ತಾರಘಢ್ ಅರಮನೆ, ಕಂಗ್ರಾ

15 ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ನೆಲೆಗೊಂಡಿರುವ ತಾರಘಢ್ ಅರಮನೆಯು ಕಂಗ್ರಾದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದು ದಟ್ಟವಾದ ಹಸಿರಿನಿಂದ ಕೂಡಿದ ಟೀ ತೋಟಗಳಿಂದ ಆವೃತವಾಗಿದೆ. ಕಂಗ್ರಾದ ಕಲುಷಿತಗೊಳ್ಳದ ಮತ್ತು ಅಷ್ಟೇನು ಚಿರಪರಿಚಿತವಲ್ಲದ ಸ್ಥಳ ಇದೆಂದು ಪರಿಗಣಿಸಲ್ಪಟ್ಟಿದೆ. ಐತಿಹಾಸಿಕವಾಗಿ ಈ ಸ್ಥಳವನ್ನು 'ಅಲ್ಹಿಲ' ಎಂದರೆ ಅರ್ಧ ಚಂದ್ರಾಕಾರವಾದ ಭೂಮಿ ಎಂದು ಕರೆಯಲಾಗುತ್ತಿತ್ತು. ತಾರಾಘಢ್ ಅರಮನೆಯನ್ನು ಮೂಲತಃ  ಬೇಸಿಗೆ ಅರಮನೆಯಾಗಿ ಬಳಸಲಾಗುತ್ತಿತ್ತು ಅನಂತರ ಇದನ್ನು ಜಮ್ಮು ಕಾಶ್ಮೀರ ರಾಜ ಮನೆತನದವರು ತಮ್ಮ ವಶಕ್ಕೆ ಪಡೆದು ಕೊಂಡರು. ಧೌಲಾಧರ್ ಬೆಟ್ಟಗಳ ಬುಡದಲ್ಲಿರುವ ಈ ಅರಮನೆಯನ್ನು ಪ್ರಸ್ತುತ ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. 1930 ರಿಂದ ಹೋಟೆಲ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಈ ಅರಮನೆಯಲ್ಲಿ ಒಳಾಂಗಣ ಪೀಠೋಪಕರಣಗಳು ಅತ್ಯದ್ಭುತವಾಗಿವೆ. ಇಲ್ಲಿನ ಕೋಣೆಗಳನ್ನು ವಸಾಹತು ಕಾಲದ ಶೈಲಿಯಲ್ಲಿ ನಿರ್ಮಿಸಲಾಗಿದೆ. ವಿಶಾಲವಾದ ಮುಂಭಾಗ ಮತ್ತು ತೇಗದ ಮರದ ಊಟದ ಮೇಜುಗಳು ಇಲ್ಲಿನ ಆಕರ್ಷಣೆಗಳಾಗಿವೆ.

Please Wait while comments are loading...