Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡುಂಗಲ್ಲೂರ್ » ಆಕರ್ಷಣೆಗಳು » ಚೆರಮನ್ ಜುಮಾ ಮಸೀದಿ

ಚೆರಮನ್ ಜುಮಾ ಮಸೀದಿ, ಕೊಡುಂಗಲ್ಲೂರ್

1

ಚೆರಮನ ಜುಮಾ ಮಸೀದಿಯು ಕೊಡುಂಗಲ್ಲೂರಿನ ಅತ್ಯಂತ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಈ ಮಸೀದಿಯನ್ನು ಕ್ರಿ.ಶ 629 ರಲ್ಲಿ ಮಲಿಕ್ ಬಿನ್ ದೀನರ್ ಎಂಬಾತನು  ನಿರ್ಮಿಸಿದನು. ಈ ಮಸೀದಿಯು ಭಾರತದ ಅತ್ಯಂತ ಪ್ರಾಚೀನ ಮಸೀದಿಯೆಂಬ ಕೀರ್ತಿಗೆ ಭಾಜನವಾಗಿದೆ. ಅಲ್ಲದೆ ಪ್ರಪಂಚದ ಎರಡನೆ ಅತ್ಯಂತ ಹಳೆಯ ಮಸೀದಿಯೆಂಬ ಕೀರ್ತಿಯು ಇದಕ್ಕೆ ದಕ್ಕಿದೆ. ಇತಿಹಾಸದ ಪ್ರಕಾರ ಕ್ರಿ.ಶ 1341ರಲ್ಲಿ ಬಂದ ಪ್ರವಾಹವು ಈ ಮಸೀದಿಯನ್ನು ಬಹುತೇಕ ನಾಶಗೊಳಿಸಿತು. ಇಂದು ನಾವು ನೋಡುವ ಚೆರಮನ್ ಜುಮಾ ಮಸೀದಿಯು ಜೀರ್ಣೋದ್ಧಾರವಾಗಿರುವಂತಹುದಾಗಿದೆ.

ಈ ಮಸೀದಿಯ ವಾಸ್ತುಶಿಲ್ಪವು ಗಮನ ಸೆಳೆಯುವಂತಿದೆ. ಇದರ ನಿರ್ಮಾಣದ ಶೈಲಿ ಮತ್ತು ವಿನ್ಯಾಸದಲ್ಲಿ ಹಿಂದೂ ದೇವಾಲಯಗಳ ಮಾದರಿಯನ್ನು ಅನುಸರಿಸಿರುವುದನ್ನು ನಾವು ಕಾಣಬಹುದು. ಈ ಮಸೀದಿಯ ಮಧ್ಯಭಾಗದಲ್ಲಿ ಒಂದು ನಂದಾದೀಪವನ್ನು ಉರಿಸಲಾಗುತ್ತಿದೆ. ಹಬ್ಬಹರಿದಿನಗಳಲ್ಲಿ ಹಲವು ಧರ್ಮದ ಜನರು ಧರ್ಮಬೇಧವಿಲ್ಲದೆ ಇಲ್ಲಿಗೆ ಬಂದು ಇಲ್ಲಿನ ನಂದಾದೀಪಗಳಿಗೆ ಎಣ್ಣೆಯನ್ನು ಸುರಿಯುತ್ತಾರೆ.

ಈ ಮಸೀದಿಯಲ್ಲಿ ಕಂಚಿನ ಎಣ್ಣೆ ದೀಪಗಳನ್ನು ಇಟ್ಟಿದ್ದಾರೆ. ಇವುಗಳು ಈ ಮಸೀದಿಯ ವಾಸ್ತುಶಿಲ್ಪದ ಅಂದವನ್ನು ಹೆಚ್ಚುಗೊಳಿಸಿವೆ. ಇಲ್ಲಿ ಒಂದು ರೋಸ್ ವುಡ್ಡಿನ ಪ್ರವಚನ ಪೀಠವನ್ನು ಇಡಲಾಗಿದ್ದು, ಇದು ತನ್ನ ಅಧ್ಬುತವಾದ ಕೆತ್ತನೆಗಳಿಂದ ಗಮನ ಸೆಳೆಯುತ್ತದೆ. ಇಲ್ಲಿರುವ ಬಿಳಿಯ ಅಮೃತಶಿಲೆಯ ಒಂದು ಗಟ್ಟಿಯನ್ನು ಮೆಕ್ಕಾದಿಂದ ತಂದು ಈ ಮಸೀದಿಯಲ್ಲಿ ಇಡಲಾಗಿದೆ ಎಂದು ನಂಬಲಾಗಿದೆ.

ಚೆರಮನ್ ಜುಮಾ ಮಸೀದಿಯು ಭಾರತದ ಇಸ್ಲಾಂ ಇತಿಹಾಸದಲ್ಲಿ ಒಂದು ಮಹತ್ವಪೂರ್ಣ ಅಂಶವಾಗಿ ಗುರುತಿಸಿಕೊಂಡಿದೆ. ಕೊಡುಂಗನಲ್ಲೂರಿಗೆ ಹೋಗುವ ಪ್ರತಿಯೊಬ್ಬ ಪ್ರವಾಸಿಗನು ಇದನ್ನು ನೋಡಲೆ ಬೇಕು.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun