Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋಮುಖ » ಹವಾಮಾನ

ಗೋಮುಖ ಹವಾಮಾನ

ಬೇಸಿಗೆ ಇಲ್ಲಿಗೆ ಪ್ರವಾಸ ಹಮ್ಮಿಕೊಳ್ಳಲು ಸಕಾಲ. ತಂಪಾದ ಹಾಗೂ ಸಹನೀಯ ವಾತಾವರಣ ಆಗ ಇರುತ್ತದೆ.

ಬೇಸಿಗೆಗಾಲ

(ಏಪ್ರಿಲ್‌ನಿಂದ ಜೂನ್‌): ಇಲ್ಲಿ ಬೇಸಿಗೆಯು ಏಪ್ರಿಲ್‌ನಲ್ಲಿ ಇಲ್ಲಿ ಆರಂಭವಾಗಿ ಜೂನ್‌ವರೆಗೂ ಮುಂದುವರಿಯುತ್ತದೆ. ಈ ಸಮಯದಲ್ಲಿ ಅತಿ ಹೆಚ್ಚು ಅಂದರೆ 15 ಡಿಗ್ರಿ ಸೆಲ್ಶಿಯಸ್‌ ಹಾಗೂ ಅತಿ ಕಡಿಮೆ ಉಷ್ಣಾಂಶ 10 ಡಿಗ್ರಿ ಸೆಲ್ಶಿಯಸ್‌ ದಾಖಲಾಗುತ್ತದೆ. ಈ ಸಮಯದಲ್ಲಿ ಕೂಡ ಇಲ್ಲಿನ ಸ್ಥಳಗಳು ಹಿಮಾಚ್ಛಾದಿತವಾಗಿರುತ್ತವೆ.

ಮಳೆಗಾಲ

(ಜುಲೈನಿಂದ ಸೆಪ್ಟೆಂಬರ್‌): ಜುಲೈನಲ್ಲಿ ಮಳೆಗಾಲ ಆರಂಭವಾದರೆ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ಇಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ಸುರಿಯುತ್ತದೆ. ಭೂ ಕುಸಿತ ಈ ಸಮಯದಲ್ಲಿ ಇಲ್ಲಿ ಸಾಮಾನ್ಯ.

ಚಳಿಗಾಲ

(ಡಿಸೆಂಬರ್‌ನಿಂದ ಫೆಬ್ರವರಿ): ಡಿಸೆಂಬರ್‌ನಲ್ಲಿ ಇಲ್ಲಿ ಚಳಿಗಾಲ ಆರಂಭವಾದರೆ ಫೆಬ್ರವರಿವರೆಗೂ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ಇಲ್ಲಿ ಅತಿ ಹೆಚ್ಚು ತಾಪಮಾನ ಅಂದರೆ 10 ಡಿಗ್ರಿ ಸೆಲ್ಶಿಯಸ್‌ ಹಾಗೂ ಕಡಿಮೆ ಅಂದರೆ 0 ಡಿಗ್ರಿ ಸೆಲ್ಶಿಯಸ್‌ ಇರುತ್ತದೆ.