Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋಧಪುರ್ » ಆಕರ್ಷಣೆಗಳು » ಮೆಹ್ರಾನ್‌ಗಢ ಕೋಟೆ

ಮೆಹ್ರಾನ್‌ಗಢ ಕೋಟೆ, ಜೋಧಪುರ್

6

ಮೆಹ್ರಾನ್‌ಗಢ ಕೋಟೆಯು ಗುಡ್ಡದ ಮೇಲಿದ್ದು ಸುಮಾರು 150 ಮೀಟರ‍್ ಎತ್ತರದಲ್ಲಿದೆ. ಈ ಗಮನಾರ್ಹ ಕೋಟೆಯು 1459 ರಲ್ಲಿ ರಾವ್ ಜೋಧಾರಿಂದ ನಿರ್ಮಿಸಲ್ಪಟ್ಟಿತು. ಈ ಕೋಟೆಯು ಜೋದ್‌ಪುರ ನಗರದಿಂದ ರಸ್ತೆ ಪ್ರಯಾಣದ ಮೂಲಕ ತಲುಪಬಹುದು. ಈ ಕೋಟೆಗೆ ಏಳು ಪ್ರವೇಶದ್ವಾರಗಳಿವೆ. ಎರಡನೇ ಪ್ರವೇಶದ್ವಾರದ ಮೇಲೆ ಗುಂಡುಗಳಿಂದ ಹೊಡೆದ ಗುರುತುಗಳನ್ನು ಪ್ರವಾಸಿಗರು ಗುರುತಿಸಬಹುದು.

ಇಲ್ಲೊಂದು ಕಿರಾತ್‌ ಸಿಂಗ್‌ ಸೋಡಾರ ಚತ್ರಿ ಇದೆ. ಈತ ಆಂಬರ್‌ರ ಸೇನೆಯ ವಿರುದ್ಧ ಹೋರಾಡುವ ಸಂದರ್ಭದಲ್ಲಿ ಮಡಿದವರು. ಚತ್ರಿಯು ಗೋಪುರ ಶೈಲಿಯ ಪೆವಿಲಿಯನ್‌ನ್ನು ಹೊಂದಿದೆ. ಇದು ರಜಪೂತ ಶೈಲಿಯ ಸುಂದರ ವಾಸ್ತುಶಿಲ್ಪವನ್ನು ಹೊಂದಿದೆ.ಜೈಪೋಲ್‌ ಗೇಟ್‌ನ್ನು ಬಿಕಾನೇರ‍್ ಮತ್ತು ಜೈಪುರ ಸೇನೆಯ ವಿರುದ್ಧ ಜಯಗಳಿಸಿದ ಕಾರಣಕ್ಕೆ ಮಹಾರಾಜ ಮಾನ್‌ ಸಿಂಗ್‌ ನಿರ್ಮಿಸಿದ್ದರು. ಇನ್ನೊಂದು ಪ್ರವೇಶದ್ವಾರವನ್ನು ಫತೇಹ್‌ ಪೋಲ್‌ ಎಂದು ಕರೆಯಲಾಗಿದ್ದು, ಇದನ್ನು ಮಹಾರಾಜ ಅಜಿತ್‌ ಸಿಂಗ್‌ ತಾವು ಮೊಘಲರ ವಿರುದ್ಧ ಜಯ ಗಳಿಸಿದ ಸಂಕೇತವಾಗಿ ನಿರ್ಮಿಸಿದರು.ಕೋಟೆಯ ಒಂದು ಭಾಗವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದ್ದು, ಇಲ್ಲಿ ರಾಜಮನೆತನದ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿದೆ. ಈ ಮ್ಯೂಸಿಯಂ 14 ಕೋಣೆಗಳನ್ನು ಹೊಂದಿದೆ. ಈ ಕೋಣೆಗಳಲ್ಲಿ ರಾಜರ ಕಾಲದ ಆಯುಧಗಳು, ಆಭರಣಗಳು ಮತ್ತು ಉಪಕರಣಗಳನ್ನು ಸಂಗ್ರಹಿಸಲಾಗಿದೆ.

ಮೋತಿ ಮಹಲ್‌, ಫೂಲ್‌ ಮಹಲ್‌, ಶೀಶ ಮಹಲ್‌ ಮತ್ತು ಝಾಂಕಿ ಮಹಲ್‌ಗಳನ್ನೂ ಕೂಡಾ ಪ್ರವಾಸಿಗರು ವೀಕ್ಷಿಸಬಹುದು.ಮೋತಿ ಮಹಲ್‌ನ್ನು ಪರ್ಲ್‌ ಪ್ಯಾಲೇಸ್‌ ಎಂದೂ ಕರೆಯುತ್ತಾರೆ. ಈ ಅರಮನೆಯನ್ನು ರಾಜನಾದ ಸುರ‍್ ಸಿಂಗ್‌ ನಿರ್ಮಿಸಿದ್ದರು. ಇದನ್ನು ಅತಿಥಿಗಳ ಭೇಟಿಗಾಗಿ ಬಳಸಲಾಗುತ್ತಿತ್ತು. ಇಲ್ಲಿ ಪ್ರವಾಸಿಗರು ಶೃಂಗಾರ‍್ ಚೌಕಿಯನ್ನೂ ನೋಡಬಹುದು. ಇಲ್ಲಿ ಐದು ಅಲ್ಕೋವ್‌ಗಳಿವೆ. ಇವುಗಳಿಂದ ರಾಣಿಯರು ರಾಜರ ಕಾಲದ ಕಾರ್ಯಾಲಾಪಗಳನ್ನು ವೀಕ್ಷಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು.ಫೂಲ್ ಮಹಲ್‌, ಮೆಹ್ರಾನಗಢದ ಕೋಟೆಯಲ್ಲಿರುವ ಐಶ್ವರ್ಯಯುತ ಕೋಣೆ. ಈ ಅರಮನೆಯು ರಾಜರ ಖಾಸಗಿ ಪ್ರದೇಶವಾಗಿತ್ತು.

ಅಲ್ಲದೇ ಇದನ್ನು ಹೂವುಗಳ ಅರಮನೆ ಎಂದೂ ಕರೆಯಲಾಗುತ್ತಿತ್ತು. ಇದರ ಛಾವಣಿಯ ಮೇಲೆ ಚಿನ್ನದ ಕುಸುರಿ ಕೆಲಸಗಳಿವೆ. ಮಹಾರಾಜಾ ಅಭಾಯಿ ಸಿಂಗ್‌ ಈ ಅರಮನೆಯನ್ನು 18 ನೇ ಶತಮಾನದಲ್ಲಿ ನಿರ್ಮಿಸಿದರು. ಮುಘಲ್‌ ದೊರೆ ಸುರ್‌ಬಲಂದ್‌ ಖಾನ್‌ ದಾಳಿಯ ಸಂದರ್ಭದಲ್ಲಿ ಇಲ್ಲಿ ಚಿನ್ನವನ್ನು ಲೂಟಿ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಮಹಾರಾಜ ಎರಡನೇ ಜಸ್ವಂತ್‌ ಸಿಂಗ್‌ರ ಕಾಲದಲ್ಲಿ ಇಲ್ಲಿ ಪೇಂಟಿಂಗ್‌ಗಳು ಮತ್ತು ರಾಗಮಾಲಾ ಪೇಂಟಿಂಗ್‌ಗಳನ್ನು ಇಲ್ಲಿಗೆ ತರಲಾಗಿದೆ.

ಶೀಶ ಮಹಲ್‌ ಜನಪ್ರಿಯವಾಗಿದ್ದು ಇಲ್ಲಿನ ಗಾಜಿನ ಕೆಲಸಗಳಿಂದಾಗಿ. ಅರಮನೆಯಲ್ಲಿ ನಿರ್ಮಿಸಿರುವ ಧಾರ್ಮಿಕ ಸಂಬಂಧಿ ಗಾಜಿನ ಕೆತ್ತನೆಗಳನ್ನು ಪ್ರವಾಸಿಗರು ನೋಡಿ ಆನಂದಿಸಬಹುದು. ಇದನ್ನು ಗಾಜಿನ ಹಾಲ್‌ ಎಂದೂ ಕರೆಯಲಾಗಿದೆ. ತಾಕತ್‌ ವಿಲ್ಲಾವನ್ನು ತಾಕ್‌ ಸಿಂಗ್‌ ನಿರ್ಮಿಸಿದ್ದರು. ಇವರು ಜೋಧ್‌ಪುರದ ಕೊನೆಯ ರಾಜರಾಗಿದ್ದರು. ಈ ವಿಲ್ಲಾದ ವಾಸ್ತುಶಿಲ್ಪ ಶೈಲಿಯು ಸಾಂಪ್ರದಾಯಿಕ ಮತ್ತು ವಸಾಹತು ಶೈಲಿಯನ್ನು ಹೊಂದಿದೆ.ಜಾಂಕಿ ಮಹಲ್‌ ಸುಂದರವಾದ ಅರಮನೆಯಾಗಿದ್ದು ಇದು ರಾಜ ಮನೆತನದ ಮಹಿಳೆಯರಿಗೆಂದು ನಿರ್ಮಿಸಲ್ಪಟ್ಟಿದ್ದು. ಈ ಅರಮನೆಯು ಸದ್ಯ ರಾಜಮನೆತನದ ಸಾಮಗ್ರಿಗಳ ಸಂಗ್ರಹದ ಮನೆಯಾಗಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed