ಮವ್‍ಮುಲುಹ್ ಗುಹೆಯು ಕ್ರೆಮ್ ಮವ್‍ಮುಲುಹ್ ಎಂದೇ ಪ್ರಸಿದ್ಧವಾಗಿದೆ. ಇದು ಭಾರತ ಉಪ-ಖಂಡದಲ್ಲಿರುವ 4ನೇ ಅತ್ಯಂತ ಉದ್ದದ ಗುಹೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಇದು 4.503 ಮೀಟರುಗಳಷ್ಟು ಉದ್ದವಿದೆ. ಹಾಗಾಗಿ ಈ ಪ್ರಾಂತ್ಯದಲ್ಲಿನ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿ ರೂಪುಗೊಂಡಿದೆ.
ಈ ಗುಹೆಗೆ ಹಲವಾರು ಪ್ರವೇಶ ದ್ವಾರಗಳು ಇವೆ. ಇವುಗಳಲ್ಲಿ ಕೆಲವು ಅಪಾಯಕಾರಿ ಸಹ ಹೌದು. ಹಾಗಾಗಿ ನೆಲದ ಮಟ್ಟದಿಂದ ಮೇಲೆ ಇರುವ (10 ಅಡಿ ಎತ್ತರದಲ್ಲಿರುವ ) ಲುಮ್ ಲವ್ಬಾಹ್‍ನ ಪಶ್ಚಿಮ ತುದಿಯಲ್ಲಿರುವ ದ್ವಾರದ ಮೂಲಕ ಇದರ ಒಳಗೆ ಪ್ರವೇಶಿಸುವುದು ಉತ್ತಮ. ಇಲ್ಲಿ ಒಂದು ಸುಂದರವಾದ ಕೊಳವಿದೆ. ಐದು ನದಿಗಳು ಗುಹೆಯ ಒಳಗೆ ನುಗ್ಗಿ ಬರುವುದರಿಂದಾಗಿ ಈ ಕೊಳ ನಿರ್ಮಾಣಗೊಂಡಿದೆ. ಹೀಗೆ ನೀರು ಸಹ ಇದರ ಒಳಗೆ ಹರಿಯುವುದರಿಂದಾಗಿ ಮವ್‍ಮುಲಹ್ ಗುಹೆಯು, ಮವ್‍ಸ್ಮೈ ಗುಹೆಗಿಂತ ಭಿನ್ನವಾಗಿದೆ ಹಾಗು ಅಪಾಯಕಾರಿಯಾಗಿದೆ ( ಆದರೆ ಸಾಹಸ ಮನೋಭಾವದವರಿಗೆ ಹೇಳಿ ಮಾಡಿಸಿದ ತಾಣವಾಗಿ ಈ ಗುಹೆ ರೂಪುಗೊಂಡಿದೆ). ಈ ಎಲ್ಲ ಕಾರಣಗಳಿಂದಾಗಿ ಈ ಗುಹೆಯ ಒಳಗೆ ಹೋಗಲು ಅಗತ್ಯ ಸುರಕ್ಷಿತಾ ಕ್ರಮಗಳನ್ನು ಮತ್ತು ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವುದು ಅತ್ಯಾವಶ್ಯಕ.
ಮಾವ್‍ಮುಲಹ್‍ಗೆ ತಲುಪಲು ಶಿಲ್ಲಾಂಗ್‍ನಿಂದ ಪ್ರವಾಸಿ ಕ್ಯಾಬ್ ಮೂಲಕ ಹೋಗುವುದು ಅತ್ಯುತ್ತಮ ಹಾಗು ಸುರಕ್ಷಿತ ಮಾರ್ಗವಾಗಿದೆ.


Click it and Unblock the Notifications