ಟೊಕ್ಲೈ ಟೀ ರಿಸರ್ಚ್ ಸೆಂಟರ್ ವಿಶ್ವದ ಅತ್ಯಂತ ಪ್ರಾಚೀನ ಟೀ ರಿಸರ್ಚ್ ಇನ್ಸ್ಸ್ಟಿಟ್ಯೂಟ್ ಆಗಿದೆ. ಈ ರಿಸರ್ಚ್ ಸೆಂಟರ್ ಟೀಯ ಉತ್ಪಾದನೆ ಮತ್ತು ಅದರ ಗುಣಮಟ್ಟದ ವೈಜ್ಞಾನಿಕ ಸಂಶೋಧನೆಗಾಗಿ 1911ರಲ್ಲಿ ಸ್ಥಾಪಿಸಲ್ಪಟ್ಟಿತು. ಕಳೆದ ಒಂದು ಶತಮಾನದಲ್ಲಿ ಇದು ವಿಶ್ವದ ಅಗ್ರ ಸಂಶೋಧನಾ ಕೇಂದ್ರ.
ಸಂಶೋಧನಾ ಕೇಂದ್ರ ವರ್ಷಗಳಿಂದ ಮಾಡಿದಂತಹ ದೋಷರಹಿತ ಸಂಶೋಧನೆಯಿಂದಾಗಿ ಈಶಾನ್ಯ ಭಾರದಲ್ಲಿ 1951ರಲ್ಲಿ 234 ಮಿಲಿಯನ್ ಕೆ.ಜಿ ಉತ್ಪಾದನೆಯಾಗುತ್ತಿದ್ದ ಟೀ 1998ರ ವೇಳೆಗೆ 669 ಮಿಲಿಯನ್ ಕೆ.ಜಿ. ಉತ್ಪಾದನೆಯಾಗತೊಡಗಿತು. ಟೊಕ್ಲೈ ಟೀ ಸಂಶೋಧನಾ ಕೇಂದ್ರದಲ್ಲಿ ಎಂಟು ವಿಭಾಗಗಳು ಸಸ್ಯಶಾಸ್ತ್ರ, ಬೆಳೆ ವಿಜ್ಞಾನ, ಮಣ್ಣು, ಸಸ್ಯ ಸಂರಕ್ಷಣೆ, ಎಂಜಿನಿಯರಿಂಗ್, ಜೀವರಸಾಯನಶಾಸ್ತ್ರ ಮತ್ತು ಉತ್ಪಾದನಾ ತಂತ್ರಜ್ಞಾನ, ಅಂಕಿಅಂಶ ಮತ್ತು ಕೃಷಿ ಅರ್ಥಶಾಸ್ತ್ರ, ಮತ್ತು ಚಹಾ ರುಚಿಯ ಬಗ್ಗೆ ಗಮನ ಕೇಂದ್ರೀಕರಿಸಿದೆ.
ಟೊಕ್ಲೈ ಟೀ ಸಂಶೋಧನಾ ಕೇಂದ್ರವು ಕ್ಲಬ್ ರಸ್ತೆಯಲ್ಲಿದ್ದು, ರಾಜ್ಯ ಸಾರಿಗೆ ಮೂಲಕ ಸುಲಭವಾಗಿ ತಲುಪಬಹುದು. ವಿಶ್ವದ ಈ ಭಾಗದಲ್ಲಿ ಟೀ ಬಗ್ಗೆ ಯಾವ ರೀತಿಯ ಸಂಶೋಧನೆ ನಡೆಸಲಾಗುತ್ತದೆ ಎನ್ನುವ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ಸಿಗಲಿದೆ.


Click it and Unblock the Notifications