Search
  • Follow NativePlanet
Share
» »ನವರಾತ್ರಿ ಆಚರಣೆ ಸಂದರ್ಭದಲ್ಲಿ ಭಾರತದಲ್ಲಿ ಕಂಡು ಬರುವ ಅಸಾಮಾನ್ಯವೆನಿಸುವಂತಹ ದೃಶ್ಯಗಳು

ನವರಾತ್ರಿ ಆಚರಣೆ ಸಂದರ್ಭದಲ್ಲಿ ಭಾರತದಲ್ಲಿ ಕಂಡು ಬರುವ ಅಸಾಮಾನ್ಯವೆನಿಸುವಂತಹ ದೃಶ್ಯಗಳು

ಆಗಸ್ಟ್ ತಿಂಗಳಿನಿಂದ ಡಿಸೆಂಬರ್ ತಿಂಗಳುಗಳವರೆಗೆ ಭಾರತದಲ್ಲಿದ್ದಲ್ಲಿ ನಿಸ್ಸಂದೇಹವಾಗಿಯೂ ಅತ್ಯಂತ ಉತ್ತಮ ಅನುಭವವನ್ನು ಈ ಸಮಯದಲ್ಲಿ ಆಚರಿಸಲಾಗುವ ಹಲವಾರು ಪ್ರಮುಖ ಹಬ್ಬಗಳ ಮೂಲಕ ಪಡೆಯಬಹುದಾಗಿದೆ. ಹೊಸಬಟ್ಟೆ ಖರೀದಿಯಾಗಿರಬಹುದು, ಸಿಹಿತಿನಿಸುಗಳು ಅಥವಾ ಇನ್ನಿತರ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳು ಜನರಿಂದ ತುಂಬಿ ತುಳುಕುತ್ತದೆ. ನೆರೆಹೊರೆಯವರೂ ಕೂಡಾ ಒಳ್ಳೆಯ ಉತ್ಸಾಹದಲ್ಲಿರುತ್ತಾರೆ ಅಲ್ಲದೆ ಸ್ನೇಹಿತರು ನಿಮ್ಮನ್ನು ಸಂತೋಷಕೂಟಗಳಿಗೆ ಆಹ್ವಾನ ಮಾಡುತ್ತಾ, ಮಕ್ಕಳು ಕಳೆ ಕಳೆಯಾಗಿ ಓಡಾಡುತ್ತಾ ತಮ್ಮ ಸಮಯವನ್ನು ಉತ್ಸಾಹದಿಂದ ಈ ಹಬ್ಬ ಹರಿದಿನಗಳ ಸಮಯದಲ್ಲಿ ಕಳೆಯುತ್ತಾರೆ. ಭಾರತದಲ್ಲಿ ಯಾವುದೇ ಅವ್ಯವಸ್ಥೆಗಳಿದ್ದರೂ ಸಹ ಈ ಹಬ್ಬಗಳ ಸಮಯದಲ್ಲಿ ಲವಲವಿಕೆಯಿಂದ ಇರುತ್ತದೆ. ಹಬ್ಬಗಳ ಸಮಯದಲ್ಲಿ ಧರ್ಮ, ಸಂಸ್ಕೃತಿ ಮಾನವೀಯತೆ ಮತ್ತು ಉಲ್ಲಾಸದ ಅದ್ಬುತ ಪ್ರದರ್ಶನದ ದರ್ಶನವಾಗುತ್ತದೆ. ಇವೆಲ್ಲವನ್ನು ನೋಡ ಬೇಕೆಂದಿದ್ದಲ್ಲಿ ಹಬ್ಬಗಳ ಸಮಯದಲ್ಲಿ ಭಾರತಕ್ಕೆ ಭೇಟಿ ಕೊಡಿ

ನವರಾತ್ರಿ ಎಂದರೆ ಹೆಸರೇ ಸೂಚಿಸುವಂತೆ ಒಂಬತ್ತು ರಾತ್ರಿ ಮತ್ತು ಹತ್ತು ದಿನಗಳವರೆಗೆ ಆಚರಿಸುವ ಹಬ್ಬವಾಗಿದೆ. ಈ ಹಬ್ಬವು ಹಿಂದೂ ಪುರಾಣದಲ್ಲಿಯೂ ಕಂಡುಬರುತ್ತಿದ್ದು, ದೇಶದ ನಾನಾ ಭಾಗಗಳಲ್ಲಿ ವಿವಿಧ ರೀತಿಯಿಂದ ಆಚರಿಸಲ್ಪಡುತ್ತದೆ. ಕೆಲವು ಕಡೆ ಈ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಿದರೆ ಇನ್ನು ಕೆಲವೆಡೆ ಆಯಾ ಪ್ರದೇಶದ ಕಲೆ ಮತ್ತು ಸಂಸ್ಕೃತಿಗೆ ಹೆಚ್ಚು ಉತ್ತೇಜನ ನೀಡುತ್ತಾ ಆಚರಿಸುವಂತಹ ಹಬ್ಬವಾಗಿದೆ. ನವರಾತ್ರಿ ಆಚರಣೆಗಳು ದೇಶಾದ್ಯಂತ ಆನಂದಿಸುವುದರಿಂದ ಹಬ್ಬದ ಸಂಭ್ರಮದ ದೃಶ್ಯಗಳನ್ನು ನೋಡಲು ಹಾಗೂ. ನವರಾತ್ರಿಯ ಸಮಯದಲ್ಲಿ ಪ್ರಯಾಣಿಸಲು ಪ್ರವಾಸವನ್ನು ಆಯೋಜಿಸಿ

magh-gupt-navratri-2022-1644220879-1661860503.jpg -Properties

ಹಬ್ಬದ ದೀಪಾಲಂಕಾರಗಳು

ಹಬ್ಬದ ಪ್ರಯುಕ್ತ ದೀಪಾಲಂಕಾರಗಳನ್ನು ದೇಶದ ವಿವಿಧ ಭಾಗಗಳಲ್ಲಿ ಕಾಣಬಹುದಾಗಿದೆ ಉದಾಹರಣೆಗೆ ಮುಂಬೈಯಲ್ಲಿ ಇಂತಹ ಒಂದು ಸೆಟ್ಟಿಂಗ್ ಅನ್ನು ಕಾಣಬಹುದಾಗಿದೆ.

ದೇವಾಲಯದಲ್ಲಿಯ ಸಂಭ್ರಮ

ಮಂಗಳೂರಿನ ಕುದ್ರೋಳಿ ದೇವಾಲಯವು ದೀಪಾಲಂಕಾರದಿಂದ ನವರಾತ್ರಿ ಹಬ್ಬದ ಸಮಯದಲ್ಲಿ ಸುಂದರವಾಗಿ ರಾರಾಜಿಸುತ್ತದೆ.

ಆಕರ್ಷಕ ಪದ್ದತಿಗಳು

ದಕ್ಷಿಣ ಭಾರತದಲ್ಲಿಯ ಒಂದು ಪದ್ದತಿಯಾದ ಗೊಲ್ಲು ವನ್ನು ನವರಾತ್ರಿ ಆಚರಣೆಯ ಸಂಧರ್ಭದಲ್ಲಿ ಕಾಣಬಹುದಾಗಿದ್ದು ಇದು ಬಣ್ಣ ಬಣ್ಣದ ಗೊಂಬೆಗಳನ್ನು ಕೂರಿಸುವ ಒಂದು ಸುಂದರ ಪದ್ದತಿಯಾಗಿದೆ.

ಮಕ್ಕಳಿಗೆ ವಿನೋದ ಮತ್ತು ಉಲ್ಲಾಸ

ನವರಾತ್ರಿ ಹಬ್ಬದ ಸಮಯದಲ್ಲಿ ದೇಶದಾದ್ಯಂತದ ಮಕ್ಕಳು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಸಂತೋಷ ಪಡುತ್ತಾರೆ

ಬೆರಗುಗೊಳಿಸುವ ಪ್ರದರ್ಶನಗಳು

ನವರಾತ್ರಿ ಆಚರಣೆಗಳ ಸಮಯದಲ್ಲಿ ಗುಜರಾತ್ ಮುಂತಾದ ಕಡೆ ಜಾನಪದ ನೃತ್ಯದಂತಹ ಆಕರ್ಷಕ ಹಾಗೂ ಬೆರಗುಗೊಳಿಸುವಂತಹ ಪ್ರದರ್ಶನಗಳನ್ನು ನಡೆಸಲಾಗುತ್ತದೆ.

cover-21-1505966611-1661860531.jpg -Properties

ಭವ್ಯ ದಿನ

ರಾತ್ರಿಯ ಹೊತ್ತಿಗೆ ಭವ್ಯವಾಗಿ ಮೈಸೂರು ಅರಮನೆಯನ್ನು ದಸರಾ ಉತ್ಸವಕ್ಕಾಗಿ ತಂತಿ ದೀಪಗಳಿಂದ ಅಲಂಕರಿಸಲಾಗುತ್ತದೆ.

ಸಾಂಸ್ಕೃತಿಕ ಪ್ರದರ್ಶನಗಳು

ಸಾಂಸ್ಕೃತಿಕ ಪ್ರದರ್ಶನಗಳು ಅಹಮ್ಮದಾಬಾದ್ ನಂತಹ ಹಲವಾರು ನಗರಗಳಲ್ಲಿ ನಡೆಯುತ್ತಾ ಒಂದು ವಿಭಿನ್ನವಾದ ಅನುಭವವನ್ನು ನೀಡುತ್ತವೆ.

ದಾಂಡಿಯಾ ರಾಸ್

ದಾಂಡಿಯಾ ರಾಸ್‌ನ ಅದ್ಭುತ ಪ್ರದರ್ಶನಗಳು, ಬೆಂಗಳೂರಿನಲ್ಲೂ ಆಯೋಜಿಸಲಾಗುತ್ತದೆ.

ಮಾ ದುರ್ಗಾ ಪಂಡಲ್‌ಗಳು

ಕೋಲ್ಕತ್ತಾದಂತಹ ನಗರಗಳು ನವರಾತ್ರಿಯನ್ನು ಬಹಳ ಸಂಭ್ರಮದಿಂದ ಆಚರಿಸುತ್ತವೆ. ಈ ಪ್ರದೇಶದಾದ್ಯಂತ ಸುಂದರವಾದ ಮಾ ದುರ್ಗದ ಪಂಡಲ್‌ಗಳು ಪ್ರಮುಖ ಆಕರ್ಷಣೆಯಾಗಿದೆ.

durga1-23-1474623811-1661860522.jpg -Properties

ಮಹತ್ವದ ಮಣ್ಣಿನ ಮಡಕೆ

ಗುಜರಾತಿನಲ್ಲಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಮಣ್ಣಿನ ಮಡಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮಡಕೆಯು ಮಾನವ ದೇಹವನ್ನು ಪ್ರತಿನಿಧಿಸುತ್ತದೆ ಮತ್ತು ಒಳಗಿನ ದೀಪವು ದೈವಿಕ ಆತ್ಮವನ್ನು ಸೂಚಿಸುತ್ತದೆ ಆದುದರಿಂದ ಇಲ್ಲಿ ಇದಕ್ಕಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.

ಉಸಿರುಕಟ್ಟುವ ಸೌಂದರ್ಯ

ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ದೇವಿಯ ವಿಸ್ಮಯಗೊಳಿಸುವಂತಹ ಪೀಠವನ್ನು ಕಾಣಬಹುದಾಗಿದೆ.

ಸುತ್ತಲೂ ಹೂವುಗಳು

ಭಾರತದಲ್ಲಿ ಹಬ್ಬದ ಅವಧಿಯಲ್ಲಿ ಹೂವುಗಳ ಬೆಲೆಗಳು ಹೆಚ್ಚು ಬೇಡಿಕೆಯಲ್ಲಿವೆ.

30-15-dasara-1661860514.jpg -Properties

ಪ್ರಸಾದ

ಸರ್ವಶಕ್ತನ ಆಶೀರ್ವಾದದ ಒಂದು ರೂಪವೆಂದರೆ ಪ್ರಸಾದ ಮತ್ತು ಇದು ನವರಾತ್ರಿಯ ಸಮಯದಲ್ಲಿ ಭಾರತದ ಪ್ರದೇಶಗಳಲ್ಲಿ ವಿವಿಧ ರೂಪಗಳಲ್ಲಿ ಲಭ್ಯವಿರುತ್ತದೆ.

ಕುಂಕುಮ

ಕುಂಕುಮವು ನವರಾತ್ರಿ ಪೂಜೆಯಲ್ಲಿ ಹೆಚ್ಚು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದನ್ನು ತಾಯಿ ದುರ್ಗೆಯ ಸಾಂಕೇತವೆಂದು ಪರಿಗಣಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X