Search
  • Follow NativePlanet
Share
ಮುಖಪುಟ » ಸ್ಥಳಗಳು » ನಗ್ಗರ್ » ಆಕರ್ಷಣೆಗಳು » ತ್ರಿಪುರ ಸುಂದರಿ ದೇವಸ್ಥಾನ

ತ್ರಿಪುರ ಸುಂದರಿ ದೇವಸ್ಥಾನ, ನಗ್ಗರ್

1

ತ್ರಿಪುರ ಸುಂದರಿ ದೇವಾಲಯ ಹಿಮಾಚಲ ಪ್ರದೇಶದ ನಗ್ಗರ್‌ನಲ್ಲಿರುವ ಇನ್ನೊಂದು ಪ್ರಸಿದ್ಧ ದೇವಾಲಯ. ಪಗೋಡಾ ವಾಸ್ತುಶಿಲ್ಪವನ್ನು ಹೊಂದಿರುವ ಈ ದೇವಾಲಯ ಬಹಳಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ. ಮೂರು ಹಂತಗಳನ್ನೊಳಗೊಂಡ ಮರದಿಂದ ನಿರ್ಮಿಸಿದ ರಚನೆ ಇದಾಗಿದೆ. ಛತ್ರದ ಚಿತ್ರಗಳಿರುವ ಶಿಖರಗಳ ಮೇಲಾವರಣ ತುಂಬ ಸುಂದರವಾಗಿದೆ. ವಿವಿಧ ಹಿಂದೂ ದೇವತೆಗಳ ಕಲ್ಲಿನ ಪ್ರತಿಮೆಗಳು ಗಮನ ಸೆಳೆಯುತ್ತವೆ. ವಿಶೇಷವಾಗಿ  ಆನೆ ಮೊಗದ ಗಣೇಶ, ಸೃಷ್ಟಿದೇವತೆ ಬ್ರಹ್ಮ ಇವೇ ಮೊದಲಾದ ವಿಗ್ರಹಗಳಿವೆ.

ಇವುಗಳ ಜತೆಯಲ್ಲಿಯೇ ತ್ರಿಪುರ ರಾಕ್ಷಸನ ವಿಗ್ರಹವನ್ನೂ ಕಾಣಬಹುದಾಗಿದೆ. ನಗ್ಗರ್‌ ಬಸ್‌ ನಿಲ್ದಾಣದ ಸಮೀಪದಲ್ಲಿಯೇ ಈ ದೇವಸ್ಥಾನ ಇರುವುದರಿಂದ ಸುಲಭವಾಗಿ ತಲುಪಲು ಸಾಧ್ಯ. ಕೆಲವು ಶತಮಾನಗಳ ಹಿಂದೆ ರಾಜ ಯಶೋಧಪಾಲ್‌ ಈ ದೇವಸ್ಥಾನವನ್ನು ಕಟ್ಟಿಸಿದನೆಂದು ಚರಿತ್ರೆ ಹೇಳುತ್ತದಾದರೂ ಇಲ್ಲಿನ ಭಕ್ತರು ಹೆಚ್ಚಾಗಿ ಚಾಲ್ತಿಯಲ್ಲಿರುವ ಜಾನಪದ ಕಥೆಯನ್ನೇ ನಂಬುತ್ತಾರೆ. ದೇವಿ ತ್ರಿಪುರಸುಂದರಿ ಜೇಡದ ವೇಷದಲ್ಲಿ ಬಂದು ಜೇಡರ ಬಲೆಯಂತೆಯೇ ಈ ದೇವಸ್ಥಾನವನ್ನು ಸೃಷ್ಠಿಸಿದಳು ಎಂಬುದು ಈ ನಂಬಿಕೆ.  ಪ್ರತಿ ವರ್ಷದ ಮೇ ತಿಂಗಳಲ್ಲಿ ನಡೆಯುವ 'ಶಾರ್ಹೀ ಜಾತ್ರಾ ಮಹೋತ್ಸವ' ಇಲ್ಲಿನ ವಿಶೇಷವಾಗಿದೆ. ಈ ಸಂದರ್ಭದಲ್ಲಿ ದೇಶದ ನಾನಾ ಭಾಗಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat