Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನಾಲ್ » ಆಕರ್ಷಣೆಗಳು » ಕರ್ನಾಲ್ ಕಂಟೋನ್ಮೆಂಟ್ ಚರ್ಚ್ ಗೋಪುರ

ಕರ್ನಾಲ್ ಕಂಟೋನ್ಮೆಂಟ್ ಚರ್ಚ್ ಗೋಪುರ, ಕರ್ನಾಲ್

1

ಕರ್ನಾಲ್ ಕಂಟೋನ್ಮೆಂಟ್ ಚರ್ಚ್ ಗೋಪರವು ಸೆಂಟ್. ಜೇಮ್ಸ್ ಚರ್ಚಿನ ಒಂದು ಭಾಗವಾಗಿದೆ. ಇದನ್ನು ಬ್ರಿಟೀಷರು 1805ರಲ್ಲಿ ನಿರ್ಮಿಸಿದರು. ಇದನ್ನು ಈ ಪ್ರಾಂತ್ಯದಲ್ಲಿ ಬೆಳವಣಿಗೆಯಾಗುತ್ತಿದ್ದ ಸಿಖ್ ಸೈನ್ಯ ಕ್ರಾಂತಿಯನ್ನು ಹದ್ದು ಬಸ್ತಿನಲ್ಲಿಡುವ ಸಲುವಾಗಿ ನಿರ್ಮಿಸಲಾಯಿತು.

ಆದರೆ ಮಲೇರಿಯಾ ರೋಗವು ಈ ಪ್ರದೇಶವನ್ನು ಕಾಡಲು ಆರಂಭಿಸಿದಾಗ ಬ್ರಿಟೀಷರು ಇಲ್ಲಿನ ಕಂಟೋನ್ಮೆಂಟ್ ( ದಂಡು ಪ್ರದೇಶ) ಅನ್ನು ಕ್ರಿ.ಶ 1843 ರಲ್ಲಿ ಅಂಬಾಲಾಗೆ ವರ್ಗಾಯಿಸಿದರು. ಆಗ ಅವರು ಇಲ್ಲಿನ ಚರ್ಚನ್ನು ಸಹ ಒಡೆದು ಅದರ ಕಚ್ಛಾವಸ್ತುಗಳನ್ನು ಸಾಗಿಸಿ ಪುನರ್ ನಿರ್ಮಾಣ ಮಾಡಿದರು. ಆದರೆ ಆಗ ಈ ಗೋಪುರವನ್ನು ಮಾತ್ರ ಹಾಗೆಯೇ ಉಳಿಸಿದರು. ನಂತರ ಸಾರ್ವಜನಿಕರ ಬಳಿ ನಿಧಿ ಸಂಗ್ರಹಿಸಿ ಈ ಚರ್ಚನ್ನು ಮರು ನಿರ್ಮಾಣ ಮಾಡಲಾಯಿತಂತೆ.

ಇಲ್ಲಿನ ಇನ್‍ಫ್ಯಾಂಟ್ರಿ ಪೆರೇಡ್ ಗ್ರೌಂಡ್ ಮತ್ತು ರೇಸ್ ಕೋರ್ಸ್ ಮಧ್ಯೆ ಇರುವ ಈ ಬೃಹದಾಕಾರದ ಗೋಪುರವು 35 ಮೀಟರ್ ಎತ್ತರವಿದೆ. ಇದರ ಮೇಲೆ ಶೋಭಿಸುವ ಶಿಲುಬೆಯು ಬ್ರಿಟೀಷರ ವಾಸ್ತುಶಿಲ್ಪ ಕಲೆಗೆ ಉದಾಹರಣೆಯಾಗಿ ನಿಂತಿದೆ. ನಾಲ್ಕು ಅಂತಸ್ತನ್ನು ಹೊಂದಿರುವ ಈ ಗೋಪುರವು ಏಳು ಮೈಲಿ ದೂರದಿಂದಲೆ ಕಾಣುತ್ತದೆ.

ಈ ಗೋಪುರದ ಮೊದಲ ಅಂತಸ್ತನ್ನು ಎಟ್ರುಸ್ಕನ್ ಗಾರೆಯಿಂದ ಮಾಡಿದ್ದರೆ, ಮೇಲಿನ ಅಂತಸ್ತನ್ನು ಸುಣ್ಣದ ಗಾರೆಯಿಂದ ಮಾಡಲಾಗಿದೆ. ಇದು ರೋಮ್ ಶೈಲಿಯ ಅರ್ಧ ಚಂದ್ರಾಕೃತಿಯ ಕಮಾನುಗಳನ್ನು ಹೊಂದಿದೆ. ಇದರ ಜೊತೆಗೆ ಚಾವಣಿಯಲ್ಲಿ ಅದ್ಭುತವಾದ ಕಲೆಯನ್ನು ಸಹ ನಾವಿಲ್ಲಿ ಕಾಣಬಹುದು. ಇದಲ್ಲದೆ ಇಲ್ಲಿಂದ ಸ್ಥಳಾಂತರಿಸುವಾಗ ತೆಗೆಯಲಾದ ಕೆಲವೊಂದು ಅಚ್ಚುಗಳನ್ನು ಸಹ ಮತ್ತೆ ಇಲ್ಲಿ ತಂದು ಇಡಲಾಗಿದೆ. ಇದು ಈ ನಗರದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun