Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡುಂಗಲ್ಲೂರ್ » ಆಕರ್ಷಣೆಗಳು » ತ್ರಿಪ್ರಯರ್ ಶ್ರೀ ರಾಮ ದೇವಾಲಯ

ತ್ರಿಪ್ರಯರ್ ಶ್ರೀ ರಾಮ ದೇವಾಲಯ, ಕೊಡುಂಗಲ್ಲೂರ್

1

ತ್ರಿಪ್ರಯರ್ ಶ್ರೀ ರಾಮ ದೇವಾಲಯವು ಕೊಡುಂಗಲ್ಲೂರಿನಲ್ಲಿರುವ  ಅತ್ಯಂತ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಇದು ತ್ರಿಪ್ರಯರ್ ನದಿಯ ದಂಡೆಯ ಮೇಲೆ ನೆಲೆಗೊಂಡಿದೆ. ಇದು ಕೊಡುಂಗಲ್ಲೂರ್ ಪಟ್ಟಣದಿಂದ 15 ಕಿ.ಮೀ ದೂರದಲ್ಲಿದೆ. ಮಹಾ ವಿಷ್ಣುವಿನ ಏಳನೆಯ ಅವತಾರವಾದ ಶ್ರೀ ರಾಮನಿಗಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.

ಹಲವಾರು ಪುರಾಣ ಕಥೆಗಳು ಮತ್ತು ದಂತ ಕಥೆಗಳು ಈ ಸುಂದರವಾದ ದೇವಾಲಯಗಳ ಸುತ್ತ ಸುತ್ತುತ್ತಿರುತ್ತದೆ. ದಂತಕಥೆಗಳ ಪ್ರಕಾರ ಈ ದೇವಾಲಯದಲ್ಲಿರುವ ವಿಗ್ರಹವು ಇಲ್ಲಿನ ಪಾಳೆಗಾರರಿಗೆ ಸಮುದ್ರ ತೀರದಲ್ಲಿ ದೊರೆತಿದ್ದಂತೆ.  ಈ ವಿಗ್ರಹವು ಬ್ರಹ್ಮ , ವಿಷ್ಣು ಮತ್ತು ಮಹೇಶ್ವರ ಅಂಶವನ್ನು ಒಳಗೊಂಡಿದೆಯಂತೆ. ಹಾಗಾಗಿ ಇದನ್ನು ತ್ರಿಮೂರ್ತಿಗಳ ಅಪರಾವತಾರವೆಂದು ಪರಿಗಣಿಸಿ ಪೂಜಿಸಲಾಗುತ್ತಿದೆ.

ಈ ದೇವಾಲಯವು ಇಲ್ಲಿ ನಡೆಯುವ ಅರಟ್ಟುಪುಳ ಪೂರಮ್ ಉತ್ಸವಕ್ಕಾಗಿ ಪ್ರಾಮುಖ್ಯತೆಯನ್ನು ಗಳಿಸಿದೆ. ಈ ದೇವಾಲಯ ಸಂಕೀರ್ಣವು ಗರ್ಭಗುಡಿ ಮತ್ತು ರಾಮಾಯಣದ ದೃಶ್ಯಗಳನ್ನು , ನವಗ್ರಹಗಳಿರುವ ಮರದ ಕೆತ್ತನೆಗಳನ್ನು ಹಾಗು ಪ್ರಾಚೀನ ಭಿತ್ತಿ ಚಿತ್ರಕಲೆಗಳನ್ನು ಹೊಂದಿರುವ ನಮಸ್ಕಾರ ಮಂಟಪವನ್ನು ಹೊಂದಿದೆ. ತ್ರಿಪ್ರಿಯರ್ ಶ್ರೀ ರಾಮ ದೇವಾಲಯವು ಪ್ರತಿನಿತ್ಯವು ಕೂತು (ನಾಟಕ) ಎಂಬ ಸಾಂಪ್ರದಾಯಿಕ ಕಲೆಯ ಪ್ರದರ್ಶನವನ್ನು ಏರ್ಪಡಿಸುತ್ತಿರುತ್ತದೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun