Search
  • Follow NativePlanet
Share

ಗೋಮುಖ: ಟ್ರೆಕ್ಕಿಂಗ್‌ ಪ್ರಿಯರ ಸ್ವರ್ಗ

14

ಅತ್ಯಾಕರ್ಷಕ ವೀಕ್ಷಣಾ ತಾಣವಾಗಿರುವ ಗೋಮುಖ ಇರುವುದು ಗಂಗೋತ್ರಿಯ ಹಿಮಾಚ್ಛಾದಿತ ಪ್ರದೇಶದ ಕೊನೆಯ ಭಾಗದಲ್ಲಿ. ಉತ್ತರಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ವ್ಯಾಪ್ತಿಗೆ ಇದು ಬರುತ್ತದೆ. ಶಿವಲಿಂಗ ತಪ್ಪಲಿನ ಸಮೀಪ ಈ ತಾಣ ಬರುತ್ತದೆ. ಇದು ಒಂದು ಸಾಹಸದಿಂದ ತಲುಪಬೇಕಾದ ತಾಣವಾಗಿರುವುದರಿಂದ ಜನಪ್ರಿಯವಾಗಿದೆ. ಗಂಗಾನದಿಯ ಉಪನದಿಯಾಗಿರುವ ಭಾಗೀರಥಿಯು ಗೋಮುಖದಲ್ಲಿ ಹರಿದಿದ್ದಾಳೆ. ಈ ತಾಣವು ತಪೋವನ ಸಮೀಪವೇ ಇದೆ. ತಪೋವನ ಧ್ಯಾನ ಹಾಗೂ ಜಪಕ್ಕೆ ಹೇಳಿಮಾಡಿಸಿದ ನೈಸರ್ಗಿಕ ವಾತಾವರಣ ಹೊಂದಿದೆ.

ಗೋಮುಖದಲ್ಲಿ ಪ್ರವಾಸಿಗರಿಗೆ ಸಾಕಷ್ಟು ಆಕರ್ಷಕ ತಾಣಗಳು ನೋಡಲು ಸಿಗುತ್ತವೆ. ಇವುಗಳಲ್ಲಿ ಗಂಗೋತ್ರಿ ಹಿಮಾಚ್ಛಾದಿತ ತಪ್ಪಲು ಒಂದು ಖಾಯಂ ತಾಣವಾಗಿ ಜನಪ್ರಿಯವಾಗಿದೆ. ಹಿಮಾಲಯದ ಭಾಗದಲ್ಲಿ ಇದೊಂದು ಅತಿದೊಡ್ಡ ಹಿಮಾಚ್ಛಾದಿತ ವಲಯವಾಗಿದೆ. ಸುತ್ತಲೂ ಅಪಾರ ಪ್ರಮಾಣದಲ್ಲಿ ಹಿಮ ಆವರಿಸಿಕೊಂಡಿರುವ ಪ್ರದೇಶ ಇದು. ಇಲ್ಲಿ ಹಿಮದಿಂದ ಆವೃತ್ತವಾಗಿರುವ ಶಿವಲಿಂಗ, ಥಾಲೆ ಸಾಗರ್‌, ಮೆರು ಹಾಗೂ ಭಾಗಿರಥಿ, 3 ಗಮನ ಸೆಳೆಯುವ ತಾಣಗಳು. ಹಿಮಾಚ್ಛಾದಿತ ತಾಣದ ಕೊನೆಯು, ಆಕಳಿನ ಮುಖದ ಮಾದರಿಯಲ್ಲಿದೆ. ಇದರಿಂದ ಈ ತಾಣವನ್ನು ಗೋಮುಖ ಎಂದು ಕರೆಯಲಾಗುತ್ತದೆ. ಹೀಗಾಗಿಯೇ ಈ ಪ್ರದೇಶವನ್ನೂ ಅದೇ ಹೆಸರಿನಿಂದ ಗುರುತಿಸಲಾಗಿದೆ.

ಪ್ರವಾಸಿಗರಿಗೆ ಈ ತಾಣ ಅತ್ಯಾಕರ್ಷಕ ಟ್ರೆಕ್ಕಿಂಗ್‌ ಅನುಭವ ನೀಡುತ್ತದೆ. ಗಂಗೋತ್ರಿಯಿಂದ ಜನಪ್ರಿಯ ಟ್ರೆಕ್ಕಿಂಗ್‌ ಮಾರ್ಗಗಳು ಆರಂಭವಾಗುತ್ತವೆ. ಇವು ಮುಂದುವರಿದು ಗಿಲಾ ಪತ್ತಾರ್‌, ಚಿರ್ಬಾಸಾ ಮೂಲಕ ಸಾಗುತ್ತವೆ. ಅತಿ ಆಳವಾದ ಕಂದಕಗಳು, ದೊಡ್ಡ ತಗ್ಗು, ಅಪಾಯಕಾರಿ ಮಾರ್ಗದಿಂದ ಈ ಪ್ರದೇಶ ಕೂಡಿದೆ. ಇನ್ನು ತಪೋವನದಿಂದ ನಂದನವನ ವರೆಗಿನ ಟ್ರೆಕ್ಕಿಂಗ್‌ ಗೋಮುಖದಿಂದ ಆರಂಭವಾಗುತ್ತದೆ.

ಪ್ರವಾಸಿಗರು ಗೋಮುಖವನ್ನು ಡೆಹ್ರಾಡೂನ್‌ನ ಜಾಲಿ ಗ್ರಾಂಟ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಬರಬಹುದು. ಅಲ್ಲದೇ ಇಲ್ಲಿಗೆ ಸಮೀಪದ ರೈಲು ನಿಲ್ದಾಣ ಹರಿದ್ವಾರ. ಇದು ಗಂಗೋತ್ರಿಯಿಂದ 230 ಕಿ.ಮೀ. ದೂರದಲ್ಲಿದೆ. ಬಸ್‌ಗಳು ಕೂಡ ಇಲ್ಲಿಗೆ ಸಮೀಪದ ನಗರ, ಪಟ್ಟಣಗಳಿಂದ ಲಭ್ಯವಿದೆ. ಪ್ರವಾಸಿಗರು ಮಾತ್ರ ಇತ್ತ ಬರುವುದಕ್ಕೆ ಬೇಸಿಗೆಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಗೋಮುಖ ಪ್ರಸಿದ್ಧವಾಗಿದೆ

ಗೋಮುಖ ಹವಾಮಾನ

ಉತ್ತಮ ಸಮಯ ಗೋಮುಖ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಗೋಮುಖ

  • ರಸ್ತೆಯ ಮೂಲಕ
    ಹರಿದ್ವಾರ, ಹೃಷಿಕೇಶ, ಮಸ್ಸೂರಿ, ಡೆಹ್ರಾಡೂನ್‌, ತೆಹ್ರಿ, ಯಮುನೋತ್ರಿ ಸೇರಿದಂತೆ ಹಲವು ಕಡೆಗಳಿಂದ ಸರ್ಕಾರಿ ಬಸ್‌ಗಳ ಸಂಪರ್ಕ ಅತ್ಯುತ್ತಮವಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಹತ್ತಿರದ ರೈಲು ನಿಲ್ದಾಣ ಹರಿದ್ವಾರ. ಇದು ಗಂಗೋತ್ರಿಯಿಂದ 230 ಕಿ.ಮೀ. ದೂರದಲ್ಲಿದೆ. ಈ ನಿಲ್ದಾಣವು ದೆಹಲಿ, ಡೆಹ್ರಾಡೂನ್‌, ಅಲಹಾಬಾದ್‌ ಸೇರಿದಂತೆ ಪ್ರಮುಖ ನಗರಗಳಿಂದ ನಿರಂತರ ರೈಲು ಸಂಪರ್ಕ ಹೊಂದಿದೆ. ನಿಲ್ದಾಣದಿಂದ ಗಂಗೋತ್ರಿಗೆ ಟ್ಯಾಕ್ಸಿಗಳು ಸಾಕಷ್ಟು ಸಿಗುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಜಾಲಿ ಗ್ರಾಂಟ್‌ ವಿಮಾನ ನಿಲ್ದಾಣ ಗಂಗೋತ್ರಿಗೆ ಅತ್ಯಂತ ಸಮೀಪದ ವಿಮಾನ ನಿಲ್ದಾಣವಾಗಿದೆ. 229 ಕಿ.ಮೀ. ದೂರದಲ್ಲಿದೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಲ್ಲಿಗೆ ನಿರಂತರ ವಿಮಾನ ಸಂಪರ್ಕ ಇದೆ. ಅಲ್ಲಿಂದ ಗಂಗೋತ್ರಿ ತಲುಪಲು ಟ್ಯಾಕ್ಸಿಗಳು ಸಿಗುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
12 Mar,Thu
Return On
13 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Mar,Thu
Check Out
13 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Mar,Thu
Return On
13 Mar,Fri