Search
 • Follow NativePlanet
Share
ಮುಖಪುಟ » ಸ್ಥಳಗಳು » ಗ್ಯಾಂಗ್ಟಾಕ್ » ಆಕರ್ಷಣೆಗಳು » ನಮ್ಗಾಯಲ್ ಇನ್ ಸ್ಟಿಟ್ಯೂಟ್ ಆಫ್ ಟಿಬೆಟಾಲಜಿ

ನಮ್ಗಾಯಲ್ ಇನ್ ಸ್ಟಿಟ್ಯೂಟ್ ಆಫ್ ಟಿಬೆಟಾಲಜಿ, ಗ್ಯಾಂಗ್ಟಾಕ್

2

ನಮ್ಗಾಯಲ್ ಇನ್ ಸ್ಟಿಟ್ಯೂಟ್ ಆಫ್ ಟಿಬೆಟಾಲಜಿ ಎನ್ನುವುದು ಟಿಬೆಟ್ ಮ್ಯೂಸಿಯಂ. ಇಲ್ಲಿ ಟಿಬೆಟ್ ನ ಸಂಸ್ಕೃತಿ, ಧರ್ಮ, ಭಾಷೆ, ಕಲೆ ಮತ್ತು ಸಂಪ್ರದಾಯ ಹಾಗೂ ಇತಿಹಾಸಕ್ಕೆ ಸಂಬಂಧಪಟ್ಟ ಸಂಶೋಧನಾ ಕಾರ್ಯಗಳಿಗೆ ನೆರವು ನೀಡಲಾಗುತ್ತದೆ. 1958ರಿಂದ ಈ ಕೆಲಸ ನಡೆಯುತ್ತಾ ಬರುತ್ತಿದೆ.

ಈ ಸಂಸ್ಥೆಯಲ್ಲಿ ಲೆಪ್ಚಾ, ಟಿಬೆಟ್ ಮತ್ತು ಸಂಸ್ಕೃತದ ಹಸ್ತಪ್ರತಿಗಳು, ವಿವಿಧ ರೀತಿಯ ಕೆತ್ತನೆಯ ವಸ್ತುಗಳು, ಪ್ರತಿಮೆಗಳ ಅಪರೂಪದ ಸಂಗ್ರಹವಿದೆ. ಈ ಮ್ಯೂಸಿಯಂನಲ್ಲಿ ಸುಮಾರು 200ರಷ್ಟು ಬೌದ್ಧ ಪ್ರತಿಮೆಗಳಿವೆ. ಸಿಕ್ಕಿಂನ ಅಪರೂಪದ ಹಾಗೂ ಹಳೆಯ ಫೋಟೊಗಳ ದಾಸ್ತವೇಜಿಕರಣ ಮತ್ತು ಡಿಜಿಟಲೈಸ್ ಮಾಡಲು ಈ ಸಂಸ್ಥೆ ಯೋಜನೆಯನ್ನು ಹಾಕಿಕೊಂಡಿದೆ.

ಈ ಸಂಸ್ಥೆಯನ್ನು ಟಿಬೆಟಿಯನ್ ಬೌದ್ಧ ಶೈಲಿಯಲ್ಲಿ ರಚಿಸಲಾಗಿದೆ. ವಿನ್ಯಾಸ ಹಾಗೂ ಗೋಡೆಗಳ ಮೇಲಿನ ಪೈಟಿಂಗ್ ಸಂಸ್ಥೆಗೆ ಮತ್ತಷ್ಟು ಮೆರಗು ನೀಡುತ್ತದೆ. ಸಿಕ್ಕಿಂನ ಕೊನೆಯ ರಾಜನ ಸ್ಮಾರಕವಾಗಿ ನಿರ್ಮಿಸಲಾಗಿರುವ ಪಾರ್ಕ್ ಇದರ ಪಕ್ಕದಲ್ಲಿಯೇ ಇದ್ದು, ಇಲ್ಲಿಗೆ ಭೇಟಿ ನೀಡುವುದು ನಿಮ್ಮ ಪ್ರವಾಸವನ್ನು ಸ್ಮರಣೀಯವಾಗಿಸುತ್ತದೆ. ಪಾರ್ಕ್ ನಲ್ಲಿ ರಾಜನ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

ಮಧ್ಯ ಗ್ಯಾಂಗ್ಟಾಕ್ ನ ದಕ್ಷಿಣದ ದೆರಾಲಿಯಲ್ಲಿರುವ ಈ ಸಂಸ್ಥೆ ಸಾರ್ವಜನಿಕರಿಗೆ ಬೆಳಿಗ್ಗೆ 10ರಿಂದ ಸಂಜೆ 4ರ ತನಕ ಸೋಮವಾರದಿಂದ ಶನಿವಾರದ ತನಕ ತೆರೆದಿರುತ್ತದೆ. ಗ್ರಂಥಾಲಯ ಮತ್ತು ಮ್ಯೂಸಿಯಂಗೆ ಕೇವಲ ಹತ್ತು ರೂ. ಪ್ರವೇಶ ಶುಲ್ಕವಿದೆ.

One Way
Return
From (Departure City)
To (Destination City)
Depart On
19 Jun,Wed
Return On
20 Jun,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Jun,Wed
Check Out
20 Jun,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Jun,Wed
Return On
20 Jun,Thu
 • Today
  Gangtok
  20 OC
  68 OF
  UV Index: 4
  Partly cloudy
 • Tomorrow
  Gangtok
  6 OC
  44 OF
  UV Index: 4
  Moderate rain at times
 • Day After
  Gangtok
  6 OC
  43 OF
  UV Index: 4
  Moderate or heavy rain shower