Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿರಾಪುಂಜಿ » ಆಕರ್ಷಣೆಗಳು » ಕೈನ್ರೆಮ್ ಜಲಪಾತ

ಕೈನ್ರೆಮ್ ಜಲಪಾತ, ಚಿರಾಪುಂಜಿ

1

ಕೈನ್ರೆಮ್ ಜಲಪಾತವು ಭಾರತದ ಏಳನೆಯ ಅತಿ ಎತ್ತರ ಹೊಂದಿರುವ ಜಲಪಾತವಾಗಿದೆ. ಸೊಹ್ರಾದ (ಚಿರಾಪುಂಜಿ) ಬೆಟ್ಟಗಳಿಂದ ಈ ಜಲಪಾತವು ಮೂರು ಹಂತಗಳಲ್ಲಿ ಧುಮ್ಮಿಕ್ಕುತ್ತದೆ. ಮಳೆಗಾಲದಲ್ಲಿ ಕೈನ್ರೆಮ್ ಜಲಪಾತಕ್ಕೆ ಸಮಾನಾಂತರವಾಗಿ ಹಲವಾರು ಸಣ್ಣ ಪುಟ್ಟ ಜಲಪಾತಗಳು ಧುಮುಕುವ ದೃಶ್ಯವು ವರ್ಣನೆಗೆ ನಿಲುಕದಂತಹವುಗಳಾಗಿವೆ. ಈ ಜಲಪಾತದ ಸೌಂದರ್ಯವನ್ನು ಸವಿಯಲು ತಂಗ್‍ಖಾರಂಗ್ ಉದ್ಯಾನವನವು ಹೇಳಿ ಮಾಡಿಸಿದ ಸ್ಥಳವಾಗಿದೆ. ಆದರೆ ಸಾಹಸಿಗರಾದವರು ಚಿರಾಪುಂಜಿಯನ್ನು ಬಾಂಗ್ಲದೇಶ್ ಜೊತೆಗೆ ಸಂಪರ್ಕಿಸುವ ರಸ್ತೆಯ ಮೂಲಕ ಹಾದು ಈ ಜಲಪಾತದ ಬುಡವನ್ನು ತಲುಪಬಹುದು.

ಚಿರಾಪುಂಜಿಯು ಅತಿಯಾದ ಮಳೆಗೆ ಖ್ಯಾತಿ ಪಡೆದಿದೆ. ಇಲ್ಲಿ ಅವ್ಯಾಹತವಾಗಿ ಸುರಿಯುವ ಮಳೆಯು ಯಾವ ಬೆಟ್ಟದ ಮೇಲೆ ಬಿದ್ದರು ಅದು ಕೆಳಗೆ ಬಂಡೆಗಳ ಮೇಲೆ ಹರಿದು ಹೋಗುವಾಗ ಒಂದು ಜಲಪಾತವನ್ನು ಸೃಷ್ಟಿಸುತ್ತದೆ. ಸದಾ ಸುರಿಯುವ ಮಳೆಯು ಈ ಜಲಪಾತಗಳನ್ನು ಜೀವಂತವಾಗಿಡುತ್ತದೆ. ಕೈನ್ರೆಮ್ ಜಲಪಾತವನ್ನು ವೀಕ್ಷಿಸಲು ಮಳೆಗಾಲವು ಹೇಳಿ ಮಾಡಿಸಿದ ಸಮಯವಾಗಿರುತ್ತದೆ. ಚಳಿಗಾಲದಲ್ಲಿ ಈ ಜಲಪಾತವು ಬತ್ತಿ ಹೋಗುತ್ತದೆ. ಅಲ್ಲದೆ ಮಳೆಗಾಲದಲ್ಲಿ ಸಮೀಪದಲ್ಲಿ ಹೇಳ ಹೆಸರಿಲ್ಲದಂತೆ ಧುಮ್ಮಿಕ್ಕುವ, ಅನಾಮಧೇಯ ಜಲಪಾತಗಳು ನಿಮ್ಮ ಮನಸೂರೆಗೊಳ್ಳುತ್ತವೆ.

ಕೈನ್ರೆಮ್ ಜಲಪಾತ ಅಥವಾ ತಂಗ್‍ಖಾರಂಗ್ ಉದ್ಯಾನವನ ತಲುಪಲು ಶಿಲ್ಲಾಂಗ್‍ನಿಂದ ಹೊರಡುವ ಮೇಘಾಲಯ ಪ್ರವಾಸೋದ್ಯಮ ಇಲಾಖೆಯ ಬಸ್ ಅಥವ ಕ್ಯಾಬ್‍ಗಳು ಉತ್ತಮ ಆಯ್ಕೆಯಾಗಿವೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat