Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನಾಲ್ » ಆಕರ್ಷಣೆಗಳು » ಗುರುದ್ವಾರ ಮಂಜಿ ಸಾಹಿಬ್

ಗುರುದ್ವಾರ ಮಂಜಿ ಸಾಹಿಬ್, ಕರ್ನಾಲ್

1

ಗುರುದ್ವಾರ ಮಂಜಿ ಸಾಹಿಬ್ ಕರ್ನಾಲ್‍ನ ಜನ ನಿಬಿಡ ಸರಫ ಬಜಾರಿನಲ್ಲಿ ನೆಲೆಗೊಂಡಿದೆ. ಇದು ಗ್ರಾಂಡ್ ಟ್ರಂಕ್ ರಸ್ತೆಯಿಂದ ಒಂದು ಕಿ.ಮಿ ದೂರದಲ್ಲಿ ನೆಲೆಗೊಂಡಿದೆ. ಇತಿಹಾಸದ ಪ್ರಕಾರ ಸಿಖ್ಖರ ಪ್ರಥಮ ಗುರು ಶ್ರೀ ಗುರು ನಾನಕ್ ದೇವ್‍ಜೀಯವರು 1515ರಲ್ಲಿ ಇಲ್ಲಿಗೆ ಉದಾಸಿ ಎಂಬ ಪ್ರಥಮ ತೀರ್ಥ ಯಾತ್ರೆಯ ಸಲುವಾಗಿ ಭೇಟಿ ನೀಡಿದ್ದರಂತೆ. ಇವರನ್ನು ಒಂದು ದಿಬ್ಬದ ಮೇಲೆ ಇರುವ ಉದ್ಯಾನವನದಲ್ಲಿ ಬಿಡಾರ ಮಾಡಿಸಲಾಗಿತ್ತಂತೆ. ಅಲ್ಲಿ ಅವರು ತಮ್ಮ ಭಕ್ತಾಧಿಗಳ ಮುಂದೆ ಸ್ತೋತ್ರಗಳನ್ನು ಅಥವಾ ಶಬದ್‍ಗಳನ್ನು ಹಾಡಿ ನಲಿಯುತ್ತಿದ್ದರಂತೆ.

ಆ ದಿನಗಳಲ್ಲಿ ಕರ್ನಾಲ್‍ನ ಜನತೆ ಮುಸ್ಲಿಂ ಪೀರ್ ರವರ ಅಥವಾ ಪ್ರಸಿದ್ಧ ಪೀರ್ ಅಬು ಅಲಿ ಶಾ ಕಲಂಧರ್ ರವರ ಮುಂದಾಳತ್ವಕ್ಕೆ ಮಾರು ಹೋಗಿದ್ದರು. ಯಾವಾರ ಗುರು ನಾನಕರ ಮುಂದೆ ಭಕ್ತಾಧಿಗಳ ಜಾತ್ರೆಯೆ ನೆರೆಯಲು ಆರಂಭಿಸಿತೊ, ಆಗ ಇಲ್ಲಿನವರು ಈ ವಾರ್ತೆಯನ್ನು ಪೀರ್ ಮುಂದೆ ಇಟ್ಟರು. ಆಗ ಆ ಕಲಂಧರ್ ರವರು ಸಹ ಅಚ್ಚರಿಯೆನ್ನುವಂತೆ ಈ ವಾರ್ತೆಯನ್ನು ಕೇಳಿ ತಮ್ಮ ಅಸಂತೋಷ ಮತ್ತು ಹೊಟ್ಟೆಯುರಿಯನ್ನು ಹೊರಹಾಕಿದರಂತೆ.

ಇದರ ಫಲವಾಗಿ ಕಲಂಧರ್ ಗುರುನಾನಕರನ್ನು ನೋಡಲು ಬಯಸಿದರಂತೆ. ಆಗ ಅವರ ಮುಂದೆ ತಮ್ಮ ಶಕ್ತಿಯನ್ನು ಪ್ರದರ್ಶಿಸುವ ಸಲುವಾಗಿ ತಮ್ಮ ಮುಂದೆ ಒಂದು ಗೋಡೆಯನ್ನು ಸೃಷ್ಟಿಸಿದರಂತೆ, ಇವರು ಗುರು ನಾನಕ್ ಬಳಿ ಸಾಗುವಾಗ ಇವರ ಮುಂದೆ ಗೋಡೆ ಸಾಗುವಂತೆ ಮಾಡಿದರಂತೆ. ಗೋಡೆಯ ಹಿಂದೆ ಕಲಂಧರ್ ಸಾಗುತ್ತಿದ್ದಾಗ,  ಗುರು ನಾನಕ್‍ರವರ ಹತ್ತಿರಕ್ಕೆ ಬರುತ್ತಿದ್ದಂತೆ ಗೋಡೆ ಸಾಗುವುದನ್ನು ನಿಲ್ಲಿಸಿತಂತೆ. ಆಗ ಕಲಂಧರರಿಗೆ ಗುರುನಾನಕರ ಶಕ್ತಿ ಸಾಮರ್ಥ್ಯದ ಬಗ್ಗೆ ನಂಬಿಕೆ ಮೂಡಿತಂತೆ. ಅವರು ತಮ್ಮ ಸೋಲನ್ನು ಒಪ್ಪಿಕೊಂಡು ಗೋಡೆಯಿಂದ ಹೊರಗೆ ಬಂದು ನಾನಕರಿಗೆ ಗೌರವ ಸಲ್ಲಿಸಿ,ಅವರ ದರ್ಶನ ಪಡೆದರಂತೆ.

ಇದನ್ನೆಲ್ಲ ಅರಿತ ಗುರುನಾನಕರು ಕಲಂಧರ್ ರವರಿಗೆ ತಮ್ಮ ಶಕ್ತಿ ಸಾಮರ್ಥ್ಯವನ್ನು ತಮ್ಮ ಅಹಂಗಲ್ಲದೆ, ದೀನರ ಉದ್ಧಾರಕ್ಕೆ ಬಳಸುವಂತೆ ಸಲಹೆ ನೀಡಿದರು. ನಂಬಿಕೆಗಳ ಪ್ರಕಾರ ಸಿಖ್ಖರ ಆರನೆಯ ಗುರುಗಳಾದ ಗುರು ಹರಿಕಿಶನ್ ಸಾಹಿಬ್‍ರವರು ಸಹ 1663ರಲ್ಲಿ ದೆಹಲಿಗೆ ಸಾಗುವ ಹಾದಿಯಲ್ಲಿ ಇಲ್ಲಿಗೆ ಭೇಟಿ ನೀಡಿದ್ದರಂತೆ.

One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed