Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿರಾಪುಂಜಿ » ಆಕರ್ಷಣೆಗಳು » ನೊಹ್‍ಕಲಿಕೈ ಜಲಪಾತ

ನೊಹ್‍ಕಲಿಕೈ ಜಲಪಾತ, ಚಿರಾಪುಂಜಿ

3

ನೊಹ್‍ಕಲಿಕೈ ಜಲಪಾತವು ಚಿರಾಪುಂಜಿಗೆ ಸಮೀಪದಲ್ಲಿರುವ ಭಾರತದ ಅತ್ಯಂತ ಎತ್ತರವಾದ ಜಲಪಾತವಾಗಿದೆ. ಚಿರಾಪುಂಜಿಯು ವರ್ಷಪೂರ್ತಿ ಮಳೆಯನ್ನು ಕಾಣುವ ಸ್ಥಳ. ಹಾಗಾಗಿ ಈ ಜಲಪಾತವು ವರ್ಷಪೂರ್ತಿ ಧುಮ್ಮಿಕ್ಕಿ ಹರಿಯುತ್ತಲೆ ಇರುತ್ತದೆ. ಆದಾಗಿಯೂ ಒಣ ಹವೆಯಿರುವ ಡಿಸೆಂಬರ್ ನಿಂದ ಫೆಬ್ರವರಿ ತಿಂಗಳುಗಳ ಕೆಲ ದಿನಗಳಲ್ಲಿ ಈ ಜಲಪಾತವು ಸಹ ಇಂಗಿ ಹೋಗುತ್ತದೆ. ಈ ಜಲಪಾತದ ಕೆಳಗೆ ಒಂದು ಸುಂದರವಾದ ಕೊಳ ನಿರ್ಮಾಣವಾಗಿದ್ದು, ಸದಾ ಹಸಿರಿನಿಂದ ಕೂಡಿರುತ್ತದೆ. ದಂತಕಥೆಯ ಪ್ರಕಾರ ಈ ಜಲಪಾತದ ಪಕ್ಕದಲ್ಲಿರುವ ಶಿಖರದ ತುದಿಯಿಂದ ಕ ಲಿಕೈ ಎಂಬ ಹುಡುಗಿಯೊಬ್ಬಳು ಕೆಳಕ್ಕೆ ಹಾರಿದಳಂತೆ, ಹಾಗಾಗಿ ಈ ಜಲಪಾತಕ್ಕೆ ನೊಹ್‍ಕಲಿಕೈ ಎಂಬ ಹೆಸರು ಬಂದಿತಂತೆ.

ಹಿಂದೆ ನೊಹ್‍ಕಲಿಕೈ ಜಲಪಾತವನ್ನು ದೂರದಿಂದ ಮಾತ್ರ ನೋಡಲು ಸಾಧ್ಯವಿತ್ತು. ಆದರೆ ಇಂದು ಜಲಪಾತವನ್ನು ನೋಡಲು ಮೆಟ್ಟಿಲುಗಳ ವ್ಯವಸ್ಥೆ ಮಾಡಲಾಗಿದೆ. ಈ ಮೆಟ್ಟಿಲುಗಳು ನಿಮ್ಮನ್ನು ಸೀದಾ ಜಲಪಾತದ ಬುಡಕ್ಕೆ ಕರೆದೊಯ್ಯುತ್ತವೆ. ಆದರೆ ಆಸ್ತಮ,ಉಬ್ಬಸ ಇತ್ಯಾದಿ ಸಮಸ್ಯೆ ಇರುವ ಪ್ರವಾಸಿಗರು ಇಲ್ಲಿಗೆ ಇಳಿದು ಹೋಗದಿದ್ದರೆ ಒಳ್ಳೆಯದು. ಏಕೆಂದರೆ ನೂರಾರು ಮೆಟ್ಟಿಲುಗಳನ್ನು ಮತ್ತೆ ಏರಿ ಬರುವುದು ಕಷ್ಟದ ಕೆಲಸ.

ಇಲ್ಲಿ ಹಲವಾರು ಊಟ- ತಿಂಡಿಯನ್ನು ಒದಗಿಸುವ ಉಪಾಹಾರ ಮಂದಿರಗಳು ಇವೆ. ಸ್ಥಳೀಯ ಖಾಸಿ ಖಾದ್ಯಗಳಿಂದ ಹಿಡಿದು, ಉತ್ತರ ಮತ್ತು ದಕ್ಷಿಣ ಭಾರತದ ಖಾದ್ಯಗಳವರೆಗೆ ಹಾಗು ಚೈನಿಸ್ ನೂಡಲ್ಸ್ ಸಹ ಇಲ್ಲಿ ದೊರೆಯುತ್ತವೆ. ಇಲ್ಲಿರುವ ಸಣ್ಣ ಅಂಗಡಿಗಳಲ್ಲಿ ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು ಬೇಕಾದರೆ ಕೊಳ್ಳಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed