪ್ರವಾಸಿಗರಿಗೆ ಯೋಗ ಮತ್ತು ಧ್ಯಾನ ತರಗತಿಗಳನ್ನು ಆಯೋಜಿಸತ್ತಿರುತ್ತದೆ.

ನಿಮಗೆ ಅನುಕೂಲವಾದರೆ, ವಿಶ್ರಾಂತಿ ತಾಣ, ಕುಮಾವೂನ್ ಮಂಡಲ್ ವಿಕಾಸ್ ನಿಗಮ್ (KMVN), ಶ್ರೀ ನಾರಾಯಣ ಸ್ವಾಮಿ ಆಶ್ರಮ ಮತ್ತು ಗಿರಿಜಾ ದೇವಿ ದೇವಾಲಯಗಳನ್ನು ಭೇಟಿ ಮಾಡಬಹುದು. ಸುತ್ತಮುತ್ತಲಿನ ಮತ್ತೊಂದು ಪ್ರಸಿದ್ಧ ತಾಣ, ರಾಮಗಢ ರಿಂದ 25 ಕಿ. ಮೀ ದೂರದಲ್ಲಿರುವ ಮುಕ್ತೇಶ್ವರ. ಈ ಸ್ಥಳವು ಶಿವ ದೇವರಿಗೆ ಮೀಸಲಾಗಿದ್ದು, 350 ವರ್ಷ ಹಳೆಯ ದೇವಸ್ಥಾನ ಎಂದು ಪ್ರಸಿದ್ಧವಾಗಿದೆ.

ಇವುಗಳ ಜೊತೆಗೆ, ಪ್ರಯಾಣಿಕರು ಶಾಂತವಾದ ವಾತಾವರಣವನ್ನು ಹೊಂದಿರುವ ಒಂದು ಸಣ್ಣ ಕೊಪ್ಪಳ, ನತೌಖಾನ್/ನತುಖಾನ್ ಸ್ಥಳವನ್ನು ಭೇಟಿ ಮಾಡಬಹುದು. ಈ ಹಳ್ಳಿಯು ಓಕ್, ಪೈನ್, ಬರ್ಚ್ ಮತ್ತು ಕಪಲ್ ಮರಗಳಿಂದ ಸುತ್ತುವರಿದಿದೆ. ಈ ಪ್ರದೇಶವನ್ನು 12 ಸಣ್ಣ ಕೊಪ್ಪಲುಗಳಾಗಿ ವಿಂಗಡಿಸಲಾಗಿದ್ದು, ಅವುಗಳೆಂದರೆ ನವಾಡ, ಗಾವೊಂ, ತಲ್ಲಾತಂಡಾ, ಬಗೀಚಾ, ತಪುಕ್, ಲಮಖನ್, ಮಲ್ಲತಂಡಾ, ಕನಲಾ, ಕಫಲ್ಧಾರಿ, ಝೋಪ್ರೊ, ಬನೊಲಾ ಮತ್ತು ಬುಂಗಾ ಎಂದು ಹೆಸರಿಸಲಾಗಿದೆ. ಪ್ರವಾಸಿಗರಿಗೆ ವಸತಿ ಸೌಲಭ್ಯ ಒದಗಿಸುವ ಪಾರಂಪರಿಕ ಕಟ್ಟಡ ಬಾಬ್ ಅರಮನೆ ಕೂಡಾ ಇಲ್ಲಿದೆ.

ಕಲ್ಲು ಬಂಡೆ ಹತ್ತುವುದು(ರಾಕ್ ಕ್ಲೈಂಬಿಂಗ್), ರಪ್ಲಿಂಗ್ (ಜಾರುವಿಕೆ) ಮತ್ತು ಬೈಕಿಂಗ್/ ಬೈಕ್ ಸವಾರಿ ಮುಂತಾದ ವಿವಿಧ ಸಾಹಸ ಚಟುವಟಿಕೆಗಳನ್ನು ರಾಮಗಢದಲ್ಲಿ ಅನುಭವಿಸಬಹುದು. ಕೊಸಿ ನದಿಯಲ್ಲಿ ಮೀನುಗಾರಿಕೆಯು(ಆಂಗ್ಲಿಂಗ್) ಪ್ರವಾಸಿಗರಿಗೆ ಇಷ್ಟವಾಗುವ ಚಟುವಟಿಕೆಗಳಲ್ಲಿ ಒಂದಾಗಿದೆ. ಸುಂದರ ಕೊಸಿ ನದಿಯ ತಟದಲ್ಲಿ ನಡೆಯುವ ಕ್ಯಾಂಪಿಂಗ್, ಪ್ರವಾಸಿಗರು ಅನುಭವಿಸಬಹುದಾದ, ಆನಂದಿಸಬಹುದಾದ ಮತ್ತೊಂದು ಚಟುವಟಿಕೆಯಾಗಿದೆ.

ರಾಮಗಢ ದಿಂದ ಹತ್ತಿರದ ವಿಮಾನ ನಿಲ್ದಾಣವೆಂದರೆ ಪಂತನಗರ್ ವಿಮಾನ ನಿಲ್ದಾಣ. ಇದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಕಥ್ಗೊಡಂ ರೈಲು ನಿಲ್ದಾಣ ರಾಮಗಢ ಪ್ರದೇಶಕ್ಕೆ ಅತ್ಯಂತ ಹತ್ತಿರದ ರೈಲ್ವೆ ನಿಲ್ದಾಣ. ಪ್ರಯಾಣಿಕರು ಈ ಸುಂದರ ಸ್ಥಳವನ್ನು ತಲುಪಲು ಈ ನಿಲ್ದಾಣದಿಂದ ಮುಂಗಡವಾಗಿ ಪಾವತಿಸುವ ಟ್ಯಾಕ್ಸಿಗಳನ್ನು ಪಡೆಯಬಹುದು. ಅಲ್ಲದೇ ನೈನಿತಾಲ್ ಮತ್ತು  ನುಕುಚೈತಾಲ್ ನಿಂದ ಬಸ್ಸುಗಳ ಮೂಲಕವೂ ರಾಮಗಢವನ್ನು ತಲುಪಬಹುದು. ರಾಮಗಢ ಪ್ರವಾಸಕ್ಕೆ ಯೋಜನೆ ರುಪಿಸಲು ಉತ್ತಮ ಸಮಯ, ಬೇಸಿಗೆ ಮತ್ತು ಮಳೆಗಾಲದ ಅವಧಿ.

ರಾಮಗಢ ಪ್ರಸಿದ್ಧವಾಗಿದೆ

ರಾಮಗಢ ಹವಾಮಾನ

ಉತ್ತಮ ಸಮಯ ರಾಮಗಢ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ರಾಮಗಢ

  • ರಸ್ತೆಯ ಮೂಲಕ
    ಹತ್ತಿರದ ಸ್ಥಳಗಳಾದ ನೈನಿತಾಲ್ ಮತ್ತು ನುಕುಚೈತಾಲ್ ಗಳಿಂದ ರಾಮಗಢಕ್ಕೆ ಸಾಕಷ್ಟು ಬಸ್ ಗಳ ಸೌಲಭ್ಯಗಳಿವೆ. ದೆಹಲಿಯಿಂದ ಕೂಡ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಬಸ್ಸುಗಳು ಲಭ್ಯವಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕಥ್ಗೋಡಂ ರೈಲ್ವೆ ನಿಲ್ದಾಣದಿಂದ 35 ಕಿಲೋಮೀಟರ್ ದೂರದಲ್ಲಿದೆ ರಾಮಗಢ ಪ್ರದೇಶ. ಅಲ್ಲದೆ ಇದು ರಾಯಗಡಕ್ಕೆ ಹತ್ತಿರದ ರೈಲು ನಿಲ್ದಾಣವಾಗಿದೆ. ಈ ರೈಲು ನಿಲ್ದಾಣ ದೆಹಲಿ ಒಳಗೊಂಡಂತೆ ಭಾರತದ ಅನೇಕ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಟ್ಯಾಕ್ಸಿಗಳು ಮತ್ತು ಕ್ಯಾಬ್ ಗಳು ಈ ರೈಲ್ವೆ ನಿಲ್ದಾಣದಿಂದ ರಾಮಗಢಕ್ಕೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ರಾಮಗಢ ಹತ್ತಿರದ ವಾಯುನೆಲೆ ಪಂತನಗರ್ ವಿಮಾನ ನಿಲ್ದಾಣ. ಈ ವಿಮಾನ ನಿಲ್ದಾಣಕ್ಕೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ನಿಯಮಿತ ವಿಮಾನದ ಮೂಲಕವಾಗಿ ತಲುಪಬಹುದು. ಪ್ರವಾಸಿಗರು ರಾಮಗಢ ತಲುಪಲು ಪಂತನಗರ್ ವಿಮಾನ ನಿಲ್ದಾಣದಿಂದ ಕ್ಯಾಬ್ ಅಥವಾ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat