ಸಂಘಗರ, ಕೆಯೊಂಝಾರ

ಸಂಘಗರ ದೀರ್ಘಕಾಲಿಕ ಜಲಪಾತವಾಗಿದ್ದು, ಕೆಯೊಂಜ್ಹಾರದ ಜಿಲ್ಲಾಕೇಂದ್ರದಿಂದ ಐದು ಕಿ.ಮೀ. ದೂರದಲ್ಲಿ ನೆಲೆಸಿದೆ. ಸ್ಥಳೀಯರಿಗೆ ಇದು ಅತ್ಯಂತ ಜನಪ್ರಿಯ ಪಿಕ್ನಿಕ್ ಮತ್ತು ವಿರಾಮ ತಾಣವಾಗಿದೆ. ಜಲಪಾತ ಸಣ್ಣದಾದರೂ ತುಂಬಾ ಸುಂದರವಾಗಿದೆ. ಸಂಘಗರ ಆಕರ್ಷಕ ಹಿನ್ನೆಲೆಯಲ್ಲಿದೆ. ಜಲಪಾತ ಆರಂಭವಾಗುವ ಪ್ರದೇಶದಲ್ಲಿ ಪ್ರಕೃತಿಯಲ್ಲಿ ವಿ ಆಕಾರದ ಕಣಿವೆಯೊಂದು ರೂಪುಗೊಂಡಿದೆ. ಇದೇ ಕಾರಣಕ್ಕಾಗಿ ಸ್ಥಳೀಯರ ಮತ್ತು ಸುತ್ತಮುತ್ತಲಿನವರಿಗೆ ವಿಹಾರಕ್ಕೆ ಸಂಘಗರ ಜಲಪಾತಕ್ಕೆ ಮೊದಲ ಆದ್ಯತೆ ನೀಡುತ್ತಾರೆ.

ಇದು ಸಲಹೆ ಮಾಡಲಾಗುವ ಪ್ರವಾಸಿ ತಾಣ ಕೂಡ. ಸಾವಿರಾರು ಮಂದಿ ಪ್ರವಾಸಿಗರು ವರ್ಷವಿಡೀ ಅದರಲ್ಲೂ ಚಳಿಗಾಲದಲ್ಲಿ ಹೆಚ್ಚಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ. ಮಳೆಗಾಲದಲ್ಲಿ ಜಲಪಾತವು ಧುಮ್ಮುಕ್ಕಿ ಹರಿಯುತ್ತದೆ ಮತ್ತು ಈ ವೇಳೆ ಇದರ ಸೊಬಗನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ಜಲಪಾತವು ರಾಷ್ಟ್ರೀಯ ಹೆದ್ದಾರಿ-6ರ ಸಮೀಪದಲ್ಲೇ ಇದೆ ಮತ್ತು ಟ್ರೆಕ್ಕಿಂಗ್ ಮತ್ತು ಕ್ಯಾಪಿಂಗ್ ಗೆ ಇದನ್ನು ಬಳಸಲಾಗುತ್ತದೆ.

Please Wait while comments are loading...