ಕಂಗ್ರಾ ಕೋಟೆ, ಕಂಗ್ರಾ

ಕಂಗ್ರಾ ರಾಜವಂಶಸ್ಥರಿಂದ ನಿರ್ಮಿತ ಕಂಗ್ರಾ ಕೋಟೆಯನ್ನು ನಗರ ಕೋಟ್ ಎಂದೂ ಕೂಡ ಕರೆಯಲಾಗುತ್ತದೆ. ಸಮುದ್ರ ಮಟ್ಟದಿಂದ 350 ಮೀ. ಎತ್ತರದಲ್ಲಿ ನೆಲೆಸಿರುವ ಈ ಕೋಟೆ ನಾಲ್ಕು ಕಿ.ಮೀ ವಿಸ್ತೀರ್ಣದಲ್ಲಿ ಹರಡಿದೆ. ಈ ಪ್ರದೇಶವನ್ನು ಪುರಾನಾ ಕಂಗ್ರಾ ಎಂದು ಕರೆಯಲಾಗುತ್ತದೆ ಮತ್ತು ಇದು ಕಂಗ್ರಾ ಪಟ್ಟಣದಿಂದ ಮೂರು ಕಿ.ಮೀ ದೂರದಲ್ಲಿದೆ.

ಈ ಕೋಟೆಯ ಉಲ್ಲೇಖವು ಮಹಾಭಾರತ ಮಾತ್ರವಲ್ಲದೆ, ಅಲೇಕ್ಸಾಂಡರಿನ ಯುದ್ಧ ದಾಖಲೆಗಳಲ್ಲೂ ಬಂದಿದೆ. ಎರಡು ನದಿಗಳಾದ ಬಂಗಾನಾ ಮತ್ತು ಮಂಝಿ ನದಿಗಳ  ಸಂಗಮದಲ್ಲಿ ನಿರ್ಮಿತ ಈ ಕೋಟೆ ಗಟ್ಟಿಮುಟ್ಟಾದ ಗೋಡೆಗಳನ್ನು ಹೊಂದಿದೆ. ಒಂದು ಚಿಕ್ಕ ಕೋರ್ಟ್ಯಾರ್ಡ್ ಇದ್ದು ಅದರ ಮೂಲಕ ಈ ಕೋಟೆಯನ್ನು ಪ್ರವೇಶಿಸಬಹುದು. ಇರುವ ಎರಡು ಗೇಟ್ ಗಳಲ್ಲಿ ಒಂದರ ಮೇಲೆ ಸಿಖ್ ಬರವಣಿಗೆಯಿದ್ದು ಅದನ್ನು 'ಪಟಕ್' ಅಥವಾ ರಂಜಿತ್ ಸಿಂಗ್ ಗೇಟ್ ಎಂದು ಕರೆಯಲಾಗುತ್ತದೆ.

ಇಲ್ಲಿರುವ ಅಹಾನಿ ಅಥವಾ ಅಮಿರಿ ದರ್ವಾಜಾ ಮೂಲಕ ಪ್ರವಾಸಿಗರು ಕೋಟೆಯ ಮೇಲ್ತುದಿಗೆ ಪ್ರವೇಶಿಸಬಹುದಾಗಿದೆ. ಕಂಗ್ರಾ ಆಡಳಿತದ ಮೊದಲ ಗವರ್ನರ್ ನವಾಬ್ ಅಲೀಫ್ ಖಾನ್ ಇದರ ಗೇಟ್ ಗಳನ್ನು ನಿರ್ಮಿಸಿದ. ಪ್ರವಾಸಿಗರು ಇಲ್ಲಿ ಬಹುಮುಖ ಕೋನದ ಲಕ್ಷ್ಮಿ ನಾರಾಯಣ ದೇಗುಲಕ್ಕೂ ಭೇಟಿ ನೀಡಬಹುದು. ಇದಲ್ಲದೆ ಆದಿನಾಥನ ದೇವಾಲಯವನ್ನೂ ಇಲ್ಲಿ ಕಾಣಬಹುದಾಗಿದೆ.

Please Wait while comments are loading...