ಚಾಮುಂಡೇಶ್ವರಿ ದೇವಾಲಯ, ಗುರುವಾಯೂರ್

ಮುಖಪುಟ » ಸ್ಥಳಗಳು » ಗುರುವಾಯೂರ್ » ಆಕರ್ಷಣೆಗಳು » ಚಾಮುಂಡೇಶ್ವರಿ ದೇವಾಲಯ

 ಚಾಮುಂಡೇಶ್ವರಿ ದೇವಾಲಯವು ಗುರುವಾಯೂರಪ್ಪನ್ ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿನ ಹೆಮ್ಮೆಯ ದೇವಾಲಯ. ಚಾಮುಂಡೇಶ್ವರಿ ತಾಯಿಯು ಇಲ್ಲಿನ ಮುಖ್ಯ ದೇವತೆ. ತಾಯಿ ದುರ್ಗಾ ಮಾತೆಯ ಇನ್ನೊಂದು ರೂಪವೇ ಚಾಮುಂಡೇಶ್ಚರಿ ದೇವಿ. ಭಾರತದ ಹಲವೆಡೆ ದುರ್ಗಾ ಮಾತೆಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ.

ಈ ದೇವಾಲಯದ ಆವರಣದಲ್ಲಿ ಪವಿತ್ರವಾದ ಇನ್ನೊಂದು ದೇವಾಲಯವಿದೆ. ಅದೇ ತಾಯಿತ್ ಕಾವ್ (Thazhthukavu)  ಭಗವತಿ ದೇವಾಲಯ. ಇಲ್ಲಿನ ದೇವತೆಯ ಮೂರ್ತಿಯನ್ನು ಒಂದು ಕಲ್ಲು ಚಪ್ಪಡಿಯಲ್ಲಿ ಬಿಂಬಿಸಲಾಗಿದೆ.

ಮುಂಡೇಶ್ವರಿ ದೇವಿಯ ದೇಗುಲವು ಅತ್ಯಂತ ಪ್ರಾಚೀನವಾಗಿದ್ದು, ಇಲ್ಲಿಗೆ ಪ್ರತಿ ವರ್ಷ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಪ್ರತಿ ವರ್ಷ ಗುರುವಾಯೂರಪ್ಪನ್ ದೇವಾಲಕ್ಕೆ ಬಂದ ಭಕ್ತರು ಚಾಮುಂಡೇಶ್ವರಿ ದೇವಾಲಕ್ಕೆ ಬಂದು ಪ್ರಾರ್ಥನೆಯನ್ನು ಸಲ್ಲಿಸಿ ಹೋಗುತ್ತಾರೆ.

ಪವಿತ್ರ ನಗರವೆನಿಸಿದ ಗುರುವಾಯೂರಿನ ಹೃದಯ ಭಾಗದಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯವನ್ನು ಸ್ಥಾಪಿಸಲಾಗಿದೆ. ಚಾಮುಂಡೇಶ್ವರಿ ದೇವಾಲಯದ ಆವರಣವು ಅತ್ಯಂತ ಪ್ರಶಾಂತ ವಾತಾವರಣವನ್ನು ಹೊಂದಿದ್ದು ಇಲ್ಲಿ ಧ್ಯಾನ ಮಾಡಲು ಹಾಗೂ ದೈವಿಕ ಶಕ್ತಿಯನ್ನು ಪಡೆಯಲು ಅತ್ಯಂತ ಸೂಕ್ತವಾದ ಜಾಗ. ಮನಸ್ಸಿಗೆ ನೆಮ್ಮದಿಯನ್ನು ಬಯಸಿ ಅನೇಕ ಜನರು ಇಲ್ಲಿಗೆ ಆಗಮಿಸುತ್ತಾರೆ. ಸ್ಥಳೀಯರಿಗಂತೂ ಇದು ನೆಚ್ಚಿನ ಸ್ಥಳ !

 

Please Wait while comments are loading...