Search
  • Follow NativePlanet
Share
ಮುಖಪುಟ » ಸ್ಥಳಗಳು » ಪೋಖ್ರಾನ್ » ಆಕರ್ಷಣೆಗಳು » ಪೋಖರಾನ್‌ ಕೋಟೆ

ಪೋಖರಾನ್‌ ಕೋಟೆ, ಪೋಖ್ರಾನ್

1

ಪೋಕರಾನ್‌ ಕೋಟೆಯನ್ನು ಬಾಲಗಢ ಎಂದು ಕರೆಯಲಾಗುತ್ತದೆ. 14ನೇ ಶತಮಾನದಲ್ಲಿ ನಿರ್ಮಿಸಿದ ಈ ಕೊಟೆ ಪುರಾತನವಾದದ್ದು. ಥಾರ‍್ ಮರುಭೂಮಿಯ ಮಧ್ಯೆ ಈ ಕೋಟೆಯಿದೆ. ಹಿಂದಿನ ಕಾಲದಲ್ಲಿ ಪ್ರಮುಖ ವ್ಯಾಪಾರಿ ಕೇಂದ್ರವಾಗಿದ್ದ ಕೋಟೆ ಇದು. ಇಲ್ಲಿಂದ ಮೆಣಸು, ಉಪ್ಪು ಮತ್ತು ಬಟ್ಟೆಗಳನ್ನು ಪರ್ಷಿಯಾ ಮತ್ತು ಇತರ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ರಾಥೋಡರ ಆಡಳಿತದಲ್ಲಿ ಚಂಪಾವತ್‌ರ ಪ್ರಮುಖ ಆಡಳಿತ ಕೇಂದ್ರವಾಗಿತ್ತು. ಈ ಕೋಟೆಯ ಐಶ್ವರ್ಯಯುತ ಇತಿಹಾಸವು ಭಾರತವಲ್ಲದೇ ಇತರ ದೇಶಗಳಿಂದಲೂ ಪ್ರವಾಸಿಗರನ್ನು ಆಕರ್ಷಿಸುತ್ತದೆ.ಪ್ರವಾಸಿಗರು ಕೆಂಪು ಕಲ್ಲುಗಳ ಅರಮನೆಯನ್ನು ಇಲ್ಲಿ ಕಾಣಬಹುದು. ಝರೋಕಾಗಳು ಮತ್ತು ಗೋಪುರಗಳೂ ಕೂಡಾ ಇಲ್ಲಿ ಕಾಣಸಿಗುತ್ತವೆ. ಸದ್ಯ ಠಾಕೂರ‍್ ನಾಗೇಂದ್ರ ಸಿಂಗ್‌ ಪೋಕರಾನ್‌ ಮತ್ತು ಅವರ ಬಾಳಸಂಗಾತಿ ಥಾಕೂರಾನಿ ಯಶ್ವಂತ್‌ ಕುಮಾರಿ ಪೋಕರಾನ್‌ ಪ್ರವೇಶದ್ವಾರಗಳನ್ನು ಪ್ರವಾಸಿಗರಿಗೆ ತೆರೆದಿಡಲಾಗಿದೆ. ಕೋಟೆಯು ಮೊಘಲ್‌ ಮತ್ತು ರಜಪೂತರ ಶೈಲಿಯ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆ.ರಾಜರ ಯುದ್ಧ ಸಾಮಗ್ರಿಗಳು, ಪೇಂಟಿಂಗ್‌ಗಳು, ಬಟ್ಟೆಗಳು ಮತ್ತು ಕರಕುಶಲ ಸಾಮಗ್ರಿಯನ್ನು ಇಲ್ಲಿನ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ. ಇದರ ಜೊತೆಗೆ, ಇಲ್ಲಿ ಲೈಬ್ರರಿಯೊಂದಿದೆ. ಈ ಲೈಬ್ರರಿಯಲ್ಲಿ ಪುಸ್ತಕಗಳ ದೊಡ್ಡ ಸಂಗ್ರಹವೇ ಇದೆ. ರಾವ್ ಬಹಾದೂರ‍್ ರಾಜಶ್ರೀ ಥಾಕೂರ‍್ ಚೈನ್‌ ಸಿಂಗ್‌ಜಿ ಪೋಕರಾನ್‌ರ ಬಗ್ಗೆ ಇಲ್ಲಿ ಸಾಕಷ್ಟು ಪುಸ್ತಕಗಳಿವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed