ಜಗಥೀಪಟ್ ದೇವಾಲಯ ನಗ್ಗರ್‌ನ ಪ್ರವಾಸಿ ತಾಣಗಳ ಪೈಕಿ ಮುಖ್ಯವಾದದ್ದು. ಸಾಂಪ್ರದಾಯಿಕ ಹೋಟೆಲ್ ಆಗಿ ಪರಿವರ್ತನೆಯಾದ ಹಳೆಯ ಕೋಟೆಯ ಆವರಣದಲ್ಲಿ ಈ ದೇವಾಲಯವಿದೆ. ಈ ದೇವಾಲಯದ ಬಗ್ಗೆ ಜಾನಪದದಲ್ಲಿ ಅನೇಕ ಕಥೆಗಳುಂಟು. ದೇವರು ಮತ್ತು ದೇವತೆ ಜೇನುನೊಣಗಳಂತೆ ರೂಪ ಧರಿಸಿಕೊಂಡು ಭೃಗುತುಂಗ ಪರ್ವತವನ್ನು ಕೊರೆದು ಈ ದೇವಾಲಯ ನಿರ್ಮಿಸಿದರು ಎಂಬ ನಂಬಿಕೆ ಇಂದಿಗೂ ಚಾಲ್ತಿಯಲ್ಲಿದೆ. ದೇವಸ್ಥಾನ ನಿರ್ಮಿಸಲು ಬೇಕಾದ ಕಲ್ಲುಚಪ್ಪಡಿಗಳನ್ನು ಸ್ವತಃ ದೇವರೇ ಮಾರುವೇಷದಲ್ಲಿ ಬಂದು ಸಿದ್ಧಪಡಿಸಿದ ಎನ್ನಲಾದ ಕಥೆ ಅಚ್ಚರಿಮೂಡಿಸುತ್ತದೆ. ಇನ್ನೊಂದು ನಂಬಿಕೆಯ ಪ್ರಕಾರ, ದೇವಸ್ಥಾನದ ಮಾಳಿಗೆಗೆ ಬಳಸಿದ ಕಲ್ಲುಗಳನ್ನು ಕುಲ್ಲು ಜಿಲ್ಲೆಯ ದಿಯೋಟಿಬಾ ಶಿಖರದಿಂದ ಕತ್ತರಿಸಿ ತರಲಾಗಿದೆ ಎಂಬುದು. ಈ ದೇವರು ಎಲ್ಲ ವಿಪತ್ತುಗಳಿಂದ ಇಲ್ಲಿನ ಜನರನ್ನು ಕಾಪಾಡುತ್ತಾನೆ ಎಂದು ಇಲ್ಲಿಯ ಜನರು ನಂಬುತ್ತಾರೆ.
ಈ ದೇವಾಲಯ ಸಣ್ಣ ಗಾತ್ರದಲ್ಲಿದ್ದು, ಚೌಕಾಕಾರದ ನಿರ್ಮಿತಿಯನ್ನು ಹೊಂದಿದೆ. 'ಜಗಥೀಪಟ್' ಹೆಸರೇ ಹೇಳುವಂತೆ ಐದು ಅಡಿ ಉದ್ದ, 8 ಅಡಿ ಅಗಲ ಹಾಗೂ ಆರು ಅಡಿ ಎತ್ತರವನ್ನು ಹೊಂದಿದೆ. ಇಲ್ಲಿನ ವಾಸ್ತುಶಿಲ್ಪ ವಿಶೇಷವಾಗಿ ಹಿಮಾಚಲಪ್ರದೇಶ ವಾಸ್ತು ಶೈಲಿ ಎಂದೇ ಗುರುತಿಸಿಕೊಂಡಿದೆ. ಕಲ್ಲು ಚಪ್ಪಡಿಗಳ ಜತೆ ದೇವದಾರು ಮರವನ್ನೂ ದೇವಾಲಯದ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. ಇವು ಭೂಕಂಪವನ್ನೂ ಕೂಡ ತಾಳುತ್ತವೆ ಎಂಬ ನಂಬಿಕೆ ಇದೆ. ನಗ್ಗರ್ ಕೇಂದ್ರಸ್ಥಾನಕ್ಕೆ ಹತ್ತಿರದಲ್ಲೇ ಇರುವ ಈ ದೇವಸ್ಥಾನವನ್ನು ಸುಲಭವಾಗಿ ತಲುಪಬಹುದಾಗಿದೆ.


Click it and Unblock the Notifications