ಓಸಿಯಾನ್ ಒಂದು ಪುರಾತನ ನಗರ. ಇದು ಜೋಧ್‌ಪುರ ನಗರದಿಂದ ಸುಮಾರು 65 ಕಿ.ಮೀ ದೂರದಲ್ಲಿದೆ. ಇದು ಹಲವು ದೇವಸ್ಥಾನಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿನ ಕೆಲವು ದೇವಸ್ಥಾನಗಳನ್ನು ಸುಂದರವಾಗಿ ನಿರ್ಮಿಸಲಾಗಿದ್ದು, ಜೈನ ದೇವಸ್ಥಾನ, ಸಾಚಿಯ ಮಠ ದೇವಸ್ಥಾನ, ಸೂರ್ಯ ದೇವಸ್ಥಾನ, ಹರಿಹರ ದೇವಸ್ಥಾನ, ಪಿಪ್ಪಳ ದೇವಿ ದೇವಸ್ಥಾನ, ಶಿವ ಮಂದಿರ ಮತ್ತು ವಿಷ್ಣು ದೇವಸ್ಥಾನಗಳು ಇಲ್ಲಿವೆ. ಜೈನ ದೇವಸ್ಥಾನವು ಸುಮಾರು 8 ರಿಂದ 11ನೇ ಶತಮಾನದ ತನಕ ನಮ್ಮನ್ನು ಕೊಂಡೊಯ್ಯುತ್ತದೆ. ಇನ್ನು ಸೂರ್ಯ ದೇವಸ್ಥಾನ ಮತ್ತು ಸಾಚಿಯಾ ದೇವಸ್ಥಾನವು ತನ್ನ ಸೌಂದರ್ಯದಿಂದ ಪ್ರಸಿದ್ಧವಾಗಿದೆ.
ಈ ನಗರವು 8 ರಿಂದ 12 ನೇ ಶತಮಾನದವರೆಗೆ ಪ್ರಮುಖ ವ್ಯಾಪಾರ ಪ್ರದೇಶವಾಗಿತ್ತು. ಆದರೆ ಇಂದು ಇದು ರಾಜಸ್ಥಾನದ ಮರುಭೂಮಿಯಲ್ಲಿ ಇದೊಂದು ಓಯಾಸಿಸ್ ಅಥವಾ ಕಾರಂಜಿಯಾಗಿ ಉಳಿದುಕೊಂಡಿದೆ. ಓಸಿಯನ್ ಸಿಟಿಯು ದೇವಸ್ಥಾನಗಳ ಹೊರತಾಗಿ ಒಂಟೆ ಪ್ರಯಾಣಕ್ಕೂ ಪ್ರಸಿದ್ಧವಾಗಿದೆ. ಪ್ರವಾಸಿಗರು ದೇವಸ್ಥಾನದ ವಾಸ್ತುಶಿಲ್ಪವನ್ನು ಮತ್ತು ಸೌಂದರ್ಯವನ್ನು ಒಂಟೆ ಪ್ರಯಾಣದ ಮೂಲಕ ನೋಡಬಹುದು.


Click it and Unblock the Notifications