Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನಾಲ್ » ಆಕರ್ಷಣೆಗಳು » ಕರ್ನಾಲ್ ಕೋಟೆ

ಕರ್ನಾಲ್ ಕೋಟೆ, ಕರ್ನಾಲ್

1

ಕರ್ನಾಲ್ ಕೋಟೆಯು ಹಳೆಯ ಕೋಟೆಯೆಂದು ಸಹ ಕರೆಯಲ್ಪಡುತ್ತದೆ. ಇದರ ಹಿಂದೆ ವರ್ಣರಂಜಿತವಾದ ಇತಿಹಾಸವು ಅಡಗಿದೆ. ಇದನ್ನು 1764ರಲ್ಲಿ ಜಿಂದ್ ರಾಜನಾದ ಗಜಪತ್ ರೈಯವರು ನಿರ್ಮಿಸಿದರು. ನಂತರ ಇದನ್ನು ಮರಾಠರು ವಶಪಡಿಸಿಕೊಂಡರು. ಆನಂತರ ಜಾರ್ಜ್ ಥಾಮಸ್ ಹಾಗು ಲಾಡ್ವದ ರಾಜನ ವಶಕ್ಕೆ ಈ ಕೋಟೆ ಬಂದಿತು. ನಂತರ ಬ್ರಿಟೀಷ ಸೈನ್ಯ ಇದರ ಮೇಲೆ ತಮ್ಮ ಬಾವುಟವನ್ನು ಹಾರಿಸಿತು. ಕಡೆಯದಾಗಿ 1805 ರಲ್ಲಿ ಇದನ್ನು ಕರ್ನಾಲ್‍ನ ನವಾಬನಿಗೆ ಇದನ್ನು ಹಸ್ತಾಂತರಿಸಲಾಯಿತು.

ಒಂದು ವರ್ಷದ ನಂತರ ಬ್ರಿಟೀಷ್ ಸೈನ್ಯವು ಈ ಕೋಟೆಯನ್ನು ಮರಳಿ ತಮ್ಮ ವಶಕ್ಕೆ ಪಡೆಯಿತು. ಇವರು ಇದನ್ನು ಆಗ ನಿರ್ಮಾಣ ಹಂತದಲ್ಲಿದ್ದ ದಂಡು ಪ್ರಾಂತ್ಯದ ಒಂದು ಭಾಗವಾಗಿ ಬಳಸಲು ಆರಂಭಿಸಿದರು. ಇಲ್ಲಿ ಸೈನಿಕರ ಬಿಡಾರವನ್ನು, ಬಡವರ ನಿವಾಸಗಳನ್ನು , ಜೈಲು ಹಾಗು ನ್ಯಾಯಾಲಯಗಳನ್ನು ನಿರ್ಮಿಸಲಾಯಿತು. 1843ರಲ್ಲಿ ಬಂದ ಮಲೇರಿಯಾ ಸಮಯದಲ್ಲಿ ಇಲ್ಲಿನ ದಂಡು ಪ್ರದೇಶವನ್ನು ಖಾಲಿ ಮಾಡಿ ಅಂಬಾಲಾಗೆ ಸ್ಥಳಾಂತರಿಸಲಾಯಿತು.

ಅನಂತರ ಇದು ದೊಸ್ತ್ ಮಹಮ್ಮದ್ ಖಾನ್‍ರವರ ನಿವಾಸವಾಗಿ ಬದಲಾಯಿತು. ಇವರು ಆರು ತಿಂಗಳುಗಳ ಕಾಲ ಕಾಬೂಲಿನ ರಾಜರಾಗಿದ್ದರು. ಇವರನ್ನು ಕಲ್ಕತ್ತಾಗೆ ಸಾಗುವ ಹಾದಿಯಲ್ಲಿ ಬಂಧಿಸಲಾಯಿತು. ಇದೇ ಸಮಯದಲ್ಲಿ ಆಕಸ್ಮಿಕವಾಗಿ ಈತನ ಪುತ್ರಿ ಇಲ್ಲಿ ಮರಣ ಹೊಂದಿದಳು. ಆಕೆಯನ್ನು ಇಲ್ಲಿನ ಈಶಾನ್ಯ ದಿಕ್ಕಿನ ಬುರುಜಿನ ಬಳಿ ಸಮಾಧಿ ಮಾಡಲಾಗಿದೆ.

ಮತ್ತೆ ಇದನ್ನು ಕರ್ನಾಲ್‍ನ ನವಾಬನಿಗೆ ಹಸ್ತಾಂತರಿಸಲಾಯಿತು ಆದರೆ ಬ್ರಿಟೀಷ್ ಸರ್ಕಾರವು 1616 ರೂಪಾಯಿಗಳಿಗೆ ಮತ್ತೆ ಇದನ್ನು ಖರೀದಿಸಿತು. ಪ್ರಸ್ತುತ ಇದನ್ನು ಕರ್ನಾಲ್‍ನ ತಹಸಿಲ್ದಾರ್ ಮತ್ತು ಇನ್ನಿತರ ಸರ್ಕಾರಿ ಅಧಿಕಾರಿಗಳ ನಿವಾಸವನ್ನಾಗಿ ಬಳಸಲಾಗುತ್ತಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed