Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕುಡಿ » ಆಕರ್ಷಣೆಗಳು » ಕನಡುಕತನ್

ಕನಡುಕತನ್, ಕಾರೈಕುಡಿ

1

ಕನಡುಕತನ್ ಎಂಬುದು ಶಿವಗಂಗೈ ಜಿಲ್ಲೆಯಲ್ಲಿರುವ ಕಾರೈಕುಡಿ ಪಟ್ಟಣಕ್ಕೆ ಸಮೀಪದಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಈ ಸ್ಥಳದ ವೈಶಿಷ್ಟ್ಯವು ಇಲ್ಲಿರುವ ಮನೆ ಮತ್ತು ಸ್ಥಳೀಯ ಆಹಾರ ಶೈಲಿಯಲ್ಲಿ ಅಡಗಿದೆ. ಕನಡುಕತನ್‍ನಲ್ಲಿ ಮನೆಗಳು ದೊಡ್ಡದಾಗಿದ್ದು, ಸಾಂಪ್ರದಾಯಿಕ ಚೆಟ್ಟಿನಾಡ್ ಶೈಲಿಯಲ್ಲಿ ನಿರ್ಮಾಣಗೊಂಡಿವೆ. ಇವುಗಳ ಮುಖ್ಯದ್ವಾರಗಳು ಮತ್ತು ಪ್ರವೇಶದ್ವಾರಗಳು ಹಿಂದೂ ದೇವಾಲಯಗಳನ್ನು ಹೋಲುತ್ತದೆ. ಇವುಗಳು ಭವ್ಯವಾಗಿದ್ದು, ಸೂಕ್ಷ್ಮ ಕೆತ್ತನೆಗಳಿಂದ ಕೂಡಿದೆ.

ಕನಡುಕತನ್‍ನ ಸ್ಥಳೀಯ ಆಹಾರವನ್ನು ಸಾಂಪ್ರದಾಯಿಕ ಚೆಟ್ಟಿನಾಡ್ ಶೈಲಿಯಂತೆ ಮಸಾಲೆ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಕರೈಕುಡಿಗೆ ಆಗಮಿಸುವ ಪ್ರವಾಸಿಗರು ಸುಮ್ಮನೆ ಇಲ್ಲಿನ ಖಾದ್ಯಗಳ ರುಚಿಯನ್ನು ಸವಿಯುವ ಸಲುವಾಗಿ ಇಲ್ಲಿಗೆ ಆಗಮಿಸುತ್ತಾರೆ.

ಕನಡುಕತನ್‍ನ ರಸ್ತೆಗಳಲ್ಲಿ ಮಳೆ ನೀರನ್ನು ಸುರಕ್ಷಿತವಾಗಿ ಸಂಗ್ರಹಿಸಲು ಚರಂಡಿಗಳಿಗೆ ವೈರ್ ಮೆಷ್ ಗಳನ್ನು ಅಳವಡಿಸಲಾಗಿದೆ. ಇದು ಈ ಊರಿನಲ್ಲಿ ಕಾಣಸಿಗುವ ಒಂದು ಸಾಮಾನ್ಯ ಅಂಶವಾಗಿದೆ. ಅಲ್ಲದೆ ಇಲ್ಲಿ ಮಳೆ ನೀರನ್ನು ಬಳಕೆಗೆ ಯೋಗ್ಯವಾಗಿಸಲು ಒಂದು ಶುದ್ಧೀಕರಣ ಘಟಕವನ್ನು ಸಹ ತೆರೆಯಲಾಗಿದೆ. ಕನಡುಕತನ್‍ನಿಂದ ದೇಶದ ಎಲ್ಲ ಊರು ಮತ್ತು ಪಟ್ಟಣಗಳು ಈ ಮಳೆ ನೀರು ಸಂಗ್ರಹಿಸುವ ವಿಚಾರವನ್ನು ಕಲಿಯಬೇಕೆಂದು ನಿಸ್ಸಂಶಯವಾಗಿ ಹೇಳಬಹುದು.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon