Search
 • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕುಡಿ » ಆಕರ್ಷಣೆಗಳು » ತೆನ್ ತಿರುಪತಿ

ತೆನ್ ತಿರುಪತಿ, ಕಾರೈಕುಡಿ

0

ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯ ತೆನ್ ತಿರುಪತಿಯು ಅರಿಯಕ್ಕುಡಿಯಲ್ಲಿದೆ. ಇದು ಕರೈಕುಡಿಯಿಂದ ಅಂದಾಜು 5 ಕಿ.ಮೀ ದೂರದಲ್ಲಿದೆ. ಈ ದೇವಾಲಯದ ಮುಖ್ಯ ದೇವರು ವೆಂಕಟಾಚಲಪತಿ. ಹೀಗಾಗಿ ಇದು ಆಸ್ತಿಕರ ವಲಯದಲ್ಲಿ ಅತ್ಯಂತ ಆದರಕ್ಕೆ ಪಾತ್ರವಾಗಿದೆ. ಈ ದೇವರನ್ನು ತಿರುವೆಂಕಡಮುಡಯಿಯನ್ ಎಂದು ಸಹ ಕರೆಯಲಾಗುತ್ತದೆ. ಈ ದೇವಾಲಯವನ್ನು ವೆಂಕಟರಮಣಸ್ವಾಮಿಯ ಭೂಲೋಕದ ನಿವಾಸಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಜನರ ನಂಬಿಕೆಯ ಪ್ರಕಾರ, ಈ ದೇವಾಲಯದಲ್ಲಿ ಪ್ರಾರ್ಥಿಸುವುದು ತಿರುಪತಿಯಲ್ಲಿ ಪೂಜೆ ಸಲ್ಲಿಸುವುದಕ್ಕೆ ಸಮವೆಂದು ಭಾವಿಸಲಾಗಿದೆ. ಹಾಗಾಗಿಯೆ ಇದಕ್ಕೆ ತೆನ್ ತಿರುಪತಿ ಅಥವಾ ದಕ್ಷಿಣದ ತಿರುಪತಿ ಎಂಬ ಹೆಸರು ಬಂದಿದೆ.

ತೆನ್ ತಿರುಪತಿಯು ಅತ್ಯಂತ ಪ್ರಾಚೀನ ದೇವಾಲಯವಾಗಿದ್ದು, ಇತ್ತೀಚೆಗೆ ತಾನೆ ಜೀರ್ಣೋದ್ಧಾರಗೊಂಡಿದೆ. ಆದರೆ ಈ ಪ್ರಕ್ರಿಯೆಯು ಈ ದೇವಾಲಯದ ಮೂಲ ಸ್ವರೂಪವನ್ನು ಅಳಿಸಿಹಾಕಿತು. ಆದರೆ ಈ ದೇವಾಲಯದ ಅಸ್ತಿತ್ವದ ದೃಷ್ಟಿಯಿಂದ ಜೀರ್ಣೋದ್ಧಾರ ಆಗಲೇ ಬೇಕಿತ್ತು. ಆದರು ಸಹ ಈ ದೇವಾಲಯದಲ್ಲಿ ಗರುಡನ ಮೂರ್ತಿಯನ್ನು ಮೂಲ ಸ್ವರೂಪದಲ್ಲಿ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದು ದೇವಾಲಯದ ಉತ್ತರ ಭಾಗದಲ್ಲಿದ್ದು, ಇದನ್ನು ಕಾಲ್‍ಗರುಡನ್ ಎಂದು ಕರೆಯುತ್ತಾರೆ.

ಪ್ರತಿದಿನವು ಇಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಆ ಸಮಯದಲ್ಲಿ ಇಲ್ಲಿ ಭಕ್ತಾಧಿಗಳು ಮತ್ತು ಪ್ರವಾಸಿಗರು ತಪ್ಪದೆ ಹಾಜರಿರುತ್ತಾರೆ.

One Way
Return
From (Departure City)
To (Destination City)
Depart On
22 Jan,Wed
Return On
23 Jan,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 Jan,Wed
Check Out
23 Jan,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 Jan,Wed
Return On
23 Jan,Thu
 • Today
  Karaikudi
  35 OC
  95 OF
  UV Index: 8
  Sunny
 • Tomorrow
  Karaikudi
  29 OC
  85 OF
  UV Index: 7
  Moderate or heavy rain shower
 • Day After
  Karaikudi
  29 OC
  85 OF
  UV Index: 7
  Moderate or heavy rain shower