Search
  • Follow NativePlanet
Share
» »ಪಂಚದ ಏಳು ಅದ್ಬುತಗಳಲ್ಲೊಂದಾದ ತಾಜ್ ಮಹಲ್ ನಿಂದ ಭಾರತದ ಬೊಕ್ಕಸಕ್ಕೆ ಹೆಚ್ಚು ಆದಾಯ!

ಪಂಚದ ಏಳು ಅದ್ಬುತಗಳಲ್ಲೊಂದಾದ ತಾಜ್ ಮಹಲ್ ನಿಂದ ಭಾರತದ ಬೊಕ್ಕಸಕ್ಕೆ ಹೆಚ್ಚು ಆದಾಯ!

ತಾಜ್ ಮಹಲ್ ಭಾರತದ ಅತ್ಯಂತ ಆದಾಯ ತರುವಂತಹ ಸ್ಮಾರಕವೆನಿಸಿದೆ

Taj mahal-1

ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಏ ಎಸ್ ಐ) ವರದಿಯ ಪ್ರಕಾರ, ತಾಜ್ ಮಹಲ್ ಭಾರತದಲ್ಲಿ ಅತಿ ಹೆಚ್ಚು ಆದಾಯ-ಉತ್ಪಾದಿಸುವ ಸ್ಮಾರಕವಾಗಿ ಉಳಿದಿದೆ, ಕಳೆದ ಮೂರು ವರ್ಷಗಳಲ್ಲಿ 2019 ರಿಂದ 2022 ರವರೆಗೆ ಒಟ್ಟು ಆದಾಯ 132 ಕೋಟಿಗಳು. ಅಲ್ಲದೆ ವರದಿಯ ಪ್ರಕಾರ ಈ ಸ್ಮಾರಕವು ದೇಶದ ಅತ್ಯಂತ ಭೇಟಿ ಕೊಡಲ್ಪಡುವ ಪ್ರವಾಸಿ ತಾಣವಾಗಿದ್ದು ಇಲ್ಲಿಗೆ ಪ್ರತೀವರ್ಷ 10 ಮಿಲಿಯನ್ ಜನರಿಂದ ಭೇಟಿ ಕೊಡಲ್ಪಡುತ್ತದೆ. ಈ ವಾಸ್ತುಶಿಲ್ಪ ಅದ್ಬುತವನ್ನು ನೋಡಲು ಜಗತ್ತಿನಾದ್ಯಂತದ ಜನರು ಇಲ್ಲಿಗೆ ಭೇಟಿ ಕೊಡುತ್ತಾರೆ ಅಲ್ಲದೆ ತಾಜ್ ಮಹಲ್ ಇನ್ನೂ ಭಾರತದ ಐದು ಅತ್ಯಂತ ಲಾಭದಾಯಕ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.

ತಾಜ್ ಮಹಲ್ ಪ್ರಪಂಚದ ಏಳು ಅದ್ಬುತಗಳಲ್ಲಿ ಒಂದೆನಿಸಿದ್ದು ಭಾರತದ ಅತ್ಯಂತ ಗುರುತಿಸಲ್ಪಡುವ ಸ್ಮಾರಕವಾಗಿದೆ. ಕೋವಿಡ್ ಮಹಾಮಾರಿಯ ಕಾರಣದಿಂದಾಗಿ ಕೇವಲ ಸೀಮಿತವಾಗಿ ಜನರಿಗೆ ಮಾತ್ರ ಪ್ರವೇಶ ಇದ್ದರೂ ಸಹ ತಾಜ್ ಮಹಲ್ ಮಾತ್ರ 2019 ರಿಂದ 2022 ರವರೆಗೆ ಭಾರತೀಯ ಪುರಾತತ್ವ ಸಮೀಕ್ಷೆಯ (ಏಎಸ್ ಐ) ಒಟ್ಟು ಆದಾಯದ ಸುಮಾರು 24 ಪ್ರತಿಶತವನ್ನು ಉತ್ಪಾದಿಸಿತ್ತು ಎಂದು ವರದಿಯಾಗಿದೆ.

eyeswontshut-taj-2

ಕೋವಿಡ್ ಮಹಾಮಾರಿಯ ಕಾರಣದಿಂದಾಗಿ ಎಲ್ಲಾ ಸಾರ್ವಜನಿಕ ಪ್ರವಾಸಿ ಆಕರ್ಷಣೆಗಳಾದ ತಾಜ್ ಮಹಲ್, ಕುತುಬ್ ಮಿನಾರ್, ಕೆಂಪುಕೋಟೆ, ಇತ್ಯಾದಿಗಳು ಮುಚ್ಚಲ್ಪಟ್ಟಿದ್ದವು. ಆದರೂ ತಾಜ್ ಮಹಲ್ 2019-2020 ರಲ್ಲಿ ಒಟ್ಟು 9.5 ಕೋಟಿ ಆದಾಯವನ್ನು ಗಳಿಸಿತ್ತು. 2018 ರಲ್ಲಿ, ತಾಜ್ ಮಹಲ್‌ನಲ್ಲಿ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಅಲ್ಲಿ ನೀವು ಮೊಘಲ್ ರಾಜರ ಸಮಾಧಿಗಳನ್ನು ಸಂಗ್ರಹಿಸಲಾಗಿರುವ ಮುಖ್ಯ ಸಮಾಧಿಯನ್ನು (ಮಾರ್ಬಲ್ ಆವರಣ) ನೋಡಬಹುದು. ಮುಖ್ಯ ಸಮಾಧಿಯು ಮುಮ್ತಾಜ್ ಮಹಲ್ ಮತ್ತು ಷಹಜಹಾನ್ ಅವರ ಸಮಾಧಿಗಳಂತೆ ಅನುಕರಣೆಗಳನ್ನು ಮಾಡುತ್ತಾ 200/- ರೂ. ಪ್ರವೇಶ ಟಿಕೆಟ್‌ ದರ ವಿಧಿಸಲಾಗುತ್ತಿದೆ.

exterior1-of Taj-3

ತಾಜ್ ಮಹಲ್ ನಂತರ, ಕೆಂಪು ಕೋಟೆ, ಆಗ್ರಾ ಕೋಟೆ ಶನಿವಾರ ವಾಡಾ, ಕೋನಾರ್ಕ್ ಸೂರ್ಯ ದೇವಾಲಯ, ಮಾಮಲ್ಲಪುರಂನಲ್ಲಿರುವ ಸ್ಮಾರಕಗಳ ಸಮೂಹ ಇತ್ಯಾದಿ ಸ್ಮಾರಕಗಳು ಭಾರತದ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎ ಎಸ್ ಐ) ಯಿಂದ ನಿರ್ವಹಿಸಲ್ಪಡುತ್ತಿದ್ದು ಇವುಗಳು ಭಾರತದಲ್ಲಿ ಅತಿ ಹೆಚ್ಚು ಆದಾಯವನ್ನು ಗಳಿಸುವ ತಾಣಗಳಾಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X