Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಗ್ರಾ » ಆಕರ್ಷಣೆಗಳು » ಧೌಲಧರ್ ಶ್ರೇಣಿ

ಧೌಲಧರ್ ಶ್ರೇಣಿ, ಕಂಗ್ರಾ

2

ಧೌಲಧರ್ ಶ್ರೇಣಿಯು ಹಲವಾರು ಬೆಟ್ಟಗಳನ್ನು ಹೊಂದಿದ್ದು, ಕಂಗ್ರಾ ಜಿಲ್ಲೆಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಈ ಶ್ರೇಣಿಯು ಕಂಗ್ರಾ ಮತ್ತು ಮಂಡಿಯಲ್ಲಿ ದಕ್ಷಿಣ ಹಿಮಾಲಯವು ಉತ್ತರಮುಖಿಯಾಗಿ ಬೆಳೆಯುವುದನ್ನು ತಡೆದಿದೆ. ಇಲ್ಲಿ ಪ್ರವಾಸಿಗರು ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೋಳ್ಳಬಹುದು. ಇಲ್ಲಿ ಕೈಗೊಳ್ಳುವ ಚಾರಣವು ಚಾರಣಿಗರನ್ನು ಮಂತ್ರ ಮುಗ್ಧಗೊಳಿಸುತ್ತದೆ. ಹನುಮಾನ್-ಕಾ-ಟಿಬ್ಬ ಅಥವಾ ಶ್ವೇತ ಪರ್ವತವು ಈ ಶ್ರೇಣಿಯ ಅತ್ಯಂತ ಎತ್ತರದ ಪರ್ವತವಾಗಿದೆ.

ಹೊರಭಾಗದ ಹಿಮಾಲಯ ಅಥವಾ ಕಿರು ಹಿಮಾಲಯವೆಂದೆ ಜನಪ್ರಿಯವಾಗಿರುವ ಈ ಪ್ರದೇಶವು ಹಿಮಾಚಲ ಪ್ರದೇಶದ ನೈಋತ್ಯದಲ್ಲಿರುವ ಡಾಲ್‍ಹೌಸಿ ಬಳಿಯಲ್ಲಿ ಪ್ರಾರಂಭವಾಗಿ ಕುಲ್ಲು ಜಿಲ್ಲೆಯಲ್ಲಿನ ಬಿಯಾಸ್ ನದಿಯ ಬಳಿ ಅಂತ್ಯಗೊಳ್ಳುತ್ತದೆ. ಧೌಲಾಧರ್ ಶ್ರೇಣಿಯ ಔನ್ನತ್ಯವು ಸಮುದ್ರ ಮಟ್ಟದಿಂದ 3500 ರಿಂದ 6000 ಮೀಟರ್ ಗಳ ನಡುವೆ ಬರುತ್ತದೆ. ಪ್ರವಾಸಿಗರು ಇಲ್ಲಿಂದ ಕಂಗ್ರಾ ಕಣಿವೆಯ ಮಂತ್ರಮುಗ್ಧಗೊಳಿಸುವಂತಹ ದೃಶ್ಯಗಳನ್ನು ಕಾಣಬಹುದು. ಧೌಲಧರ್ ಶ್ರೇಣಿಯು ಕಲ್ಲು ಬಂಡೆಗಳಿಂದ ಕೂಡಿದ್ದು, ಗ್ರಾನೈಟ್, ಬಳಪದ ಕಲ್ಲುಗಳು(ಈ ಪ್ರಾಂತ್ಯದಲ್ಲಿ ಮನೆಗಳ ಮಾಡಿಗೆ ಬಳಸಲಾಗುತ್ತದೆ), ಸುಣ್ಣದ ಕಲ್ಲುಗಳು ಮತ್ತು ಮರಳುಗಲ್ಲುಗಳನ್ನು ನಾವು ಇಲ್ಲಿ ಕಾಣಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed