ಗ್ಯಾಂಗ್ಟಾಕ್ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Gangtok, India 18 ℃ Partly cloudy
ಗಾಳಿ: 0 from the N ತೇವಾಂಶ: 77% ಒತ್ತಡ: 1021 mb ಮೋಡ ಮುಸುಕು: 75%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Monday 25 Sep 5 ℃ 41 ℉ 21 ℃71 ℉
Tuesday 26 Sep 9 ℃ 47 ℉ 21 ℃70 ℉
Wednesday 27 Sep 7 ℃ 44 ℉ 21 ℃70 ℉
Thursday 28 Sep 3 ℃ 38 ℉ 20 ℃68 ℉
Friday 29 Sep 4 ℃ 40 ℉ 19 ℃67 ℉

ಗ್ಯಾಂಗ್ಟಾಕ್ ಎತ್ತರ ಪ್ರದೇಶದಲ್ಲಿದ್ದು, ಇದು ರಕ್ಷಿತ ಪ್ರದೇಶ ವಾತಾವರಣಕ್ಕೆ ಹೊಂದಿಕೊಂಡಿದೆ. ವರ್ಷವಿಡಿ ಇಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ. 

ಬೇಸಿಗೆಗಾಲ

ಎಪ್ರಿಲ್ ನಿಂದ ಜೂನ್ ತನಕ ಇಲ್ಲಿ ಬೇಸಿಗೆಗಾಲ. ಈ ಸಮಯದಲ್ಲಿ ಇಲ್ಲಿನ ತಾಪಮಾನ ಗರಿಷ್ಠ 22 ಡಿಗ್ರಿ ಸೆಲ್ಸಿಯಸ್ ತನಕ ಇರುತ್ತದೆ.  ಬೇಸಿಗೆಗಾಲದಲ್ಲಿ ಇದು ಅತ್ಯಂತ ಸೌಮ್ಯ ವಾತಾವರಣವೆನ್ನಬಹುದು.

ಮಳೆಗಾಲ

ಗ್ಯಾಂಗ್ಟಾಕ್ ಮಾನ್ಸೂನ್ ಪ್ರಭಾವಿತ ಉಪ ಉಷ್ಣವಲಯದ ಹವಾಮಾನವನ್ನು ಹೊಂದಿದೆ. ಜೂನ್ ನಿಂದ ಅಕ್ಟೋಬರ್ ತನಕ ಗ್ಯಾಂಗ್ಟಾಕ್ ನಲ್ಲಿ ಮಳೆಗಾಲ. ಈ ಸಮಯದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸುತ್ತದೆ. ಭೂಕುಸಿತದಿಂದ ಗ್ಯಾಂಗ್ಟಾಕ್ ಗೆ ಸಂಪರ್ಕವೇ ಕಡಿತವಾಗುತ್ತದೆ.  ಮೇಯಲ್ಲಿ ಆರಂಭವಾಗುವ ಮಳೆ ಜುಲೈ ತಿಂಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸುರಿಯುತ್ತದೆ.

ಚಳಿಗಾಲ

ಚಳಿಗಾಲದಲ್ಲಿ ಗ್ಯಾಂಗ್ಟಾಕ್ ತುಂಬಾ ತಂಪಾಗಿರುತ್ತದೆ. ಚಳಿಗಾಲದಲ್ಲಿ ತಾಪಮಾನ -3 ಡಿಗ್ರಿ ಸೆಲ್ಸಿಯಸ್ ತನಕ ಕುಸಿಯುತ್ತದೆ. ಹಿಮಪಾತವಾಗುವುದು ಅಪರೂಪ. 1990, 2004, 2005, 2011ರಲ್ಲಿ ಇಲ್ಲಿ ಹಿಮಪಾತವಾಗಿತ್ತು.