ನೆಹರೂ ಗುಲಾಬಿ ಉದ್ಯಾನ, ಲುಧಿಯಾನಾ

ಮುಖಪುಟ » ಸ್ಥಳಗಳು » ಲುಧಿಯಾನಾ » ಆಕರ್ಷಣೆಗಳು » ನೆಹರೂ ಗುಲಾಬಿ ಉದ್ಯಾನ

ನೆಹರೂ ಗುಲಾಬಿ ಉದ್ಯಾನ ಲುಧಿಯಾನದ ಹೃದಯ ಭಾಗದಲ್ಲಿದ್ದು, ಇದನ್ನು 1967ರಲ್ಲಿ ನಿರ್ಮಿಸಲಾಗಿತ್ತು.  27 ಎಕ್ರೆ ಜಾಗದಲ್ಲಿ ವ್ಯಾಪಿಸಿರುವ ಈ ಉದ್ಯಾನ ಏಶ್ಯಾದ ಅತೀ ದೊಡ್ಡ ಗುಲಾಬಿ ಉದ್ಯಾನವಾಗಿದೆ. ಸುಮಾರು 1600 ಬಗೆಯ ಗುಲಾಬಿಗಳ ಸುಮಾರು 17000 ಗಿಡಗಳು ಈ ಉದ್ಯಾನದಲ್ಲಿದೆ. ಪ್ರತೀ ವರ್ಷ ಇಲ್ಲಿ ಗುಲಾಬಿ ಉತ್ಸವ ನಡೆಯುತ್ತಿದ್ದು, ಇದನ್ನು ವೀಕ್ಷಿಸಲು ಸ್ಥಳೀಯರು ಹಾಗೂ ಹೊರಗಿನವರು ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಭವ್ಯ ಕಾರಂಜಿಗಳಿಂದ ಉದ್ಯಾನದ ಸೌಂದರ್ಯ ಹೆಚ್ಚಿಸಿರುವುದಲ್ಲದೆ ನಗರಕ್ಕೆ ವಿಶ್ವಮಾನ್ಯತೆಯನ್ನು ತಂದುಕೊಟ್ಟಿದೆ. ಇದು ವಾಕಿಂಗ್ ಮಾಡುವವರಿಗೆ ಪ್ರಶಾಂತವಾದ ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲು ಒಳ್ಳೆಯ ಸ್ಥಳವಾಗಿದೆ.

Please Wait while comments are loading...