ಕೊಲಿ ಆಯ್ ಥಾನ್ ಅಸ್ಸಾಮಿ ಜನರು ಹೆಚ್ಚು ನಂಬುವ ಮತ್ತು ಗೌರವಿಸುವ ಸ್ಥಳ. ಇಲ್ಲಿ ಯಾವುದೇ ವಿಗ್ರಹವಿಲ್ಲದಿದ್ದರೂ ದಿಬ್ರುಗಡ್ನಲ್ಲಿ ಹೆಚ್ಚು ಭೇಟಿ ನೀಡುವ ಪ್ರದೇಶವಿದು. ಅಹೊಮ ಸಾಮ್ರಾಜ್ಯಕ್ಕೆ ಸೇರಿದ ಪುರಾತನ ತಾಣಗಳಲ್ಲಿ ಒಂದು ಕೊಲಿ ಆಯ್ ಥಾನ್.
ದಿಬ್ರು ಸತ್ರದ ಪ್ರಧಾನ ಅರ್ಚಕರ ಮಗಳಾಗಿದ್ದ ಕೊಯಿ ಆಯಿಗೆ ಕೊಲಿ ಆಯಿ ಥಾನ್ ಸಮರ್ಪಿಸಲಾಗಿದೆ. ದಿಬ್ರು ಸತ್ರಕ್ಕೆ ವಾರಸುದಾರರು ಇರಲಿಲ್ಲವಾದ್ದರಿಂದ ಕೊಲಿ ಆಯಿ ಸತ್ರದ ಶಕ್ತಿಯನ್ನು ತನ್ನ ಭಕ್ತಿ ಮತ್ತು ಸಮರ್ಪಣಾಭಾವದಿಂದ ಕಾಪಾಡಿಕೊಂಡು ಬಂದಳು. ಆಕೆಗೆ ದೈವಿಕ ಶಕ್ತಿಗಳಿದ್ದವು ಮತ್ತು ಆದ್ದರಿಂದಲೇ ಆಕೆ ಒಮ್ಮೆ ಮಾಯವಾದಳು ಎಂದು ನಂಬಲಾಗುತ್ತದೆ. ಜನರು ಪ್ರತಿವರ್ಷ ತಮ್ಮ ‘ಆಯಿ’ಗೆ ಪ್ರಾರ್ಥನೆ ಸಲ್ಲಿಸಲು ಇಲ್ಲಿ ಸೇರುತ್ತಾರೆ. ಕೊಲಿ ಆಯಿ ಥಾನ್ ಅಸ್ಸಾಂನ ಇತಿಹಾಸದ ಮೇಲೆ ತನ್ನದೇ ರೀತಿಯ ಪ್ರಭಾವವನ್ನು ಬೀರಿದೆ.


Click it and Unblock the Notifications