ಗ್ಯಾಂಗ್ಟಾಕ್ ನಿಂದ 8 ಕಿ.ಮೀ. ಮುಂದೆ ಸಾಗಿದರೆ ಹಿಮಾಲಯನ್ ಝೂಲಾಜಿಕಲ್ ಪಾರ್ಕ್ ಸಿಗುತ್ತದೆ. ಇದು ಸುಮಾರು 205 ಎಕ್ರೆ ಸ್ಥಳದಲ್ಲಿ ವ್ಯಾಪಿಸಿದೆ. ಈ ಪಾರ್ಕ್ ನ್ನು ಬುಲ್ ಬುಲ್ಯ ಎಂದೂ ಕರೆಯುತ್ತಾರೆ ಮತ್ತು ವಿವಿಧ ಜಾತಿ ವನ್ಯ ಜೀವಿಗಳು ಇಲ್ಲಿ ಮುಕ್ತವಾಗಿ ವಾಸಿಸುತ್ತದೆ.
ಕಾಡು ಕಡವೆ, ಪಾಂಡಾಗಳು, ಚಿರತೆಗಳು, ಟಿಬೆಟಿನ ತೋಳಗಳು, ಪುನುಗು ಬೆಕ್ಕು, ಹಿಮಾಲಯನ್ ಕಪ್ಪು ಕರಡಿ ಮೊದಲಾದವುಗಳು ಇಲ್ಲಿದೆ. ಅದರಲ್ಲೂ ಹಿಮ ಚಿರತೆಗಳಾದ ಕುಶ್ ಮತ್ತು ಉರ್ಬಶಿಯನ್ನು ನೋಡಲೇಬೇಕು.


Click it and Unblock the Notifications