ತಿರುಚಿರಾಪಳ್ಳಿ ಅಥವಾ ತಿರುಚಿಯ ವಿಮಾನ ನಿಲ್ದಾಣವು ಕರೈಕುಡಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಇದೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಕರೈಕುಡಿಯಿಂದ 90 ಕಿ.ಮೀ ದೂರದಲ್ಲಿದೆ. ಇದರ ಜೊತೆಗೆ ಮಧುರೈ ವಿಮಾನ ನಿಲ್ದಾಣವು ಸಹ ಇಲ್ಲಿಂದ 90 ಕಿ.ಮೀ ದೂರದಲ್ಲಿದೆ. ತಿರುಚ್ಚಿಯಲ್ಲಿರುವ ವಿಮಾನ ನಿಲ್ದಾಣಕ್ಕೆ ಸಿಂಗಾಪುರ್, ದುಬೈ, ಶಾರ್ಜಾ, ಕುವೈತ್, ಕೊಲೊಂಬೊ ಮತ್ತು ಕೌಲಾಲಂಪುರಗಳಿಂದ ವಿಮಾನಗಳು ಬಂದು ಹೋಗುತ್ತಿರುತ್ತವೆ.