ಕಲ್ಪೆಟ್ಟಾದ ಮತ್ತೊಂದು ಆಕರ್ಷಕ ಜೈನ್ ದೇವಾಲಯ ಕುತ್ತಮುಂಡು ಗಾಜಿನ ದೇವಾಲಯ. ವೆಲ್ಲಾರಿಮಲಾ ಗುಡ್ಡ ಪ್ರದೇಶದಲ್ಲಿಯೇ ಸ್ಥಾಪಿತವಾಗಿರುವ ಈ ಗಾಜಿನ ದೇವಾಲಯ ನೋಡಲು ಆಕರ್ಷಕವಾಗಿದೆ. ಶ್ರೇಷ್ಠ ಜೈನ ಸಂತ ಪಾರ್ಶ್ವನಾಥ ಸ್ವಾಮಿ ಅವರ ಗೌರವಾರ್ಥವಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಕುತ್ತಮುಂಡು ಗಾಜಿನ ದೇವಾಲಯ ಸಾವಿರಾರು ಕನ್ನಡಿ ಗಾಜಿನಿಂದ ನಿರ್ಮಿಸಿದ್ದಾಗಿದೆ. ಇದರಿಂದಲೇ ಇದನ್ನು ಗಾಜಿನ ದೇವಾಲಯ ಅನ್ನಲಾಗುತ್ತದೆ. ದೇವಾಲಯಕ್ಕೆ ಗಾಜನ್ನು ಕೂರಿಸುವ ಹಿಂದೆಯೂ ಒಂದು ವಿಚಾರ ಇದೆ. ಸಾಕಷ್ಟು ಗುಡ್ಡಗಳ ನಡುವೆ ದೇವಾಲಯ ಯಾವ ಗುಡ್ಡದ ಮೇಲಿದೆ ಎನ್ನುವುದನ್ನು ಗುರುತಿಸಲು ಬೆಳಕಿನ ಪ್ರತಿಫಲನಗಳು ಸಹಾಯ ಮಾಡಲಿ ಎನ್ನುವುದು ಇದರ ಉದ್ದೇಶ. ಶಾಂತಿ ಹಾಗೂ ಸೌಹಾರ್ದತೆಯ ಸಂಕೇತವಾಗಿ ಈ ದೇವಾಲಯ ನಿರ್ಮಾಣಗೊಂಡಿದೆ. ಕುತ್ತಮುಂಡು ಗಾಜಿನ ದೇವಾಲಯವು ಕಲ್ಪೆಟ್ಟಾದಿಂದ 20 ಕಿ.ಮೀ. ದೂರದಲ್ಲಿದೆ. ಇಲ್ಲಿನ ನೆನಪು ಸದಾ ಮನದಲ್ಲಿ ಉಳಿಯುವಂತದ್ದು ಹಾಗೂ ಬೇರೆಯವರೊಂದಿಗೆ ಹಂಚಿಕೊಳ್ಳಬಹುದಾಗಿದೆ.


Click it and Unblock the Notifications