ಕಂಗ್ರಾ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Kangra, India 28 ℃ Sunny
ಗಾಳಿ: 7 from the SSW ತೇವಾಂಶ: 12% ಒತ್ತಡ: 1013 mb ಮೋಡ ಮುಸುಕು: 0%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Saturday 21 Oct 14 ℃ 56 ℉ 30 ℃85 ℉
Sunday 22 Oct 15 ℃ 60 ℉ 29 ℃84 ℉
Monday 23 Oct 14 ℃ 57 ℉ 29 ℃84 ℉
Tuesday 24 Oct 12 ℃ 54 ℉ 28 ℃83 ℉
Wednesday 25 Oct 12 ℃ 53 ℉ 27 ℃81 ℉

ಕಂಗ್ರಾಗೆ ಭೇಟಿಕೊಡ ಬೇಕೆಂದು ಆಸೆ ಪಡುವವರು ಇಲ್ಲಿಗೆ ಬೇಸಿಗೆ ಸಮಯದಲ್ಲಿ ಆಗಮಿಸಬೇಕು. ಅಂದರೆ ಮಾರ್ಚ್ ನಿಂದ ಜೂನ್ ನಡುವಿನ ಅವಧಿಯಲ್ಲಿ ಇಲ್ಲಿಗೆ ಭೇಟಿಕೊಡಬೇಕು. ಇದರೊಂದಿಗೆ ಮಳೆಗಾಲದಲ್ಲಿಯು ಸಹ ನೀವು ಈ ಸ್ಥಳಕ್ಕೆ ಭೇಟಿಕೊಡಬಹುದು. ಆಗ ಇಲ್ಲಿನ ಹವಾಮಾನವು ಅತ್ಯಂತ ಆಹ್ಲಾದಕರವಾಗಿರುತ್ತದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್‍ವರೆಗೆ) ಕಂಗ್ರಾದಲ್ಲಿ ಬೇಸಿಗೆಯು ಮಾರ್ಚ್ ನಲ್ಲಿ ಪ್ರಾರಂಭವಾಗಿ ಜೂನ್‍ವರೆಗೆ ಇರುತ್ತದೆ. ಈ ಸಮಯದಲ್ಲಿ ಇಲ್ಲಿ ಗರಿಷ್ಠ ಉಷ್ಣಾಂಶವು 38° ಸೆಲ್ಶಿಯಸ್ ದಾಖಲಾಗಿದೆ. ಕನಿಷ್ಠ ಉಷ್ಣಾಂಶವು 22° ಸೆಲ್ಶಿಯಸ್ ದಾಖಲಾಗುತ್ತದೆ. ಈ ಸಮಯವು ಪ್ರವಾಸಿಗರು ಇಲ್ಲಿ ಬಂದು ಸುತ್ತಾಡಲು ಹೇಳಿ ಮಾಡಿಸಿದ ಸಮಯವಾಗಿದೆ. ಆಗ ಪ್ರವಾಸಿಗರು ಇಲ್ಲಿ ಚಾರಣ ಮತ್ತು ಹೊರಾಂಗಣದ ವೀಕ್ಷಣೆಗೆ ಹೇಳಿ ಮಾಡಿಸಿದ ಸಮಯವಾಗಿದೆ.

ಮಳೆಗಾಲ

(ಜುಲೈನಿಂದ ಸೆಪ್ಟೆಂಬರ್) : ಮಳೆಗಾಲವು ಕಂಗ್ರಾದಲ್ಲಿ ಜುಲೈನಿಂದ ಆರಂಭವಾಗಿ ಸೆಪ್ಟೆಂಬರ್ ವರೆಗೆ ಇರುತ್ತದೆ. ಈ ಸಮಯದಲ್ಲಿ ಈ ನಗರದಲ್ಲಿ ಭಾರೀ ವರ್ಷಧಾರೆಯೆ ಸುರಿಯುತ್ತದೆ. ಹಾಗಾಗಿ ಪ್ರವಾಸಿಗರು ಈ ಕಾಲದಲ್ಲಿ ಇಲ್ಲಿಗೆ ಭೇಟಿ ಕೊಟ್ಟಾಗ ಸುತ್ತ ಮುತ್ತಲ ದಟ್ಟ ಹಸಿರಿನ ವನ ಸಿರಿಯನ್ನು ಕಾಣಬಹುದು.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ): ಕಂಗ್ರಾದಲ್ಲಿ ಚಳಿಗಾಲವು ಡಿಸೆಂಬರ್ ನಲ್ಲಿ ಪ್ರಾರಂಭವಾಗಿ ಫೆಬ್ರವರಿಯವರೆಗೆ ಇರುತ್ತದೆ. ಆಗ ಇಲ್ಲಿ ಗರಿಷ್ಠ 20˚ ಸೆಲ್ಶಿಯಸ್ ಮತ್ತು ಕನಿಷ್ಠ 4˚ ಸೆಲ್ಶಿಯಸ್ ಇರುತ್ತದೆ. ಅಲ್ಲದೆ ಚಳಿಗಾಲದಲ್ಲಿ ನಿರಂತರವಾಗಿ ಹಿಮಪಾತವಾಗುತ್ತಿರುತ್ತದೆ. ಒಮ್ಮೊಮ್ಮೆ ಉಷ್ಣಾಂಶದಲ್ಲಿ ವಿಪರೀತ ಕುಸಿತವು ಸಹ ಸಂಭವಿಸುತ್ತಿರುತ್ತದೆ.