ಪಲಯೂರ್ ಚರ್ಚ್, ಗುರುವಾಯೂರ್

ಗುರುವಾಯೂರಿನಲ್ಲಿರುವ ಪಳಯೂರ್ ಚರ್ಚ್ ಪ್ರವಾಸಿಗತ ನೆಚ್ಚಿನ ತಾಣ. ಜೀಸಸ್ ಕ್ರಿಸ್ತನ ಧರ್ಮ ಪ್ರಚಾರಕರಾದ ಸೆಂಟ್ ಥಾಮಸ್ ಅವರಿಂದ ಕಟ್ಟಿಸಲ್ಪಟ್ಟಿದೆ. ಹೆಸರಾಂತ ಧರ್ಮ ಪ್ರಚಾರಕರು ನೆರವೇರಿಸಿದ/ ನಿರ್ಮಿಸಿದ 7 ಚರ್ಚ್ ಗಳಲ್ಲಿ ಪಳಯೂರ್ ಚರ್ಚ್ ಕೂಡಾ ಒಂದು. ಈ ಚರ್ಚ್ ನ ಸೌಂದರ್ಯ ಇಲ್ಲಿನ ವಾಸ್ತು ಶಿಲ್ಪಗಳಲ್ಲಿಯೇ ನೆಲೆಸಿದೆ ಎಂದರೆ ತಪ್ಪಾಗಲಾರದು. ಸೆಂಟ್ ಥಾಮಸ್ ಅವರ್ ಜೀವನ ಮತ್ತು ಕೆಲಸವನ್ನು ಹೇಳುವಂತಹ ವಾಸ್ತು ಶಿಲ್ಪ ಕೆತ್ತನೆ ಇದಾಗಿದೆ.

ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಧರ್ಮ ಪ್ರಚಾರಕರಾದ ಸೆಂಟ್ ಥಾಮಸ್ ಅವರ ಜೀವನ ಹಾಗೂ ಕೆಲಸಗಳ ಬೇರೆ ಬೇರೆ ಹಂತಗಳನ್ನು ಬಿಂಬಿಸುವ 14 ವಿಗ್ರಹಗಳು. ಇವುಗಳನ್ನು ಗ್ರಾನೈಟ್ ಕಲ್ಲುಗಳನ್ನು ಉಪಯೋಗಿಸಿ ನಿರ್ಮಿಸಲಾಗಿದೆ. ಈ ವಿಗ್ರಹಗಳನ್ನು ಚರ್ಚ್ ನ ಮುಂಭಾಗದಲ್ಲಿಯೇ ಕಾಣಬಹುದು.

ಪಳಯೂರ್ ಮಹಾ ತೀರ್ಥಾಂಡಂ ಹಬ್ಬದ ಆಚರಣೆಯ ಸಂದರ್ಭದಲ್ಲಿ ದೇಶದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಮರದ ತುಂಡನ್ನು ಹೊತ್ತು ಬರುತ್ತಾರೆ. ಮುಪ್ಪಿಟ್ಟು ನಾಯರ್ / ಜ್ಞಾಯರ್, ತುಕಾರಾಮ ತಿರುನಾಳ್, ಮತ್ತು ತ್ರಪಣಾ ತಿರುನಾಳ್ ಇವು ಪಳಯೂರ್ ಚರ್ಚ್ ನಲ್ಲಿ ಏರ್ಪಡಿಸುವ ಇತರ ಪ್ರಮುಖ ಕಾರ್ಯಕ್ರಮಗಳು. ಈಗ ತಾನೇ ಹುಟ್ಟಿದ ಮಕ್ಕಳನ್ನು ಮುಪ್ಪಿಟ್ಟು ನಾಯರ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಇಲ್ಲಿಗೆ ಕರೆದುಕೊಂಡು ಬರಲಾಗುತ್ತದೆ.

Please Wait while comments are loading...