ದಿನ್ಜೊಯ್ ಸತ್ರಕ್ಕಿಂತ ಪುರಾತನವಾದ ಸತ್ರವಿದು. ಗರಪರ ಸತ್ರವು ರೊಹ್ಮೊರಿಯ ಮೌಜದಲ್ಲಿದೆ. ನರಿಮೈದೆರ್ ಈ ಸತ್ರದ ಮೊದಲ ಪ್ರಧಾನ ಅರ್ಚಕ. ಈ ಸತ್ರವನ್ನು ಭಕ್ತಾದಿಗಳು ಗೌರವಿಸುತ್ತಾರಾದರೂ ಇದನ್ನು ಈಗಿರುವ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸಲು ಪ್ರಸ್ತಾಪ ಮಾಡಲಾಗಿತ್ತು. ಇದಕ್ಕೆ ಕಾರಣ ಇಲ್ಲಿ ಉಂಟಾಗುತ್ತಿದ್ದ ಮಣ್ಣು ಸವಕಳಿ. ಇದರಿಂದ ಸತ್ರಕ್ಕೆ ತೊಂದರೆಯಾಗುವುದರಿಂದ ಈ ಪ್ರಸ್ತಾಪವನ್ನು ಮಾಡಲಾಯಿತು ಮತ್ತು ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತದೆ.
ಗರಪರ ಸತ್ರವಲ್ಲದೆ ಇನ್ನೂ ಹಲವು ಸತ್ರಗಳು ದಿಬ್ರುಗಡ್ನಲ್ಲಿದ್ದು ಸಾಮಾಜಿಕ-ಧಾರ್ಮಿಕ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರವಾಸಿಗರು ಭೇಟಿ ನೀಡುವ ಸತ್ರಗಳೆಂದರೆ ದಿನ್ಜೊಯ್ ಸತ್ರ, ದೆಹಿಂಗ್ ಸತ್ರ ಮತ್ತು ಮೊದೆರ್ಖೆತ್ ಸತ್ರ. ಅಹೊಮಾ ಆಳ್ವಿಕೆಯ ಸಂದರ್ಭದಲ್ಲಿ ಅಹೋಮ ಸಮಾಜದ ಸಂಸ್ಕೃತಿಯನ್ನು ಜನರಿಗೆ ಕಲಿಸಲು ಮತ್ತು ಮುಂದಿನ ಪೀಳಿಗೆಯವರಿಗಾಗಿ ಸಂರಕ್ಷಿಸಲು ಸತ್ರಗಳನ್ನು ಕಟ್ಟಲಾಯಿತು.


Click it and Unblock the Notifications