Search
  • Follow NativePlanet
Share
ಮುಖಪುಟ » ಸ್ಥಳಗಳು » ಮಹಾಬಲಿಪುರಂ » ಹವಾಮಾನ

ಮಹಾಬಲಿಪುರಂ ಹವಾಮಾನ

ಮಹಾಬಲಿಪುರಂಗೆ ಭೇಟಿ ಕೊಡಲು ನವೆಂಬರ್ ನಿಂದ ಫೆಬ್ರವರಿಯವರೆಗಿನ ಚಳಿಗಾಲದ ಅವಧಿ ಅತ್ಯಂತ ಸೂಕ್ತವಾಗಿದೆ.  ಏಕೆಂದರೆ ಈ ಅವಧಿಯಲ್ಲಿ ನೀವು ಪರಿಪೂರ್ಣವಾಗಿ " ಮಹಾಬಲಿಪುರಂನ ಅನುಭವ"ವನ್ನು ಪಡೆಯಬಹುದು. ಇದರ ಜೊತೆಗೆ ಜೂನ್‍ನಿಂದ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಸಹ ಹವಾಮಾನ ಚೆನ್ನಾಗಿರುವುದರಿಂದ ಇಲ್ಲಿಗೆ ಭೇಟಿ ಕೊಡಬಹುದು.

ಬೇಸಿಗೆಗಾಲ

ಬೇಸಿಗೆಯು ಇಲ್ಲಿ ಸುಡುವ ಬಿಸಿಲಿನಿಂದ ಕೂಡಿರುತ್ತದೆ. ಆಗ ಇಲ್ಲಿನ ಉಷ್ಣಾಂಶವು 21° ಸೆಲ್ಶಿಯಸ್‍ನಿಂದ 42° ಸೆಲ್ಶಿಯಸ್‍ವರೆಗೆ ಇರುತ್ತದೆ. ಇಲ್ಲಿನ ಸುಡುವ ಬಿಸಿಲು, ಸಮುದ್ರದ ಕಡೆಯಿಂದ ಬೀಸಿ ಬರುವ ತಂಗಾಳಿಯಿಂದ ತಡೆಯಬಹುದಾದರು, ಈ ಸಮಯದಲ್ಲಿ ಇಲ್ಲಿಗೆ ಭೇಟಿ ಕೊಟ್ಟು ಸ್ಥಳ ವೀಕ್ಷಣೆ ಮತ್ತು ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೋಳ್ಳದಿರುವುದು ಉತ್ತಮ. ಏಕೆಂದರೆ ಬಿಸಿಲನ್ನು ಸಹಿಸಿಕೊಳ್ಳಲು ಆಗದ ಜನರಿಗೆ ಇದು ಉತ್ತಮ ಕಾಲವಲ್ಲ.

ಮಳೆಗಾಲ

ಮಳೆಗಾಲದಲ್ಲಿ ಇಲ್ಲಿ ಅರ್ದ್ರತೆಯಿಂದ ಕೂಡಿರುವ ಉಷ್ಣಾಂಶವು  ಕಂಡುಬರುತ್ತದೆ. ಇಲ್ಲಿ ಸಾಮಾನ್ಯವಾಗಿ ಈ ಕಾಲದಲ್ಲಿ 25° ಸೆಲ್ಶಿಯಸ್ ಉಷ್ಣಾಂಶವಿರುತ್ತದೆ. ಅಲ್ಲದೆ ಇಲ್ಲಿ ಆಗಾಗ್ಗೆ ಮಳೆ ಬೀಳುತ್ತಿರುತ್ತದೆ. ಪ್ರವಾಸಿಗರು ಅದಕ್ಕೆ ಪೂರ್ವ ಸಿದ್ಧತೆ ಮಾಡಿಕೊಂಡಿರಬೇಕಾದುದು ಅನಿವಾರ್ಯ. ಹಾಗಾಗಿ ಇಲ್ಲಿಗೆ ಭೇಟಿ ಕೊಡಬೇಕಾದರೆ ಛತ್ರಿ, ರೈನ್ ಕೋಟ್ ತೆಗೆದುಕೊಂಡು ಹೋಗುವುದು ಉತ್ತಮ.

ಚಳಿಗಾಲ

ಮಹಾಬಲಿಪುರಂನಲ್ಲಿ ಚಳಿಗಾಲದ ಸಮಯದಲ್ಲಿ ಬೆಳಗಿನ ವೇಳೆಯಲ್ಲಿ ಆಹ್ಲಾದಕರವಾದ ಹವಾಮಾನವಿರುತ್ತದೆ. ರಾತ್ರಿಗಳು ಇಲ್ಲಿ ತಂಪಾಗಿ ಇರುತ್ತವೆ. ಅಲ್ಲದೆ ಈ ಅವಧಿಯಲ್ಲಿ ಕನಿಷ್ಠ ಉಷ್ಣಾಂಶವು 16° ಸೆಲ್ಶಿಯಸ್‍ಗೆ ಇಳಿದು ಅಪ್ಯಾಯಕಾರವಾದ ವಾತಾವರಣವನ್ನುಂಟು ಮಾಡುತ್ತದೆ. ಹಾಗಾಗಿ ಹೊರಗೆ ಸುತ್ತಾಡಲು, ದೇವಾಲಯಗಳಿಗೆ ಭೇಟಿಕೊಡಲು , ಇನ್ನಿತರ ಚಟುವಟಿಕೆಗಳಲ್ಲಿ ಪಾಲ್ಗೋಳ್ಳಲು ಈ ಸಮಯವು ಹೇಳಿ ಮಾಡಿಸಿದ ಸಮಯವಾಗಿರುತ್ತದೆ.