Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನಾಲ್ » ಆಕರ್ಷಣೆಗಳು » ಕ್ರೈಸ್ತರ ರುದ್ರಭೂಮಿ

ಕ್ರೈಸ್ತರ ರುದ್ರಭೂಮಿ, ಕರ್ನಾಲ್

1

ಬ್ರಿಟೀಷರು ಉತ್ತರ ಭಾರತದಾದ್ಯಂತ ಕೆಲವೊಂದು ಅಪೂರ್ವವಾದ ರುದ್ರಭೂಮಿಗಳನ್ನು ( ಸೆಮೆಟ್ರಿ) ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ಕರ್ನಾಲ್ ಸಹ ಒಂದು. ಇಲ್ಲಿ ಬ್ರಿಟೀಷ್ ಪುರುಷರ,ಮಹಿಳೆಯರ, ಮಿಲಿಟರಿ ಸೇನಾಧಿಪತಿಗಳ, ದಂಡ ನಾಯಕರ ಮತ್ತು ಇನ್ನಿತರ ಅನಾಮಧೇಯ ವ್ಯಕ್ತಿಗಳ ಗೋರಿಗಳನ್ನು ಮತ್ತು ಸಮಾಧಿಗಳನ್ನು ಇಲ್ಲಿಡಲಾಗಿದೆ. ಈ ಸೆಮೆಟ್ರಿಯನ್ನು 1808ರಲ್ಲಿ ನಿರ್ಮಿಸಲಾಯಿತು. ಇದು ಭಾರತದ ಅತ್ಯಂತ ಹಳೆಯ ಕ್ರೈಸ್ತರ ರುದ್ರಭೂಮಿಗಳಲ್ಲಿ ಒಂದಾಗಿದೆ.

ಇದು ಸೆಂಟ್.ಜೇಮ್ಸ್ ಚರ್ಚಿನ ಬಳಿಯಿರುವ ಗೋಪುರದ ಬಳಿ ನೆಲೆಗೊಂಡಿದೆ. ಈ ಚರ್ಚನ್ನು ಕೆಡವಿ ಅದರ ಅವಶೇಷಗಳಿಂದ ಅಂಬಾಲದಲ್ಲಿ ಒಂದು ಹೊಸ ಚರ್ಚನ್ನು ನಿರ್ಮಾಣ ಮಾಡಲಾಯಿತು. ಇದು ಸರ್ಕಾರಿ ಪ್ರೌಢಶಾಲೆಯ ಬಳಿ, ಪೋಲಿಸ್ ಠಾಣೆಗೆ ಹೋಗುವ ಹಾದಿಯಲ್ಲಿರುವ ಪ್ಲಾಟ್ ನಂ.28ರಲ್ಲಿ ನೆಲೆಗೊಂಡಿದೆ.

ಈ ಸೆಮೆಟಿಟ್ರಿಯಲ್ಲಿ ಸುಮಾರು 50 ಇಂಗ್ಲೀಷ್ ಪುರುಷರು ಮತ್ತು ಮಹಿಳೆಯರ ಸಮಾಧಿಗಳನ್ನು ನಾವು ನೋಡಬಹುದು. ಇವುಗಳಲ್ಲಿ ಪ್ರಮುಖವಾದವು ಕ್ಯಾಪ್ಟನ್ ರಾಬರ್ಟ್ ಮೊರಿಸ್ ಬಾಗ್‍ಶಾ, ಜೆ ಎನ್ ಬಾನೊಮನ್, ಡ್ರಮ್ ಮೇಜರ್ 9ನೇ ರೆಜಿಮೆಂಟ್ ಇವರು 1809 ಜನವರಿ 8ರಂದು ನಿಧನ ಹೊಂದಿದರು. ಇದಲ್ಲದೆ ಜೆನರಲ್ ಅನ್ಸನ್ ಮತ್ತು ಕಮಾಂಡರ್ ಇನ್ ಚೀಫ್ ಆಗಿದ್ದ ಕಲೊನೆಲ್ ಹ್ಯಾಲಿಫಾಕ್ಸ್ ಅವರು ದೆಹಲಿಗೆ ಸಾಗುವಾಗ ನಿಧನ ಹೊಂದಿದ್ದರು. ಅವರ ಸಮಾಧಿಗಳನ್ನು ಸಹ ನಾವು ಇಲ್ಲಿ ನೋಡಬಹುದು. ಈ ಸೆಮೆಟ್ರಿಯ ಸುತ್ತ 1875ರಲ್ಲಿ ಕಲ್ಲಿನ ಗೋಡೆಯನ್ನು ನಿರ್ಮಾಣ ಮಾಡಲಾಯಿತು. ಇದು ಹರಿಯಾಣ ರಾಜ್ಯದ ಸಂರಕ್ಷಿತ ಸ್ಮಾರಕವೆಂದು ಗುರುತಿಸಲ್ಪಟ್ಟಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue