ರಸ್ತೆ ಮೂಲಕ ಕರೈಕುಡಿಗೆ ತಲುಪುವುದು ಸುಲಭ. ರಾಜ್ಯದ ಇತರ ನಗರಗಳಿಂದ ಹಲವಾರು ರಾಜ್ಯ ಸರ್ಕಾರಿ ಸಂಸ್ಥೆಯ ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳು ಕರೈಕುಡಿಗೆ ಬಂದು ಹೋಗುತ್ತಿರುತ್ತವೆ. ಕರೈಕುಡಿಯಲ್ಲಿ ಎರಡು ಬಸ್ ನಿಲ್ದಾಣಗಳಿವೆ. ಇದರಲ್ಲಿ ಒಂದು ದಕ್ಷಿಣ ಕರೈಕುಡಿಯಲ್ಲಿರುವ ಹಳೆ ಬಸ್ ನಿಲ್ದಾಣವಾದರೆ, ಇನ್ನೊಂದು ಉತ್ತರ ಕರೈಕುಡಿಯಲ್ಲಿರುವ ಹೊಸ ಬಸ್ ನಿಲ್ದಾಣವಾಗಿದೆ. ನೀವು ಬಸ್ ಏರುವ ಮೊದಲು ಅದು ಎಲ್ಲಿಗೆ ಹೋಗುತ್ತದೆ ಎಂಬುದನ್ನು ಖಾತ್ರಿ ಪಡಿಸಿಕೊಂಡು ಏರುವುದು ಉತ್ತಮ.