Search
  • Follow NativePlanet
Share
ಮುಖಪುಟ » ಸ್ಥಳಗಳು » ಮಹಾಬಲಿಪುರಂ » ಆಕರ್ಷಣೆಗಳು » ಹುಲಿ ಗುಹೆ

ಹುಲಿ ಗುಹೆ, ಮಹಾಬಲಿಪುರಂ

4

ಹುಲಿ ಗುಹೆ ಎಂಬುದು ಒಂದು ಹಿಂದೂ ದೇವಾಲಯವಾಗಿದೆ. ಇದು ಕಲ್ಲಿನಿಂದ ಕೆತ್ತಿ ನಿರ್ಮಿಸಲಾದ ಒಂದು ಸಂಕೀರ್ಣ. ಮಹಾಬಲಿಪುರಂನಲ್ಲಿರುವ ಸಲುನಂಕುಪ್ಪಂ ಎಂಬ ಸ್ಥಳದಲ್ಲಿ ಇದು ನೆಲೆಗೊಂಡಿದೆ. ಈ ಸ್ಮಾರಕಕ್ಕೆ ಹುಲಿ ಗುಹೆ ಎಂಬ ಹೆಸರು ಬರಲು ಕಾರಣವೇನೆಂದರೆ  ಈ ಸಂಕೀರ್ಣದ ದ್ವಾರಕ್ಕೆ ಕಲ್ಲಿನಿಂದ ಕೆತ್ತಲಾದ ಹುಲಿಯ ಶಿರವನ್ನು ಇಡಲಾಗಿದೆ. ಹಾಗಾಗಿ ಇದಕ್ಕೆ ಈ ಹೆಸರು ಬಂದಿದೆ. ನಂಬಿಕೆಗಳ ಪ್ರಕಾರ ಪಲ್ಲವರಿಂದ ಸುಮಾರು 8 ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಈ ಗುಹೆಯು ಪ್ರವಾಸಿಗರ ವಲಯದಲ್ಲಿ ಮತ್ತು ವಿಹಾರಾರ್ಥವಾಗಿ ಬರುವವರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ವಿಭಾಗವು ಇಲ್ಲಿಗೆ ಬರುವವರಿಂದ ಪ್ರವೇಶ ಶುಲ್ಕವನ್ನು ವಸೂಲಿ ಮಾಡಿ ,  ಈ ಸಂಕೀರ್ಣದ ನಿರ್ವಹಣೆಯನ್ನು ಮಾಡುತ್ತಿದೆ.

2005ರಲ್ಲಿ ಈ ಸಂಕೀರ್ಣದಲ್ಲಿದ್ದ ಒಂದು ಶಾಸನವು ಇಲ್ಲಿಯೇ ಸಮೀಪದಲ್ಲಿ ಹುಗಿದು ಹೋಗಿದ್ದ, ಸಂಗಂ ಕಾಲದ ಸುಬ್ರಹ್ಮಣ್ಯ ದೇವಾಲಯದ ಉಪಸ್ಥಿತಿಯನ್ನು ತಿಳಿಸಿತು. ನಂತರ ಉತ್ಖನನ ಮಾಡಿ ಆ ದೇವಾಲಯವನ್ನು ಹೊರತೆಗೆಯಲಾಗಿದೆ.

ಹುಲಿ ಗುಹೆಗಳಿಂದ ಬೀಚ್‍ಗೆ ಹೋಗಲು ದಾರಿಯಿದೆ. ಇಲ್ಲಿ ಕಾರನ್ನು ಪಾರ್ಕ್ ಮಾಡಲು 10 ರೂಪಾಯಿ ದರವನ್ನು ನಿಗದಿಪಡಿಸಿದ್ದಾರೆ. ಇದು ಇಲ್ಲಿಗೆ ಭೇಟಿ ಕೊಟ್ಟು ಆನಂದಿಸಲು ನೀವು ನೀಡಬೇಕಾದ ಒಂದೇ ಒಂದು ಖರ್ಚಾಗಿದೆ.

One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed