ಬಜ್ರೇಶ್ವರಿದೇವಿ ದೇವಾಲಯ, ಕಂಗ್ರಾ

ಮುಖಪುಟ » ಸ್ಥಳಗಳು » ಕಂಗ್ರಾ » ಆಕರ್ಷಣೆಗಳು » ಬಜ್ರೇಶ್ವರಿದೇವಿ ದೇವಾಲಯ

11ನೇ ಶತಮಾನದಲ್ಲಿ ನಿರ್ಮಾಣಗೊಂಡ ಸುಂದರ ದೇಗುಲ ಬಜ್ರೇಶ್ವರಿ ದೇವಾಲಯ. ಇಲ್ಲಿ ಹಿಂದು ದೇವತೆ ವಜ್ರೇಶ್ವರಿಯ ಆರಾಧನೆ ನಡೆಯುತ್ತದೆ. ಕಲ್ಲಿನಿಂದ ನಿರ್ಮಾಣಗೊಂಡಿರುವ ದೇವಸ್ಥಾನ ಶಿಖರ ಮಾದರಿಯ ವಾಸ್ತುಶಿಲ್ಪವನ್ನು ಒಳಗೊಂಡಿದೆ. ದೇವಾಲಯದ ನಿರ್ಮಾಣ ಕಾಲದ ಬಗ್ಗೆ ಇಲ್ಲಿರುವ ಎರಡು ಕಂಬಗಳು ಅಗತ್ಯ ಮಾಹಿತಿಯನ್ನು ಒದಗಿಸುತ್ತವೆ.

ದೇವಾಲಯದ ಹೊರ ಬೀಳುವ ಸ್ಥಳದಲ್ಲಿ ನಾಲ್ಕು ಕೈಗಳನ್ನು ಹೊಂದಿರುವ ಹಿಂದು ದೇವತೆ ದುರ್ಗೆಯ ಮೂರ್ತಿ ಗಮನ ಸೆಳೆಯುತ್ತದೆ. ದೇವಿಯು ಹುಲಿ ಮೇಲೆ ಆಸೀನಳಾಗಿದ್ದಾಳೆ. ಇಲ್ಲಿನ ಅನೇಕ ಖಂಬಗಳ ಮೇಲೆ ಹಿಂದು ದೇವರು ಹಾಗೂ ದೇವತೆಗಳನ್ನು ಸುಂದರವಾಗಿ ಕೆತ್ತಿ ನಿಲ್ಲಿಸಲಾಗಿದೆ.

Please Wait while comments are loading...