Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಮಾಪುರ್ » ಆಕರ್ಷಣೆಗಳು » ನಾಗಾಲ್ಯಾಂಡ್ ವಿಜ್ಞಾನ ಕೇಂದ್ರ

ನಾಗಾಲ್ಯಾಂಡ್ ವಿಜ್ಞಾನ ಕೇಂದ್ರ, ದಿಮಾಪುರ್

2

ನಾಗಾಲ್ಯಾಂಡ್ ವಿಜ್ಞಾನ ಕೇಂದ್ರವು "ಕ್ರಿಯೆಯ ಮೂಲಕ ವಿಜ್ಞಾನವನ್ನು ಕಾಣುವ" ಆಲೋಚನೆಯಿಂದ ರೂಪುತಳೆದಿದೆ. ಇದು ಒಂದು ನವೀನ ಮಾದರಿಯ, ಶ್ರೀಮಂತ ಥೀಮ್ ಪಾರ್ಕ್ ಆಗಿದೆ. ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಹಾಗು ವಿಙ್ಞಾನವನ್ನು ಆಟವಾಡುತ್ತ, ಅನೌಪಚಾರಿಕವಾಗಿ ಕಲಿಸುವ ಸಲುವಾಗಿ ಈ ವಿಜ್ಞಾನ ಕೇಂದ್ರವನ್ನು ಸರ್ಕಾರವು ಸ್ಥಾಪಿಸಿದೆ. ನಾಗಾಲ್ಯಾಂಡ್ ವಿಜ್ಞಾನ ಕೇಂದ್ರದಲ್ಲಿ ಹಲವಾರು ಗ್ಯಾಲರಿಗಳು ಇವೆ. ಇವುಗಳನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಲಾಗಿದೆ. ಉದಾಹರಣೆಗೆ " ನಮ್ಮ ಜ್ಞಾನೇಂದ್ರಿಯಗಳು" , "ಫನ್ ಸೈನ್ಸ್" , " ಚಿಲ್ಡ್ರನ್ಸ್ ಕಾರ್ನರ್" ಎಂಬ ವಿವಿಧ ಬಗೆಯ ಗ್ಯಾಲರಿಗಳು ಇಲ್ಲಿವೆ. ಇವುಗಳ ಜೊತೆಗೆ ಇಲ್ಲಿ ಒಂದು ತಾರಾಲಯವನ್ನು ಸಹ ಸ್ಥಾಪಿಸಲಾಗಿದೆ. ಇದು ರಾತ್ರಿಯ ಆಕಾಶವನ್ನು ಅದ್ಭುತವಾಗಿ ವೀಕ್ಷಕರ ಮುಂದೆ ತೆರೆದಿಡುತ್ತದೆ.

ತಾರಾಮಂಡಲ್ ಎಂಬ ಮತ್ತೊಂದು ಪ್ರಸಿದ್ಧ ಸ್ಥಳವು ಈ ಕೇಂದ್ರದಲ್ಲಿದೆ. ಇದು ಅನುಪಮವಾದ ಗುಮ್ಮಟವನ್ನು ಹೊಂದಿದೆ. ಹೊರಾಂಗಣದಲ್ಲಿ ನೆಲೆಗೊಂಡಿರುವ ಈ ಬಯಲು ವಿಙ್ಞಾನ ಕೇಂದ್ರದಲ್ಲಿ ಹಲವಾರು ವೈಜ್ಞಾನಿಕ ಉಪಕರಣಗಳು ಇವೆ. ಈ ಉಪಕರಣಗಳು ಮನೋರಂಜನೆಯ ಜೊತೆಗೆ ಅತ್ಯಂತ ಸರಳವಾಗಿ ವಿಜ್ಞಾನದ ಮಾಹಿತಿಯನ್ನು ನೋಡುಗರಿಗೆ ಒದಗಿಸುತ್ತವೆ.

ಈ ಕೇಂದ್ರವು ಪ್ರತಿದಿನ ( ಸೋಮವಾರ ಹೊರತುಪಡಿಸಿ) ಬೆಳಗ್ಗೆ 10 ರಿಂದ 4 ಗಂಟೆಯವರೆಗೆ ತೆರೆದಿರುತ್ತದೆ. ಪ್ರವಾಸಿಗರು ನಾಗಾಲ್ಯಾಂಡ್ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಇಡೀ ದಿನ ಪೂರ್ತಿ ಹಲವಾರು ಉಪಕರಣಗಳನ್ನು ನೋಡಿ, ಅವುಗಳ ಬಗ್ಗೆ ತಿಳಿದುಕೊಳ್ಳಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed