ನಾಗರ್ ಕೋಟ್, ಕಂಗ್ರಾ

ನಾಗರ್ ಕೋಟ್ ಎಂಬುದು ಕಂಗ್ರಾದ ಪ್ರಮುಖ ಪ್ರವಾಸಿ ತಾಣವಾಗಿದೆ. ಮೊದಲು ಕಂಗ್ರಾವನ್ನು ನಾಗರ್ ಕೋಟ್ ಎಂದೆ ಕರೆಯಲಾಗುತ್ತಿತ್ತು. ಕಂಗ್ರಾ ಕಣಿವೆಯ ಭವ್ಯ ನೋಟವನ್ನು ಒದಗಿಸುವ ಈ ಕೋಟೆಯು ಬಂಗಾಂಗ ಮತ್ತು ಮಂಝಿ ಹೊಳೆಗಳು ಕೂಡುವ ಸ್ಥಳದಲ್ಲಿದೆ. ಈ ಕೋಟೆಗೆ ಬೃಹತ್ ಮರದ ದ್ವಾರಬಾಗಿಲು ಇದೆ. ಇಲ್ಲಿ ರಣ್‍ಜೀತ್ ಸಿಂಗ್ ದರ್ವಾಜ ಎಂಬ ಬಾಗಿಲಿದ್ದು, ಅದು ಜಹಾಂಗೀರ್ ದರ್ವಾಜವನ್ನು ಸಂಪರ್ಕಿಸುತ್ತದೆ. ಇವೆರಡು ಕೋಟೆಯ ಪ್ರಾಂಗಣಕ್ಕೆ ಸಂಪರ್ಕ ಕಲ್ಪಿಸುತ್ತವೆ. ಇದರ ಮೂಲಕ ಜಹಾಂಗೀರ್ ಪ್ರಾರ್ಥನೆ ಸಲ್ಲಿಸಿದ ಮಸೀದಿಗೆ ತಲುಪಬಹುದು. ಮೆಹ್ರಾಬ್ ಎಂದು ಕರೆಯಲಾಗುವ ಒಂದು ಕಮಾನು ಇಲ್ಲಿದೆ. ಇದು ಶಿಥಿಲಾವಸ್ಥೆಯಲ್ಲಿದ್ದು, ಪ್ರವಾಸಿಗರು ಇಂದಿಗು ಇದನ್ನು ವೀಕ್ಷಿಸಬಹುದು.

ಮೆಹ್ರಾಬ್ ಬಳಿಯಲ್ಲಿ ಅಂಧೇರಿ ದರ್ವಾಜವಿದೆ. ಇಲ್ಲಿರುವ ಎಲ್ಲ ಬಗೆಯ ದರ್ವಾಜಗಳಲ್ಲಿ ದರ್ಶಿನಿ ದರ್ವಾಜವು ಅತ್ಯಂತ ಹಳೆಯದಾಗಿದ್ದು, ಇಂದಿಗು ಸುಸ್ಥಿತಿಯಲ್ಲಿರುವುದನ್ನು ಕಾಣಬಹುದಾಗಿದೆ. ಈ ದ್ವಾರವು ಅತ್ಯಾಕರ್ಷಕವಾದ ಸಭಾಂಗಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಸಭಾಂಗಣಕ್ಕೆ ಸುತ್ತಲು ಎಲ್ಲೆಯಿದ್ದು, ಕಲ್ಲಿನ ಹಾಸನ್ನು ಹಾಕಲಾಗಿದೆ. ನಾಗರ್ ಕೋಟೆಯನ್ನು ಆಳಿದ ಎಲ್ಲ ರಾಜರು ತಮ್ಮ ತಮ್ಮ ಇಷ್ಟವಾದ ಧಾರ್ಮಿಕ ರಚನೆಗಳನ್ನು ಇಲ್ಲಿ ನಿರ್ಮಿಸಿದ್ದಾರೆ. ಇಲ್ಲಿ ಜೈನ ದೇವಾಲಯಗಳು ಮತ್ತು ಕನ್ನಡಿಗಳಿಂದ ಅಲಂಕಾರಗೊಂಡಿರುವ ಶೀಷ್ ಮಹಲ್ ಸಹ ಇದೆ. ಪ್ರವಾಸಿಗರು ಇದರ ಮಾಡಿನಲ್ಲಿ ಕನ್ನಡಿಗಳನ್ನು ಮತ್ತು ವೀಕ್ಷಣಾಗೋಪುರವನ್ನು ವೀಕ್ಷಿಸಲು ಇಲ್ಲಿಗೆ ಬರುತ್ತಾರೆ.

Please Wait while comments are loading...